ವೃದ್ಧರ ಜ್ಞಾನ ಭಂಡಾರ ಪ್ರಯೋಜನ ಅಪಾರ
ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಸಹೋದರರು ಯೆಹೋವನು ಮಾಡಿದ “ಅದ್ಭುತಕೃತ್ಯಗಳನ್ನು” ಕಣ್ಣಾರೆ ನೋಡುತ್ತಾ ಬಂದಿದ್ದಾರೆ. ಅದನ್ನು ಅವರು ನಮ್ಮೊಂದಿಗೆ ಹಂಚಿಕೊಂಡಾಗ ಯೆಹೋವನ ಮೇಲೆ ಮತ್ತು ಅವನ ವಾಗ್ದಾನಗಳ ಮೇಲೆ ನಮ್ಮ ನಂಬಿಕೆ ಹೆಚ್ಚಾಗುತ್ತೆ. (ಕೀರ್ತ 71:17, 18) ಅಂಥ ಅಮೂಲ್ಯ ಸಹೋದರರು ನಿಮ್ಮ ಸಭೆಯಲ್ಲಿ ಇರೋದಾದರೆ ಅವರಿಗೆ ಈ ವಿಷಯಗಳ ಬಗ್ಗೆ ಕೇಳಿ
-
ಸಮಸ್ಯೆಗಳು ಬಂದರೂ ಯೆಹೋವನ ಸೇವೆ ಮಾಡುತ್ತಾ ಮುಂದುವರಿಯೋಕೆ ಆತನು ಹೇಗೆ ಸಹಾಯ ಮಾಡಿದನು
-
ನಿಮ್ಮ ದೀಕ್ಷಾಸ್ನಾನದ ಸಮಯದಿಂದ ಇಂದಿನ ವರೆಗೆ ಪ್ರಚಾರಕರ ಸಂಖ್ಯೆ ಹೆಚ್ಚುತ್ತಿರುವುದನ್ನ ನೋಡಿ ಹೇಗನಿಸುತ್ತೆ
-
ವರ್ಷಗಳು ಹೋದಂತೆ ಬೈಬಲ್ ಸತ್ಯಗಳ ತಿಳುವಳಿಕೆ ಸ್ಪಷ್ಟವಾಗುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆ ಏನು
-
ಯೆಹೋವನ ಸಂಘಟನೆಯಲ್ಲಿ ಆದ ಯಾವ ಬದಲಾವಣೆಗಳನ್ನ ಕಣ್ಣಾರೆ ನೋಡಿದ್ದೀರಾ