ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಗಸ್ಟ್‌ 18-24

ಜ್ಞಾನೋಕ್ತಿ 27

ಆಗಸ್ಟ್‌ 18-24

ಗೀತೆ 100 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಒಳ್ಳೇ ಸ್ನೇಹಿತರಿಂದ ಸಿಗೋ ಪ್ರಯೋಜನಗಳು

(10 ನಿ.)

ಒಳ್ಳೇ ಸ್ನೇಹಿತರು ಧೈರ್ಯದಿಂದ ನಮ್ಮನ್ನ ತಿದ್ದುತ್ತಾರೆ (ಜ್ಞಾನೋ 27:5, 6; w19.09 5 ¶12)

ನಮಗೆ ಹೇಗೆ ಸಹಾಯ ಮಾಡಬೇಕು ಅಂತ ಸಂಬಂಧಿಕರಿಗಿಂತ ಒಳ್ಳೇ ಸ್ನೇಹಿತರಿಗೆ ಗೊತ್ತಿರುತ್ತೆ (ಜ್ಞಾನೋ 27:10; it-2-E 491 ¶3)

ಒಳ್ಳೇ ಸ್ನೇಹಿತರು ಒಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾರೆ (ಜ್ಞಾನೋ 27:17; w23.09 10 ¶7)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 27:21—ಹೊಗಳಿಕೆ ಯಾವ ಅರ್ಥದಲ್ಲಿ ನಮ್ಮನ್ನ ಪರೀಕ್ಷಿಸುತ್ತೆ? (w06 10/1 6 ¶6)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ. ಮನೆಯವರು ಕ್ರೈಸ್ತರಲ್ಲ. (lmd ಪಾಠ 6 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಬೋಧನಾ ಸಾಧನದಲ್ಲಿರೋ ಯಾವುದಾದ್ರೂ ಒಂದು ವಿಡಿಯೋ ತೋರಿಸಿ, ಚರ್ಚಿಸಿ. (lmd ಪಾಠ 8 ಪಾಯಿಂಟ್‌ 3)

6. ಭಾಷಣ

(5 ನಿ.) ijwyp ಲೇಖನ 75—ವಿಷ್ಯ: ನನ್ನ ಫ್ರೆಂಡ್‌ ನನಗೆ ನೋವು ಮಾಡಿದ್ರೆ ಏನ್‌ ಮಾಡಲಿ? (th ಪಾಠ 14)

ನಮ್ಮ ಕ್ರೈಸ್ತ ಜೀವನ

ಗೀತೆ 106

7. “ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ”

(15 ನಿ.) ಚರ್ಚೆ.

ಯೆಹೋವ ದೇವರ ಲೋಕವ್ಯಾಪಕ ಕುಟುಂಬದಲ್ಲಿ ನಮಗೆ ತುಂಬಾ ಒಳ್ಳೇ ಫ್ರೆಂಡ್ಸ್‌ ಸಿಕ್ತಾರೆ. ಇದು ಯೆಹೋವ ದೇವರು ನಮ್ಗೆ ಕೊಟ್ಟಿರೋ ಗಿಫ್ಟ್‌. ನಾವು ಸಭೆಯಲ್ಲಿರೋ ಎಲ್ಲರ ಜೊತೆ ಸ್ನೇಹಭಾವದಿಂದ ಮಾತಾಡ್ತೀವಿ ನಿಜ. ಆದ್ರೆ ಅವ್ರಲ್ಲಿ ಕೆಲವರು ಮಾತ್ರ ನಮ್ಮ ಬೆಸ್ಟ್‌ ಫ್ರೆಂಡ್‌ ಆಗಿರ್ತಾರೆ. ಯಾಕೆ? ಯಾಕಂದ್ರೆ ಬೆಸ್ಟ್‌ ಫ್ರೆಂಡ್‌ ಆಗಬೇಕು ಅಂದ್ರೆ, ಒಬ್ಬರನ್ನೊಬ್ಬರು ಚೆನ್ನಾಗಿ ತಿಳ್ಕೊಬೇಕು, ನಂಬಿಕೆ ಬೆಳೆಸ್ಕೊಬೇಕು, ಮನಸ್ಸು ಬಿಚ್ಚಿ ಮಾತಾಡಬೇಕು, ಜೊತೆ ಜೊತೆಯಾಗಿ ಕೆಲ್ಸ ಮಾಡಬೇಕು, ಒಬ್ರಿಗೊಬ್ರು ಸಹಾಯ ಮಾಡಬೇಕು. ಇದಕ್ಕೆಲ್ಲ ಸಮಯ ಮತ್ತು ಪ್ರಯತ್ನ ಹಾಕಬೇಕು.

ಜ್ಞಾನೋಕ್ತಿ 17:17 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಮಹಾಸಂಕಟ ಶುರು ಆಗೋದಕ್ಕಿಂತ ಮುಂಚೆನೇ ನಾವು ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋದು ಯಾಕೆ ಪ್ರಾಮುಖ್ಯ?

2 ಕೊರಿಂಥ 6:12, 13 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋಕೆ ಈ ವಚನ ಹೇಗೆ ಸಹಾಯ ಮಾಡುತ್ತೆ?

“ಪ್ರತಿಯೊಂದಕ್ಕೂ ಒಂದು ಸಮಯ ಇದೆ”—ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋಕೆ ಸಮಯ ಹಿಡಿಯುತ್ತೆ ಅನ್ನೋ ನಾಟಕರೂಪದ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಫ್ರೆಂಡ್‌ಶಿಪ್‌ ಬಗ್ಗೆ ಈ ನಾಟಕರೂಪದ ವಿಡಿಯೋದಿಂದ ನೀವೇನು ಕಲಿತ್ರಿ?

ಮುಗುಳು ನಗುವಿನ ಮೂಲಕ ಅಥವಾ ವಂದನೆ ಹೇಳೋದ್ರ ಮೂಲಕ ಸ್ನೇಹ ಅನ್ನೋ ಬೀಜವನ್ನ ನಾವು ಬಿತ್ತಬಹುದು. ಕಾಳಜಿ ತೋರಿಸೋದ್ರ ಮೂಲಕ ಆ ಬೀಜಕ್ಕೆ ನೀರು ಹಾಕಬಹುದು. ಸ್ನೇಹ ಅನ್ನೋ ಬೀಜ ದೊಡ್ಡ ಗಿಡ ಆಗೋಕೆ ಸಮಯ ಹಿಡಿಯುತ್ತೆ, ಅದಕ್ಕೇ ತಾಳ್ಮೆ ತೋರಿಸಬೇಕು. ಹೀಗೆ ಮಾಡಿದ್ರೆ ನಮ್ಮ ಸ್ನೇಹ ಸದಾಕಾಲ ಇರುತ್ತೆ.

8. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 10-11

ಸಮಾಪ್ತಿ ಮಾತುಗಳು (3 ನಿ.) | ಗೀತೆ 118 ಮತ್ತು ಪ್ರಾರ್ಥನೆ