ಮೇ 19-25
ಜ್ಞಾನೋಕ್ತಿ 14
ಗೀತೆ 89 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ವಿಪತ್ತುಗಳು ಬಂದಾಗ ಏನೇ ಮಾಡಬೇಕಾದ್ರೂ ಚೆನ್ನಾಗಿ ಯೋಚ್ನೆ ಮಾಡಿ
(10 ನಿ.)
“ಹೇಳಿದ್ದನ್ನೆಲ್ಲ ಕಣ್ಮುಚ್ಚಿ” ನಂಬಬೇಡಿ (ಜ್ಞಾನೋ 14:15; w23.02 23 ¶10-12)
ನಿಮ್ಮ ಅನುಭವ ಮತ್ತು ಅನಿಸಿಕೆಗಳ ಆಧಾರದ ಮೇಲೆ ನಿರ್ಧಾರ ಮಾಡಬೇಡಿ (ಜ್ಞಾನೋ 14:12)
ಯೆಹೋವನ ಸಂಘಟನೆಯ ನಿರ್ದೇಶನಗಳನ್ನ ಪಾಲಿಸದೇ ಇರೋರ ಮಾತನ್ನ ಕೇಳಬೇಡಿ (ಜ್ಞಾನೋ 14:7)
ನಿಮ್ಮನ್ನೇ ಕೇಳಿಕೊಳ್ಳಿ, ಹಿರಿಯರೇ, ವಿಪತ್ತುಗಳು ಬಂದಾಗ ನಿರ್ದೇಶನಗಳನ್ನ ಪಾಲಿಸೋಕೆ ಮತ್ತು ಯೆಹೋವನ ಮೇಲೆ ಭರವಸೆ ಇಡೋಕೆ ನೀವು ರೆಡಿ ಇದ್ದೀರಾ?—w24.07 5 ¶11.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಜ್ಞಾನೋ 14:17—“ವಿಷ್ಯಗಳನ್ನ ಜಾಗರೂಕತೆಯಿಂದ ತೂಗಿನೋಡುವವನು ದ್ವೇಷಕ್ಕೆ ಗುರಿ ಆಗ್ತಾನೆ” ಹೇಗೆ? (it-2-E 1094)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 14:1-21 (th ಪಾಠ 11)
4. ಸಂಭಾಷಣೆ ಶುರುಮಾಡಿ
(3 ನಿ.) ಸಾರ್ವಜನಿಕ ಸಾಕ್ಷಿ. ಆರ್ಥಿಕ ಸ್ಥಿತಿ ಬಗ್ಗೆ ಯೋಚ್ನೆ ಮಾಡ್ತಿರೋ ಒಬ್ಬ ವ್ಯಕ್ತಿಗೆ ಬೈಬಲಿನಿಂದ ಒಂದು ವಿಷ್ಯ ತಿಳಿಸಿ. (lmd ಪಾಠ 3 ಪಾಯಿಂಟ್ 3)
5. ಮತ್ತೆ ಭೇಟಿ ಮಾಡಿ
(4 ನಿ.) ಮನೆ-ಮನೆ ಸೇವೆ. ಹೋದ ಸಲ ಮಾತಾಡಿದಾಗ ವ್ಯಕ್ತಿ ಯಾವ ವಿಷ್ಯದಲ್ಲಿ ಆಸಕ್ತಿ ತೋರಿಸಿದನೋ ಅದ್ರ ಬಗ್ಗೆ ಇರೋ ಒಂದು ಪತ್ರಿಕೆ ಕೊಡಿ. (lmd ಪಾಠ 9 ಪಾಯಿಂಟ್ 4)
6. ಶಿಷ್ಯರಾಗೋಕೆ ಕಲಿಸಿ
(5 ನಿ.) ಬೈಬಲ್ ವಿದ್ಯಾರ್ಥಿಗೆ ಪ್ರತಿದಿನ ಬೈಬಲ್ ಓದೋಕೆ ಪ್ರೋತ್ಸಾಹಿಸಿ ಮತ್ತು ಆ ಗುರಿ ಮುಟ್ಟೋಕೆ ಏನು ಮಾಡಬೇಕು ಅಂತ ಹೇಳಿ. (th ಪಾಠ 19)
ಗೀತೆ 126
7. ವಿಪತ್ತುಗಳನ್ನ ಎದುರಿಸೋಕೆ ರೆಡಿಯಾಗಿರಿ
(15 ನಿ.) ಚರ್ಚೆ.
ಒಬ್ಬ ಹಿರಿಯ ನಡೆಸಬೇಕು. ವಿಪತ್ತುಗಳ ಬಗ್ಗೆ ಬ್ರಾಂಚ್ ಮತ್ತು ಹಿರಿಯ ಮಂಡಲಿ ಏನಾದ್ರೂ ಮರುಜ್ಞಾಪನಗಳನ್ನ ಕೊಟ್ಟಿದ್ರೆ ಅದ್ರ ಬಗ್ಗೆನೂ ಹೇಳಿ.
“ಕೊನೇ ದಿನಗಳಲ್ಲಿ” ಸಮಸ್ಯೆಗಳು ಜಾಸ್ತಿ ಆಗುತ್ತೆ ಅಂತ ನಮಗೆ ಗೊತ್ತು. (2ತಿಮೊ 3:1; ಮತ್ತಾ 24:8ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ) ವಿಪತ್ತುಗಳು ಎದುರಾದಾಗ ಯೆಹೋವನ ಜನರಿಗೆ ತಮ್ಮ ಜೀವ ಕಾಪಾಡಿಕೊಳ್ಳೋಕೆ ಬೇಕಾದ ನಿರ್ದೇಶನಗಳು ಸರಿಯಾದ ಸಮಯಕ್ಕೆ ಸಿಗುತ್ತೆ. ಆ ವಿಪತ್ತನ್ನ ಎದುರಿಸೋಕೆ ನಾವು ಈಗಲೇ ರೆಡಿ ಆಗಿದ್ರೆ, ನಮ್ಮ ನಂಬಿಕೆಯನ್ನ ಗಟ್ಟಿ ಮಾಡ್ಕೊಂಡಿದ್ರೆ ನಮ್ಮ ಜೀವ ಉಳಿಯುತ್ತೆ.—ಜ್ಞಾನೋ 14:6, 8.
-
ಆಧ್ಯಾತ್ಮಿಕವಾಗಿ ಸಿದ್ಧರಾಗಿರಿ: ಬೈಬಲನ್ನ ಓದೋ ಮತ್ತು ವೈಯಕ್ತಿಕ ಅಧ್ಯಯನ ಮಾಡೋ ರೂಢಿ ಬೆಳೆಸಿಕೊಳ್ಳಿ. ಬೇರೆ ಬೇರೆ ವಿಧಾನದ ಸೇವೆ ಹೇಗೆ ಮಾಡೋದು ಅಂತ ಕಲಿರಿ. ಸ್ವಲ್ಪ ದಿನ ಸಭೆಯವರಿಂದ ದೂರ ಇರಬೇಕಾಗಿ ಬಂದರೆ ಭಯ ಪಡಬೇಡಿ. (ಜ್ಞಾನೋ 14:30) ಯೆಹೋವ ಮತ್ತು ಕ್ರಿಸ್ತ ಯೇಸು ಯಾವಾಗ್ಲೂ ನಿಮ್ಮ ಜೊತೆನೇ ಇರ್ತಾರೆ ಅನ್ನೋದನ್ನ ಮರೀಬೇಡಿ.—od 168-169 ¶15-17
-
ಶಾರೀರಿಕವಾಗಿ ಸಿದ್ಧರಾಗಿರಿ: ಪ್ರತಿಯೊಬ್ಬರೂ ಗೋ ಬ್ಯಾಗ್ ಜೊತೆಗೆ ನಿಮ್ಗೆ ಬೇಕಾಗಿರೋ ಆಹಾರ ಸಾಮಗ್ರಿ, ನೀರು, ಔಷಧಿ ಇರೋ ತರ ನೋಡ್ಕೊಳ್ಳಿ. ಒಂದುವೇಳೆ ಜಾಸ್ತಿ ಸಮಯ ಒಂದು ಜಾಗದಲ್ಲಿ ಇರಬೇಕಾದ ಪರಿಸ್ಥಿತಿ ಬಂದ್ರೆ ಅದಕ್ಕೆ ಬೇಕಾಗಿರೋ ವಸ್ತುಗಳನ್ನೂ ಇಟ್ಕೊಳ್ಳಿ.—ಜ್ಞಾನೋ 22:3; g17.5-E 4
ವಿಪತ್ತನ್ನ ಎದುರಿಸೋಕೆ ನೀವು ಸಿದ್ಧರಾಗಿದ್ದೀರಾ? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
-
ವಿಪತ್ತುಗಳು ಬಂದಾಗ ಯೆಹೋವ ದೇವರು ಹೇಗೆ ನಮ್ಗೆ ಸಹಾಯ ಮಾಡ್ತಾನೆ?
-
ವಿಪತ್ತನ್ನ ಎದುರಿಸೋಕೆ ನಾವು ಯಾವೆಲ್ಲಾ ಹೆಜ್ಜೆಗಳನ್ನ ತಗೊಬೇಕು?
-
ವಿಪತ್ತಿನಿಂದ ತೊಂದ್ರೆ ಆದವರಿಗೆ ನಾವು ಹೇಗೆ ಸಹಾಯ ಮಾಡಬಹುದು?
8. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 26 ¶18-22, ಪುಟ 209ರಲ್ಲಿರೋ ಚೌಕ