ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಹೊಸಲೋಕ ಹತ್ತಿರವಿದೆ ಅನ್ನೋ ಸಿಹಿಸುದ್ದಿ ಸಾರಿ

ಹೊಸಲೋಕ ಹತ್ತಿರವಿದೆ ಅನ್ನೋ ಸಿಹಿಸುದ್ದಿ ಸಾರಿ

ಈ ನವೆಂಬರ್‌ ತಿಂಗಳ ಅಭಿಯಾನದಲ್ಲಿ ಹೊಸಲೋಕ ಹತ್ತಿರವಿದೆ ಅನ್ನೋ ಸಿಹಿಸುದ್ದಿ ಸಾರುತ್ತೀವಿ. (ಕೀರ್ತ 37:10, 11; ಪ್ರಕ 21:3-5) ಈ ಅಭಿಯಾನದಲ್ಲಿ ಚೆನ್ನಾಗಿ ಭಾಗವಹಿಸೋಕೆ ನಿಮ್ಮ ಕೆಲಸ-ಕಾರ್ಯಗಳನ್ನ ಸ್ವಲ್ಪ ಹೊಂದಿಸಿಕೊಳ್ಳಿ. ಈ ತಿಂಗಳಲ್ಲಿ ಸಹಾಯಕ ಪಯನೀಯರ್‌ ಸೇವೆ ಮಾಡೋ ಅವಕಾಶನೂ ಇದೆ. ನೀವು 30 ಅಥವಾ 50 ತಾಸು ಸೇವೆ ಮಾಡಬಹುದು.

ಹೊಸಲೋಕದ ಬಗ್ಗೆ ಆದಷ್ಟು ಹೆಚ್ಚು ಜನರ ಹತ್ರ ಮಾತಾಡೋ ಗುರಿ ಇಡಿ. ನಿಮ್ಮ ಟೆರಿಟೊರಿಯ ಜನರಿಗೆ ಸೂಕ್ತವಾಗಿರೋ ಒಂದು ಬೈಬಲ್‌ ವಚನ ತೋರಿಸಿ. ಮೊದಲ ಭೇಟಿಯಲ್ಲೇ ಆಸಕ್ತಿ ತೋರಿಸುವವರಿಗೆ 2021ರ ಕಾವಲಿನಬುರುಜು ನಂ. 2 ಪತ್ರಿಕೆ ಕೊಡಿ. ಆದಷ್ಟು ಬೇಗ ಅವರನ್ನು ಮತ್ತೆ ಭೇಟಿ ಮಾಡಿ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಿಂದ ಬೈಬಲ್‌ ಸ್ಟಡಿ ಮಾಡಿ. “ಒಳ್ಳೇ ವಿಷ್ಯಗಳ ಬಗ್ಗೆ ಸಿಹಿಸುದ್ದಿ” ಸಾರುವಾಗ ನಮಗೆಷ್ಟು ಖುಷಿ ಆಗುತ್ತಲ್ವಾ!—ಯೆಶಾ 52:7.

ಹೊಸಲೋಕದಲ್ಲಿ . . . ಅನ್ನೋ ಬ್ರಾಡ್‌ಕಾಸ್ಟಿಂಗ್‌ ಹಾಡಿನ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಯಾವ ಒಳ್ಳೇ ಭವಿಷ್ಯದ ಬಗ್ಗೆ ಆ ಚಿಕ್ಕ ಹುಡುಗಿ ಕನಸು ಕಾಣ್ತಿದ್ದಾಳೆ?

  • ಹೊಸಲೋಕದಲ್ಲಿ ನೀವು ಯಾವುದಕ್ಕಾಗಿ ಕಾಯ್ತಾ ಇದ್ದೀರಾ?

  • ನಿಮ್ಮ ನಿರೀಕ್ಷೆ ಬಗ್ಗೆ ಧ್ಯಾನಿಸೋದು ನವೆಂಬರ್‌ ತಿಂಗಳ ಅಭಿಯಾನದಲ್ಲಿ ನಿಮಗೆ ಹೇಗೆ ಸಹಾಯಮಾಡುತ್ತೆ?—ಲೂಕ 6:45