ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಪತ್ರಿಕೆಗಳನ್ನ ಬಳಸುತ್ತಾ ಇರಿ

ಪತ್ರಿಕೆಗಳನ್ನ ಬಳಸುತ್ತಾ ಇರಿ

2018 ರಿಂದ ಸಾರ್ವಜನಿಕರಿಗಾಗಿ ತಯಾರಿಸಲ್ಪಟ್ಟ ಪತ್ರಿಕೆಗಳ ಪ್ರತಿಯೊಂದು ಸಂಚಿಕೆ ಯಾವುದಾದ್ರು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮಾತಾಡುತ್ತೆ. ಈ ಪತ್ರಿಕೆಗಳು ಬೋಧನಾ ಸಾಧನಗಳು ವಿಭಾಗದಲ್ಲಿ ಇವೆ. ಹಾಗಾಗಿ ಈ ಪತ್ರಿಕೆಗಳನ್ನ ಸೇವೇಲಿ ಬಳಸಬಹುದು. ಪ್ರಯಾಣ ಮಾಡುವಾಗ, ಶಾಪಿಂಗ್‌ಗೆ ಹೋಗುವಾಗ ಸಹ ಕೆಲವು ಪತ್ರಿಕೆಗಳನ್ನ ತಗೊಂಡು ಹೋಗಬಹುದು. ಜನರಿಗೆ ಬೈಬಲ್‌ ಬಗ್ಗೆ ಕಲಿಸೋಕೆ ಈ ಪತ್ರಿಕೆಗಳನ್ನ ಬಳಸೋದಿಲ್ಲ ನಿಜ. ಆದ್ರೆ ಈ ಪತ್ರಿಕೆಗಳಿಗೆ ಎಷ್ಟು ಶಕ್ತಿ ಇದೆ ಅಂದ್ರೆ ಇವು ಜನರಲ್ಲಿ ಬೈಬಲ್‌ ಬಗ್ಗೆ ಕಲಿಯೋ ಆಸೆಯನ್ನ ಹುಟ್ಟಿಸುತ್ತೆ.

ಮನೆಯವರೊಂದಿಗೆ ಸಂಭಾಷಣೆ ಶುರುಮಾಡಿದ ಮೇಲೆ ಒಂದು ಬೈಬಲ್‌ ವಚನ ತೋರಿಸಿ. ನಂತ್ರ ಅವರಿಗೆ ಇಷ್ಟ ಆಗೋ ವಿಷಯವನ್ನ ಯಾವುದಾದರೊಂದು ಪತ್ರಿಕೆಯಿಂದ ಆರಿಸಿಕೊಂಡು ಅದರ ಬಗ್ಗೆ ಮಾತಾಡಿ. ಉದಾಹರಣೆಗೆ ಅವರಿಗೆ ಕುಟುಂಬವನ್ನ ನೋಡಿಕೊಳ್ಳೋ ಜವಾಬ್ದಾರಿ ಇದ್ರೆ, ದುಃಖ ಒತ್ತಡ ಇದ್ರೆ ನೀವು ಹೀಗೆ ಹೇಳಬಹುದು: “ನಾನು ಕೆಲವು ದಿನಗಳ ಹಿಂದೆ ಈ ವಿಷಯದ ಬಗ್ಗೆ ಒಂದು ಒಳ್ಳೇ ಲೇಖನ ಓದಿದೆ. ಅದ್ರಿಂದ ನನಗೆ ತುಂಬಾ ಪ್ರಯೋಜನ ಆಯ್ತು. ಅದನ್ನ ತೋರಿಸ್ಲಾ?” ಮನೆಯವರಿಗೆ ಆಸಕ್ತಿ ಇದೆ ಅಂತ ಅನಿಸಿದ್ರೆ ಅವರಿಗೆ ಆ ಪತ್ರಿಕೆಯ ಒಂದು ಪ್ರತಿ ಕೊಡಬಹುದು. ಫೋನ್‌ ಮೂಲಕನೂ ಅದನ್ನ ಕಳಿಸಬಹುದು. ಇದನ್ನ ನೀವು ಆರಂಭದ ಭೇಟಿಯಲ್ಲೇ ಮಾಡಬಹುದು. ಪತ್ರಿಕೆಗಳನ್ನ ಕೊಡೋದು ಮಾತ್ರ ನಮ್ಮ ಗುರಿಯಲ್ಲ. ಆದ್ರೆ ಈ ಪತ್ರಿಕೆಗಳ ಮೂಲಕ ದೇವರ ಬಗ್ಗೆ ಕಲಿತು ಅದರ ಪ್ರಕಾರ ನಡೆಯಲು ಇಷ್ಟಪಡೋ ಜನರನ್ನ ಹುಡುಕೋದೇ ನಮ್ಮ ಉದ್ದೇಶ.—ಅಕಾ 13:48.

2018

2019

2020

 

ನಿಮ್ಮ ಟೆರಿಟೊರಿಯಲ್ಲಿ ಇರೋ ಜನರಿಗೆ ಯಾವ ವಿಷಯಗಳ ಬಗ್ಗೆ ಮಾತಾಡಿದ್ರೆ ಇಷ್ಟ ಆಗುತ್ತೆ?