ನಮ್ಮ ಕ್ರೈಸ್ತ ಜೀವನ
ನಿಮ್ಮ ನಂಬಿಕೆ ಬಗ್ಗೆ ವಿವರಿಸಲು ನಿಮ್ಮಿಂದ ಸಾಧ್ಯನಾ?
ಸೃಷ್ಟಿಕಾರ್ಯನ ಯಾಕೆ ನಂಬುತ್ತೀರಾ ಅಂತ ಯಾರಾದ್ರೂ ಕೇಳಿದ್ರೆ ನೀವೇನು ಹೇಳ್ತೀರಾ? ಹಿಂಜರಿಕೆ ಇಲ್ಲದೆ ಇದಕ್ಕೆ ಉತ್ತರ ಕೊಡಲು ಎರಡು ವಿಷಯಗಳನ್ನ ನೀವು ಮಾಡಬೇಕು: ಮೊದಲು, ಸೃಷ್ಟಿಕಾರ್ಯ ನಿಜ ಅಂತ ನೀವು ನಂಬಬೇಕು. ಸಂಶಯ ಇದ್ದರೆ ಸಂಶೋಧನೆ ಮಾಡಬೇಕು. (ರೋಮ 12:1, 2) ಆಮೇಲೆ ನಿಮ್ಮ ನಂಬಿಕೆಯನ್ನು ಬೇರೆಯವರಿಗೆ ಹೇಗೆ ವಿವರಿಸಬೇಕು ಅಂತ ಯೋಚಿಸಬೇಕು.—ಜ್ಞಾನೋ 15:28.
ಬೇರೆಯವರು ಸೃಷ್ಟಿಕಾರ್ಯವನ್ನು ಯಾಕೆ ನಂಬುತ್ತಾರೆ ಅಂತ ತಿಳುಕೊಳ್ಳಲು, ಮೂಳೆ ತಜ್ಞರು ತಮ್ಮ ನಂಬಿಕೆಯ ಬಗ್ಗೆ ಮಾತಾಡುತ್ತಾರೆ ಮತ್ತು ಪ್ರಾಣಿ ತಜ್ಞರು ತಮ್ಮ ನಂಬಿಕೆಯ ಬಗ್ಗೆ ಮಾತಾಡುತ್ತಾರೆ ಎಂಬ ವಿಡಿಯೋಗಳನ್ನು ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಐರಿನ್ ಹಾಫ್ ಲಾರೆನ್ಸಿ ಅವರು ವಿಕಾಸವಾದದ ಬದಲು ಸೃಷ್ಟಿಕಾರ್ಯವನ್ನು ಯಾಕೆ ನಂಬುತ್ತಾರೆ?
-
ಯರೊಸ್ಲಾವ್ ಡಾವೆನಿಚ್ ಅವರು ವಿಕಾಸವಾದದ ಬದಲು ಸೃಷ್ಟಿಕಾರ್ಯವನ್ನು ಯಾಕೆ ನಂಬುತ್ತಾರೆ?
-
ನೀವು ಸೃಷ್ಟಿಕಾರ್ಯವನ್ನು ಯಾಕೆ ನಂಬುತ್ತೀರಾ ಅಂತ ಬೇರೆಯವರಿಗೆ ಹೇಗೆ ವಿವರಿಸುತ್ತೀರಿ?
-
ದೇವರೇ ಎಲ್ಲವನ್ನು ಸೃಷ್ಟಿಸಿದ ಅಂತ ರುಜುಪಡಿಸಲು ಯೆಹೋವನ ಸಂಘಟನೆಯ ಯಾವೆಲ್ಲಾ ಸಾಧನಗಳು ನಿಮ್ಮ ಭಾಷೆಯಲ್ಲಿ ಇವೆ?