ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಜೀವನ | ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ

ಅಗತ್ಯ ಇರೋ ಕಡೆ ಸೇವೆ ಮಾಡಿ

ಅಗತ್ಯ ಇರೋ ಕಡೆ ಸೇವೆ ಮಾಡಿ

ಗೊತ್ತಿರುವ ಜಾಗದಲ್ಲಿ ಸೇವೆ ಮಾಡೋದು ಸುಲಭ. ಆದ್ರೆ ಹೊಸ ಜಾಗಕ್ಕೆ ಹೋಗಿ ಸೇವೆ ಮಾಡೋಕೆ ತುಂಬಾ ನಂಬಿಕೆ ಬೇಕು. (ಇಬ್ರಿ 11:8-10) ಅಗತ್ಯ ಇರುವ ಕಡೆ ಹೋಗಿ ಸೇವೆ ಮಾಡಬೇಕು ಅನ್ನೋ ಗುರಿ ನಿಮಗಿದ್ರೆ ಹಿರಿಯರ ಜೊತೆ ಮಾತಾಡಿ. ಖರ್ಚು ಎಷ್ಟಾಗುತ್ತೆ, ಎಲ್ಲಿಗೆ ಹೋಗಿ ಸೇವೆ ಮಾಡಬೇಕಂತಾನೂ ಯೋಚನೆ ಮಾಡಬೇಕು. ಇದಕ್ಕೋಸ್ಕರ ನೀವೇನು ಮಾಡಬೇಕು? ಅಗತ್ಯ ಇರುವ ಕಡೆ ಸೇವೆ ಮಾಡೋದರ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಓದಿ. ಈಗಾಗಲೇ ಹೋಗಿ ಸೇವೆ ಮಾಡುತ್ತಿರುವವರ ಜೊತೆನೂ ಮಾತಾಡಿ. (ಜ್ಞಾನೋ 15:22) ಸರಿಯಾದ ತೀರ್ಮಾನ ಮಾಡೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಪ್ರಾರ್ಥಿಸಿ. (ಯಾಕೋ 1:5) ನೀವು ಹೋಗಬೇಕು ಅಂದುಕೊಂಡಿರೋ ಜಾಗದ ಬಗ್ಗೆ ತಿಳ್ಕೊಳ್ಳಿ. ಸಾಧ್ಯವಾದರೆ ಒಂದೆರಡು ದಿನ ಹೋಗಿ ಅಲ್ಲಿದ್ದು ಜಾಗವನ್ನ ನೋಡಿಕೊಂಡು ಬನ್ನಿ.

ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ಅಗತ್ಯ ಇರೋ ಕಡೆ ಹೋಗಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಅಗತ್ಯ ಇರುವ ಕಡೆ ಹೋಗಿ ಸೇವೆ ಮಾಡೋಕೆ ಗ್ಯಾಬ್ರಿಯೇಲ್‌ ಏನ್‌ ಮಾಡಿದ?