ಪೌಲನು ಕೈಸರನಿಗೆ ಮನವಿಮಾಡಿದನು, ನಂತರ ಅಗ್ರಿಪ್ಪ ರಾಜನಿಗೆ ಸಾಕ್ಷಿಕೊಟ್ಟನು
ನಮ್ಮನ್ನು “ರಾಜ್ಯಪಾಲರ ಮುಂದೆಯೂ ಅರಸರ ಮುಂದೆಯೂ” ನಿಲ್ಲಿಸಿದರೆ ಏನು ಮಾತಾಡಬೇಕು ಎಂದು ಚಿಂತೆಮಾಡುವ ಅಗತ್ಯ ಇಲ್ಲ ನಿಜ. ಆದರೆ ನಮ್ಮ ನಿರೀಕ್ಷೆಗೆ ಕಾರಣವನ್ನು ಕೇಳುವ ಪ್ರತಿಯೊಬ್ಬರ ಮುಂದೆ ‘ಉತ್ತರ ಹೇಳುವುದಕ್ಕೆ ನಾವು ಯಾವಾಗಲೂ ಸಿದ್ಧರಾಗಿರಬೇಕು.’ (ಮತ್ತಾ 10:18-20; 1ಪೇತ್ರ 3:15) ನಮ್ಮ ವಿರೋಧಿಗಳು ಕಾನೂನಿನ ಹೆಸರಲ್ಲಿ ತೊಂದರೆ ಕೊಡಲು ಪ್ರಯತ್ನಿಸಿದರೆ ನಾವು ಪೌಲನ ಉದಾಹರಣೆಯನ್ನು ಅನುಕರಿಸುತ್ತಾ ಏನು ಮಾಡಬಹುದು?—ಕೀರ್ತ 94:20.
-
ಸುವಾರ್ತೆಯನ್ನು ಸಮರ್ಥಿಸಲು ನಮಗಿರುವ ಕಾನೂನುಬದ್ಧ ಹಕ್ಕುಗಳನ್ನು ಬಳಸಿಕೊಳ್ಳಬೇಕು.—ಅಕಾ 25:11
-
ಅಧಿಕಾರಿಗಳ ಹತ್ತಿರ ಗೌರವದಿಂದ ಮಾತಾಡಬೇಕು.—ಅಕಾ 26:2, 3
-
ಸೂಕ್ತವಾದಲ್ಲಿ, ಸುವಾರ್ತೆಯಿಂದಾಗಿ ನಮಗೆ ಮತ್ತು ಬೇರೆಯವರಿಗೆ ಹೇಗೆ ಪ್ರಯೋಜನವಾಗಿದೆ ಎಂದು ವಿವರಿಸಬೇಕು.—ಅಕಾ 26:11-20