ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ

ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ

ಒಬ್ಬ ಹೊಸ ಪ್ರಚಾರಕನಿಗೆ ಸೇವೆಯಲ್ಲಿ ಕ್ರಮವಾಗಿ ಮತ್ತು ಹರುಪಿನಿಂದ ಭಾಗವಹಿಸಲು ಆರಂಭದಿಂದಲೇ ತರಬೇತಿ ನೀಡಬೇಕು. ಆಗ ಅವನು ನಿಪುಣ ಪ್ರಚಾರಕನಾಗುತ್ತಾನೆ ಎಂದು ಅನೇಕ ಅನುಭವಗಳಿಂದ ಗೊತ್ತಾಗಿದೆ. (ಜ್ಞಾನೋ 22:6; ಫಿಲಿ 3:16) ಉತ್ತಮ ರೀತಿಯಲ್ಲಿ ಸೇವೆ ಮಾಡುವುದನ್ನು ವಿದ್ಯಾರ್ಥಿಗೆ ಕಲಿಸಲು ನಿಮಗೆ ಈ ಸಲಹೆಗಳು ಸಹಾಯಮಾಡುತ್ತವೆ:

  • ನಿಮ್ಮ ವಿದ್ಯಾರ್ಥಿಯು ಯಾವಾಗ ಪ್ರಚಾರಕನಾಗುವ ಅರ್ಹತೆ ಪಡೆಯುತ್ತಾನೋ ಆಗಿನಿಂದಲೇ ತರಬೇತಿ ಕೊಡಲು ಆರಂಭಿಸಿ. (km 8/15 ಪು. 1) ಪ್ರತಿ ವಾರ ಸೇವೆಯಲ್ಲಿ ಭಾಗವಹಿಸುವ ರೂಢಿಯನ್ನು ಬೆಳೆಸಿಕೊಳ್ಳುವುದರ ಪ್ರಾಮುಖ್ಯತೆಯನ್ನು ಅವನಿಗೆ ಅರ್ಥ ಮಾಡಿಸಿ. (ಫಿಲಿ 1:10) ಟೆರಿಟೊರಿಯ ಬಗ್ಗೆ ಯಾವಾಗಲೂ ಸಕಾರಾತ್ಮಕವಾಗಿ ಮಾತಾಡಿ. (ಫಿಲಿ 4:8) ಗುಂಪು ಮೇಲ್ವಿಚಾರಕನೊಂದಿಗೆ ಮತ್ತು ಇತರ ಪ್ರಚಾರಕರೊಂದಿಗೆ ಸೇವೆಮಾಡಲು ಅವನಿಗೆ ಪ್ರೋತ್ಸಾಹ ನೀಡಿ. ಹೀಗೆ ಅವರ ಅನುಭವಗಳಿಂದ ನಿಮ್ಮ ವಿದ್ಯಾರ್ಥಿ ಪ್ರಯೋಜನ ಪಡೆಯಬಹುದು.—ಜ್ಞಾನೋ 1:5; km 10/12 ಪು. 6, ಪ್ಯಾ. 3

  • ನಿಮ್ಮ ವಿದ್ಯಾರ್ಥಿ ದೀಕ್ಷಾಸ್ನಾನ ಪಡೆದ ನಂತರ ಸೇವೆಯಲ್ಲಿ ಪ್ರೋತ್ಸಾಹ ಮತ್ತು ತರಬೇತಿ ಕೊಡುವುದನ್ನು ನಿಲ್ಲಿಸಬೇಡಿ. ಅದರಲ್ಲೂ ವಿಶೇಷವಾಗಿ “ದೇವರ ಪ್ರೀತಿ” ಪುಸ್ತಕದ ಅಧ್ಯಯನ ಮುಗಿಯದಿದ್ದರೆ ಇದನ್ನು ತಪ್ಪದೇ ಮಾಡಿ. —km 12/13 ಪು. 7

  • ಹೊಸ ಪ್ರಚಾರಕನೊಂದಿಗೆ ಸೇವೆಮಾಡುವಾಗ ಸರಳ ನಿರೂಪಣೆಯನ್ನು ಬಳಸಿ. ಅವನ ನಿರೂಪಣೆಯನ್ನು ಕೇಳಿದ ನಂತರ ಉದಾರವಾಗಿ ಶ್ಲಾಘಿಸಿ. ಇನ್ನೂ ಹೆಚ್ಚು ನಿಪುಣನಾಗಲು ಸಲಹೆಗಳನ್ನು ಕೊಡಿ.—km 5/10 ಪು. 7