ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಫೆಬ್ರವರಿ 2018
ಮಾದರಿ ಸಂಭಾಷಣೆಗಳು
ಸಂಭಾಷಣೆಗಳು ಈ ಪ್ರಶ್ನೆಗಳ ಮೇಲೆ ಆಧರಿತ: ಬೈಬಲಿನಿಂದ ಇಂದಿಗೂ ಪ್ರಯೋಜನ ಇದೆಯಾ? ವಿಜ್ಞಾನಕ್ಕೆ ಬೈಬಲ್ ಹೊಂದಿಕೆಯಲ್ಲಿದೆಯಾ? ಅದರಲ್ಲಿರುವ ಸಲಹೆಗಳು ಪ್ರಾಯೋಗಿಕವಾಗಿವೆಯಾ?
ಬೈಬಲಿನಲ್ಲಿರುವ ರತ್ನಗಳು
ಗೋದಿ ಮತ್ತು ಕಳೆಗಳ ದೃಷ್ಟಾಂತ
ಈ ದೃಷ್ಟಾಂತದಲ್ಲಿ ಯೇಸು ಏನನ್ನು ತಿಳಿಸುತ್ತಿದ್ದಾನೆ? ಈ ದೃಷ್ಟಾಂತದಲ್ಲಿರುವ ಬೀಜ ಬಿತ್ತುವವನು, ವೈರಿ ಮತ್ತು ಕೊಯ್ಯುವವರು ಯಾರನ್ನು ಸೂಚಿಸುತ್ತಾರೆ?
ನಮ್ಮ ಕ್ರೈಸ್ತ ಜೀವನ
ರಾಜ್ಯದ ಕುರಿತ ದೃಷ್ಟಾಂತಗಳು ಮತ್ತು ಅದರಲ್ಲಿ ನಮಗಿರುವ ಸಂದೇಶ
ಯೇಸು ಆಳವಾದ ಅರ್ಥವಿರುವ ಆಧ್ಯಾತ್ಮಿಕ ಪಾಠಗಳನ್ನು ಕಲಿಸಲು ಸರಳವಾದ ದೃಷ್ಟಾಂತಗಳನ್ನು ಬಳಸಿದನು. ಮತ್ತಾಯ 13ನೇ ಅಧ್ಯಾಯದಿಂದ ನಾವು ಇನ್ನೂ ಯಾವ ಪಾಠಗಳನ್ನು ಕಲಿಯಬಹುದು?
ಬೈಬಲಿನಲ್ಲಿರುವ ರತ್ನಗಳು
ಕೆಲವರ ಕೈಯಿಂದ ಹಲವರಿಗೆ ಉಣಿಸಿದನು
ತನ್ನ ಶಿಷ್ಯರ ಹತ್ತಿರ ಕೇವಲ ಐದು ರೊಟ್ಟಿ ಮತ್ತು ಎರಡು ಮೀನು ಇದ್ದರೂ ಯೇಸು ಸಾವಿರಾರು ಜನರಿರುವ ಒಂದು ದೊಡ್ಡ ಗುಂಪಿಗೆ ಆಹಾರ ಕೊಡುವಂತೆ ಅವರಿಗೆ ಹೇಳಿದನು. ಆಗ ಏನಾಯಿತು ಮತ್ತು ಇದು ನಮಗೆ ಯಾವ ಅರ್ಥದಲ್ಲಿದೆ?
ನಮ್ಮ ಕ್ರೈಸ್ತ ಜೀವನ
‘ನಿಮ್ಮ ತಂದೆತಾಯಿಯನ್ನು ಸನ್ಮಾನಿಸಿ’
ಯೇಸು ‘ತಂದೆತಾಯಿಯನ್ನು ಸನ್ಮಾನಿಸಬೇಕು’ ಎಂಬ ಆಜ್ಞೆಗೆ ಪ್ರಾಮುಖ್ಯತೆ ಕೊಟ್ಟನು. ಹೆತ್ತವರನ್ನು ಸನ್ಮಾನಿಸಬೇಕೆಂಬುದು ಶಾಶ್ವತವಾದ ಆಜ್ಞೆ.
ಬೈಬಲಿನಲ್ಲಿರುವ ರತ್ನಗಳು
ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?
ದೇವರ ಚಿತ್ತದಂತೆ ನಡೆಯಲು ನಾವು ಏನು ಮಾಡಬೇಕು? ತಪ್ಪಾದ ಯೋಚನೆಯಿಂದ ದೂರವಿರಲು ಸಹಾಯಮಾಡುವ ಮೂರು ವಿಷಯಗಳ ಬಗ್ಗೆ ಯೇಸು ಹೇಳಿದನು.
ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ
ತನ್ನ ಕೇಳುಗರಿಗೆ ಅನೇಕ ಪಾಠಗಳನ್ನು ಕಲಿಸಲು ಯೇಸು ಕ್ರಿಸ್ತನು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಕೇಳಿದನು. ಆತನು ಪರಿಣಾಮಕಾರಿಯಾಗಿ ಕಲಿಸಿದ ವಿಧವನ್ನು ನಾವು ಸುವಾರ್ತೆ ಸಾರುವಾಗ ಹೇಗೆ ಅನುಕರಿಸಬಹುದು?
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಎಡವಬೇಡಿ, ಎಡವಿಸಬೇಡಿ
ಎಡವುವುದು ಮತ್ತು ಎಡವಿಸುವುದು ಎಷ್ಟು ಗಂಭೀರ ಎಂದು ಯೇಸು ದೃಷ್ಟಾಂತಗಳ ಮೂಲಕ ಕಲಿಸಿದನು. ನನ್ನ ಜೀವನದಲ್ಲಿ ಯಾವುದು ಎಡವುಗಲ್ಲಾಗುವ ಸಾಧ್ಯತೆ ಇದೆ?