ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?(T-37)

ಪ್ರಶ್ನೆ: ಕುಟುಂಬಗಳಿಗೆ, ಹದಿವಯಸ್ಸಿನವರಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡುವ ಭರವಸಾರ್ಹ ಮಾಹಿತಿಯನ್ನು ಎಲ್ಲಿ ಕಂಡುಕೊಳ್ಳಬಹುದು? ನಾವು ಇದನ್ನು ಕಂಡುಕೊಳ್ಳಲು ಜನರಿಗೆ ಸಹಾಯಮಾಡುತ್ತಿದ್ದೇವೆ. [ಮನೆಯವನು ಆಸಕ್ತಿ ತೋರಿಸುವುದಾದರೆ ಕರಪತ್ರವನ್ನು ನೀಡಿ.]

ಕರಪತ್ರ ಕೊಡುವಾಗ ಹೀಗೆ ಹೇಳಿ: [2​ನೇ ಪುಟ ತೋರಿಸಿ] ಹೆಚ್ಚಿನ ಮಾಹಿತಿ ನೀಡುವ ವಿಡಿಯೋ ಮತ್ತು ಲೇಖನಗಳು jw.orgನಲ್ಲಿವೆ.

ವಚನ: ಕೀರ್ತ 119:105

ಸತ್ಯವನ್ನು ಕಲಿಸಿ

ಪ್ರಶ್ನೆ: ಬೈಬಲಿನಲ್ಲಿ ಹೇಳಿರುವ ಯಾವುದಾದರೊಂದು ವಿಷಯ ಸುಳ್ಳೆಂದು ವಿಜ್ಞಾನ ರುಜುಪಡಿಸಿದೆಯಾ? ನಿಮಗೇನು ಅನಿಸುತ್ತೆ?

ವಚನ: ಯೆಶಾ 40:22

ಸತ್ಯ: ಬೈಬಲ್‌ನಲ್ಲಿ ಹೇಳಲಾಗಿರುವ ವೈಜ್ಞಾನಿಕ ವಿಷಯಗಳು ನಿಖರವಾಗಿವೆ.

ಸಭಾ ಕೂಟದ ಆಮಂತ್ರಣ ಪತ್ರ (inv)

ಆಮಂತ್ರಣ ಪತ್ರ ಕೊಡುವಾಗ ಹೀಗೆ ಹೇಳಿ: ಒಂದು ಉಚಿತ ಬೈಬಲಾಧಾರಿತ ಭಾಷಣಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ. ಇದು ನಮ್ಮ ಕೂಟಗಳು ನಡೆಯುವ ಸ್ಥಳವಾದ ರಾಜ್ಯ ಸಭಾಗೃಹದಲ್ಲಿ ನಡೆಯುತ್ತದೆ. [ಕೂಟದ ಆಮಂತ್ರಣ ಪತ್ರ ನೀಡಿ, ಭಾನುವಾರ ನಡೆಯುವ ಕೂಟದ ಸಮಯ ಮತ್ತು ವಿಳಾಸ ತೋರಿಸಿ, ಸಾರ್ವಜನಿಕ ಭಾಷಣದ ಶೀರ್ಷಿಕೆಯನ್ನು ತಿಳಿಸಿ.]

ಪ್ರಶ್ನೆ: ನೀವು ಯಾವಾಗಾದ್ರೂ ರಾಜ್ಯ ಸಭಾಗೃಹಕ್ಕೆ ಹೋಗಿದ್ದೀರಾ? [ಪರಿಸ್ಥಿತಿ ಅನುಮತಿಸಿದರೆ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋ ತೋರಿಸಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

 

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.