ಮಾರ್ಚ್ 26–ಏಪ್ರಿಲ್ 1
ಮತ್ತಾಯ 25
ಗೀತೆ 128 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಸದಾ ಎಚ್ಚರವಾಗಿರಿ”: (10 ನಿ.)
ಮತ್ತಾ 25:1-6—ಐದು ಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನೆಯರೂ ಆದ ಕನ್ಯೆಯರು ಮದುಮಗನನ್ನು ಬರಮಾಡಿಕೊಳ್ಳಲು ಹೋದರು
ಮತ್ತಾ 25:7-10—ಮದುಮಗನು ಬಂದಾಗ ಬುದ್ಧಿಹೀನೆಯರಾದ ಕನ್ಯೆಯರು ಇರಲಿಲ್ಲ
ಮತ್ತಾ 25:11, 12—ಬುದ್ಧಿವಂತೆಯರಾದ ಕನ್ಯೆಯರನ್ನು ಮಾತ್ರ ಮದುವೆಯ ಔತಣಕ್ಕೆ ಹೋಗಲು ಅನುಮತಿಸಲಾಯಿತು
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 25:31-33—ಕುರಿ ಮತ್ತು ಆಡುಗಳ ಕುರಿತ ದೃಷ್ಟಾಂತವನ್ನು ವಿವರಿಸಿ. (w15 3/15 ಪುಟ 26 ಪ್ಯಾರ 7)
ಮತ್ತಾ 25:40—ನಾವು ಕ್ರಿಸ್ತನ ಸಹೋದರರ ಕಡೆಗಿನ ಸ್ನೇಹವನ್ನು ಹೇಗೆ ತೋರಿಸಬಲ್ಲೆವು? (w09 10/15 ಪುಟ 16 ಪ್ಯಾರ 16-18)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 25:1-23
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸುತ್ತಾ ಆರಂಭಿಸಿ. ವ್ಯಕ್ತಿಯನ್ನು ಸ್ಮರಣೆಗೆ ಆಮಂತ್ರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ತೋರಿಸಿ. ನಂತರ ನಾವು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಭಾಷಣ: (6 ನಿಮಿಷದೊಳಗೆ) w15 3/15 ಪುಟ 26-27 ಪ್ಯಾರ 7-10—ಮುಖ್ಯ ವಿಷಯ: ಕುರಿ ಮತ್ತು ಆಡುಗಳ ಕುರಿತ ದೃಷ್ಟಾಂತ ಸಾರುವ ಕೆಲಸ ತುಂಬ ಮುಖ್ಯ ಎಂದು ಹೇಗೆ ಒತ್ತಿಹೇಳುತ್ತದೆ?
ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ತಯಾರಿ ಮಾಡುವುದು ಹೇಗೆಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ: (10 ನಿ.) ಚರ್ಚೆ. ಚರ್ಚೆಯ ನಂತರ, ಬೈಬಲ್ ಅಧ್ಯಯನಕ್ಕೆ ತಯಾರಿ ಮಾಡುವುದು ಹೇಗೆಂದು ಒಬ್ಬ ಪ್ರಚಾರಕಿ ತನ್ನ ವಿದ್ಯಾರ್ಥಿಗೆ ಕಲಿಸುವ ವಿಡಿಯೋವನ್ನು ಹಾಕಿ ಚರ್ಚಿಸಿ. ಸಭಿಕರು ಬೇರೆ ಯಾವ ವಿಧಾನ ಬಳಸಿ ತಮ್ಮ ವಿದ್ಯಾರ್ಥಿಗಳಿಗೆ ಬೈಬಲ್ ಅಧ್ಯಯನಕ್ಕೆ ತಯಾರಾಗಲು ಯಶಸ್ವಿಕರವಾಗಿ ಕಲಿಸಿದ್ದಾರೆ ಎಂದು ಕೇಳಿ.
ಅತಿಥಿಗಳನ್ನು ಸ್ವಾಗತಿಸಿ: (5 ನಿ.) 2016ರ ಮಾರ್ಚ್ ಕೈಪಿಡಿಯಲ್ಲಿ ಬಂದ ಲೇಖನದ ಮೇಲೆ ಆಧರಿಸಿದ ಭಾಷಣ. 2017ರ ಸ್ಮರಣೆಯ ಸಮಯದಲ್ಲಿ ಸಿಕ್ಕಿದ ಒಳ್ಳೇ ಅನುಭವಗಳನ್ನು ತಿಳಿಸಿ. ಮಾರ್ಚ್ 31ರಂದು ನಡೆಯಲಿರುವ ಸ್ಮರಣೆಯ ಸಂಬಂಧವಾಗಿ ವಾಹನ ನಿಲುಗಡೆ, ಸಭಾಂಗಣವನ್ನು ಪ್ರವೇಶಿಸುವುದು ಮತ್ತು ನಿರ್ಗಮಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಮರುಜ್ಞಾಪನ ನೀಡಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 16 ಪ್ಯಾರ 1-8
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 27 ಮತ್ತು ಪ್ರಾರ್ಥನೆ