ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಮದುವೆ—ಒಂದು ಶಾಶ್ವತ ಬಂಧ

ಮದುವೆ—ಒಂದು ಶಾಶ್ವತ ಬಂಧ

ಸಂಸಾರದ ದೋಣಿ ಚೆನ್ನಾಗಿ ಸಾಗುತ್ತಿದ್ರೆ ಅದ್ರಿಂದ ಯೆಹೋವನಿಗೆ ಗೌರವ ಸಿಗುತ್ತೆ, ಗಂಡ ಹೆಂಡತಿ ಸಂತೋಷವಾಗಿ ಇರುತ್ತಾರೆ. (ಮಾರ್ಕ 10:9) ಕ್ರೈಸ್ತರು ಬಾಳ ಸಂಗಾತಿಯನ್ನ ಆರಿಸಿಕೊಳ್ಳುವಾಗ ಬೈಬಲ್‌ ಮೂಲತತ್ತ್ವಗಳನ್ನ ಪಾಲಿಸಿದ್ರೆ, ಅವರ ಮದುವೆ ಬಂಧ ಶಾಶ್ವತವಾಗಿರುತ್ತೆ, ಜೀವನ ಸಂತೋಷವಾಗಿರುತ್ತೆ.

‘ಲೈಂಗಿಕ ಆಸೆಗಳನ್ನ ಹತೋಟಿಯಲ್ಲಿ ಇಡೋಕೆ ಆಗದಿರೋ ಯುವಪ್ರಾಯ ದಾಟಿದ‘ ಮೇಲೆ ಮದುವೆಯಾಗೋಕೆ ಯೋಚಿಸಿದ್ರೆ ಒಳ್ಳೇದು. ಆಗ ಸರಿಯಾಗಿ ನಿರ್ಧಾರ ಮಾಡೋಕೆ ಆಗುತ್ತೆ. (1ಕೊರಿಂ 7:36) ನಿಮಗೆ ಇನ್ನೂ ಮದುವೆ ಆಗಿಲ್ಲಾಂದ್ರೆ ಈ ಸಮಯವನ್ನ ಯೆಹೋವನ ಜೊತೆ ನಿಮಗಿರೋ ಸ್ನೇಹನ ಗಟ್ಟಿಮಾಡಿಕೊಳ್ಳೋಕೆ ಮತ್ತು ಆತನಿಗೆ ಇಷ್ಟವಾಗೋ ಗುಣಗಳನ್ನ ಬೆಳೆಸಿಕೊಳ್ಳೋಕೆ ಉಪಯೋಗಿಸಿಕೊಳ್ಳಿ. ಇದ್ರಿಂದ ಮುಂದೆ ನಿಮ್ಮ ಕುಟುಂಬ ಜೀವನವನ್ನ ಚೆನ್ನಾಗಿ ನಡೆಸೋಕೆ ಆಗುತ್ತೆ.

ನೀವು ಒಬ್ಬರನ್ನ ಮದುವೆಯಾಗೋಕೆ ಒಪ್ಪಿಕೊಳ್ಳೋಕೂ ಮುಂಚೆ ಅವರು “ಹೃದಯದಲ್ಲಿ” ಎಂಥವರಾಗಿದ್ದಾರೆ ಅಂತ ತಿಳಿದುಕೊಳ್ಳಿ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. (1ಪೇತ್ರ 3:4) ನಿಮಗೆ ಅವರಲ್ಲಿ ಏನಾದರೂ ಕುಂದುಕೊರತೆಗಳು ಕಂಡ್ರೆ, ಮುಂದೆ ಅದ್ರಿಂದ ದೊಡ್ಡ ಸಮಸ್ಯೆ ಆಗುತ್ತೆ ಅಂತ ಅನಿಸಿದ್ರೆ, ಅದರ ಬಗ್ಗೆ ಅವರ ಜೊತೆ ಮಾತಾಡಿ. ಬೇರೆ ಸ್ನೇಹ ಸಂಬಂಧಗಳ ತರಾನೇ ಮದುವೆಯ ಬಂಧದಲ್ಲೂ, ಸಂಗಾತಿಯಿಂದ ನಿಮಗೆ ಏನು ಸಿಗುತ್ತೆ ಅಂತ ಅಲ್ಲ, ನಿಮ್ಮಿಂದ ಅವರಿಗೆ ಏನು ಕೊಡೋಕೆ ಆಗುತ್ತೆ ಅಂತ ಯೋಚಿಸಬೇಕು. (ಫಿಲಿ 2:3, 4) ಮದುವೆ ಮುಂಚೆನೇ ನೀವು ಬೈಬಲ್‌ ತತ್ವಗಳನ್ನ ಪಾಲಿಸಿದ್ರೆ, ಮುಂದೆ ಕುಟುಂಬ ಜೀವನ ನಡೆಸೋಕೆ ಒಳ್ಳೇ ಅಸ್ತಿವಾರ ಹಾಕೋಕೆ ಆಗುತ್ತೆ.

ಮದುವೆ ಜೀವನಕ್ಕಾಗಿ ತಯಾರಿ—ಭಾಗ 3: ‘ಮೊದಲು ಕೂತು ಲೆಕ್ಕ ಹಾಕಿ’ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಶೇನ್‌ ಜೊತೆ ಸಹೋದರಿಯ ಸಂಬಂಧ ಹೇಗೆ ಬೆಳೀತು?

  • ಅವನ ಬಗ್ಗೆ ತಿಳಿದುಕೊಳ್ತಾ ಹೋದ ಹಾಗೆ ಆ ಸಹೋದರಿ ಏನನ್ನ ಗಮನಿಸಿದಳು?

  • ಹೆತ್ತವರು ಅವಳಿಗೆ ಹೇಗೆ ಸಹಾಯ ಮಾಡಿದರು ಮತ್ತು ಅವಳು ವಿವೇಕದಿಂದ ಯಾವ ತೀರ್ಮಾನ ಮಾಡಿದಳು?