“ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ”
ವಿಮೋಚನಾ ಮೌಲ್ಯ ಯೆಹೋವನ ಉಡುಗೊರೆ. ಆತನ ಹೆಸರಿಗೆ ಬಂದ ಕಳಂಕವನ್ನು ತೆಗೆದುಹಾಕಲು ಮತ್ತು ಆತನಿಗೆ ಆಳುವ ಹಕ್ಕಿದೆ, ಆತನು ಆಳುವ ರೀತಿಯೇ ಅತ್ಯುತ್ತಮ ಎಂದು ಸಾಬೀತು ಮಾಡುವುದರಲ್ಲಿ ವಿಮೋಚನಾ ಮೌಲ್ಯ ತುಂಬ ದೊಡ್ಡ ಪಾತ್ರ ವಹಿಸಿದೆ. ಅಷ್ಟೇ ಅಲ್ಲ, ವಿಮೋಚನಾ ಮೌಲ್ಯದಿಂದ ಈಗ ನಾವು ಯೆಹೋವನ ಸ್ನೇಹಿತರಾಗಲು ಸಾಧ್ಯವಾಗಿದೆ. ದೇವರ ಮಾತನ್ನು ಕೇಳುವ ಜನರಿಗೆ ಮುಂದೆ ಶಾಶ್ವತವಾಗಿ ಜೀವಿಸುವ ಅವಕಾಶ ಸಿಕ್ಕಿದೆ.
ವಿಮೋಚನಾ ಮೌಲ್ಯ ಕೊಟ್ಟ ಯೆಹೋವನಿಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?
-
ಸಮರ್ಪಣೆ ಮಾಡಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ವಿಮೋಚನಾ ಮೌಲ್ಯದ ಮೇಲೆ ನಂಬಿಕೆ ಇದೆ ಮತ್ತು ನಾವು ಯೆಹೋವನಿಗೆ ಸೇರಿದವರಾಗಲು ಬಯಸುತ್ತೇವೆ ಎಂದು ತೋರಿಸಬೇಕು
-
ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಯೆಹೋವನಂತೆ ನಾವು ಕೂಡ ಎಲ್ಲ ರೀತಿಯ ಜನರನ್ನು ಪ್ರೀತಿಸುತ್ತೇವೆ ಎಂದು ತೋರಿಸಬೇಕು.—ಮತ್ತಾ 22:39; ಯೋಹಾ 3:16
ನಾನು ಇನ್ನೂ ಯಾವ ವಿಧಗಳಲ್ಲಿ ಕೃತಜ್ಞತೆ ತೋರಿಸಬಹುದು?