ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಬೈಬಲ್‌ ಚಲನಚಿತ್ರಕ್ಕಾಗಿ ಸುಮಾರು 27,500 ಕೆ.ಜಿಯಷ್ಟು ಪುಡಿ ಮಾಡಿದ ಕಲ್ಲನ್ನ ಮೌಂಟ್‌ ಎಬು ಸ್ಟುಡಿಯೋಗೆ ತರಲಾಯಿತು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ವಿಡಿಯೋ ತಯಾರಿ ಕೆಲಸ

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ವಿಡಿಯೋ ತಯಾರಿ ಕೆಲಸ

ಆಗಸ್ಟ್‌ 10, 2020

 ಈ ವರ್ಷದ ಪ್ರಾದೇಶಿಕ ಅಧಿವೇಶನದಲ್ಲಿ ನಾವು ನೋಡಿದ ವಿಡಿಯೋಗಳು ನಮ್ಮ ಮನ ಮುಟ್ಟಿತು ಮತ್ತು ಬೈಬಲ್‌ ಬೋಧನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋದಿಕ್ಕೆ ಸಹಾಯ ಮಾಡ್ತು ಅನ್ನೋದ್ರಲ್ಲಿ ಸಂಶಯ ಇಲ್ಲ. 2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದಲ್ಲಿ ಒಟ್ಟು 114 ವಿಡಿಯೋಗಳಿದ್ವು. ಅದ್ರಲ್ಲಿ ಆಡಳಿತ ಮಂಡಳಿಯ ಸದಸ್ಯರು ಮತ್ತು ಅವರ ಸಹಾಯಕರು ನೀಡಿದ 43 ಭಾಷಣಗಳು ಕೂಡ ಸೇರಿವೆ. ಈ ವಿಡಿಯೋಗಳನ್ನ ತಯಾರಿಸೋದಿಕ್ಕೆ ಎಷ್ಟು ಖರ್ಚಾಯ್ತು ಮತ್ತು ಏನೆಲ್ಲಾ ಕೆಲಸ ಮಾಡಬೇಕಾಯ್ತು ಅಂತ ನಿಮ್ಗೆ ಗೊತ್ತಾ?

 ಈ ಕಾರ್ಯಕ್ರಮನ ತಯಾರಿಸೋದಿಕ್ಕೆ ಲೋಕವ್ಯಾಪಕವಾಗಿ ಸುಮಾರು 900 ಸಹೋದರ ಸಹೋದರಿಯರು ತಮ್ಮ ಸಮಯ ಮತ್ತು ಶಕ್ತಿಯನ್ನ ಮನಃಪೂರ್ವಕವಾಗಿ ಉಪಯೋಗಿಸಿದ್ರು. ಅವರೆಲ್ಲಾ ಸೇರಿ ಎರಡು ವರ್ಷದ ಈ ಪ್ರಾಜೆಕ್ಟ್‌ಗಾಗಿ ಸುಮಾರು 1 ಲಕ್ಷ ಗಂಟೆ ಕಳೆದಿದ್ದಾರೆ. ಇದ್ರಲ್ಲಿ ನೆಹೆಮೀಯ: “ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ” ಅನ್ನೋ 76 ನಿಮಿಷದ ಬೈಬಲ್‌ ಚಲನಚಿತ್ರವನ್ನ ತಯಾರಿಸೋಕೆ 70,000 ಗಂಟೆಗಳು ಬೇಕಾಯ್ತು.

 ಈ ಕೆಲ್ಸಕ್ಕಾಗಿ ನೂರಾರು ಸ್ವಯಂ ಸೇವಕರು ಸ್ವತ್ಯಾಗದ ಮನೋಭಾವವನ್ನ ತೋರಿಸಿ ಕಷ್ಟಪಟ್ಟು ಕೆಲ್ಸ ಮಾಡಿದ್ದಾರೆ. ಅವ್ರ ಅವಶ್ಯಕತೆಗಳನ್ನ ಪೂರೈಸೋಕೆ, ಅವ್ರಿಗೆ ಬೇಕಾದ ತಾಂತ್ರಿಕ ಮೂಲ ಸೌಕರ್ಯಗಳನ್ನ ಮತ್ತು ವಸ್ತುಗಳನ್ನು ಖರೀದಿ ಮಾಡೋಕೆ ತುಂಬಾ ದುಡ್ಡು ಖರ್ಚಾಯ್ತು.

 “ಈ ವಿಡಿಯೋಗಳಲ್ಲಿ ಬೇರೆ ಬೇರೆ ಸಂಸ್ಕೃತಿ ಮತ್ತು ಸ್ಥಳಗಳನ್ನ ತೋರಿಸ್ಬೇಕು ಅನ್ನೋದು ಆಡಳಿತ ಮಂಡಲಿಯ ಬೋಧನಾ ಸಮಿತಿಯ ಆಸೆಯಾಗಿತ್ತು. ಯಾಕಂದ್ರೆ ನಾವೆಲ್ಲರೂ ಅಂತರಾಷ್ಟ್ರೀಯ ಸಹೋದರ ಬಳಗದ ಭಾಗವಾಗಿದ್ದೀವಿ. 11 ದೇಶದ 24 ತಂಡಗಳು ಈ ಕೆಲಸಕ್ಕೆ ಕೈ ಜೋಡಿಸಿದ್ರು. ಇದಕ್ಕೋಸ್ಕರ ನಮಗೆ ಸಾಕಷ್ಟು ಹಣ, ಯೋಜನೆ ಮತ್ತು ಸಹಕಾರ ಬೇಕಾಗಿತ್ತು” ಅಂತ ಆಡಿಯೋ/ವಿಡಿಯೋ ಸರ್ವಿಸಸ್‌ನಲ್ಲಿ ಕೆಲಸ ಮಾಡೋ ಜೆರೆಡ್‌ ಗಾಸ್‌ಮೆನ್‌ ಹೇಳಿದ್ರು.

 ಕೆಲವು ವಿಡಿಯೋಗಳನ್ನ ಮಾಡೋಕೆ ವಿಶೇಷವಾದ ಸಲಕರಣೆಗಳು ಬೇಕಾಗಿತ್ತು ಮತ್ತು ಸೆಟ್‌ಗಳನ್ನ ಹಾಕಬೇಕಾಗಿತ್ತು. ಉದಾಹರಣೆಗೆ, ನೆಹೆಮೀಯ: “ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ” ಅನ್ನೋ ಚಲನಚಿತ್ರದ ಸೆಟ್ಟನ್ನ ಮೌಂಟ್‌ ಎಬು ಸ್ಟುಡಿಯೋದಲ್ಲಿ ಹಾಕಲಾಯಿತು. ಇದು ಅಮೆರಿಕದ ನ್ಯೂಯಾರ್ಕಿನ ಪ್ಯಾಟರ್‌ಸನ್‌ ಹತ್ರ ಇದೆ. ಈ ಕೆಲಸಕ್ಕಾಗಿ ಸಹೋದರ ಸಹೋದರಿಯರು ಕೊಟ್ಟ ಉದಾರ ಕಾಣಿಕೆಗಳನ್ನ ತುಂಬ ವಿವೇಚನೆಯಿಂದ ಬಳಸಿದ್ರು. ಈ ಚಿತ್ರದಲ್ಲಿ ಐತಿಹಾಸಿಕ ಮಾಹಿತಿಯನ್ನ ನಿಖರವಾಗಿ ತಿಳಿಸೋಕೆ ತಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನ ಮಾಡಿದ್ರು. ಕಡಿಮೆ ಭಾರದ ವಸ್ತುಗಳನ್ನ ಉಪಯೋಗಿಸಿ ಪ್ರಾಚೀನ ಕಾಲದ ಯೆರೂಸಲೇಮ್‌ ಗೋಡೆಗಳನ್ನ ತೋರಿಸೋ ಸೆಟ್‌ ಹಾಕಿದ್ರು. ಪ್ರತಿಯೊಂದು ಗೋಡೆಯ ಭಾಗ ಮಾಡೋದಿಕ್ಕೆ ಆರು ಮೀಟರ್‌ ಉದ್ದದ (20 ಅಡಿ) ಮರದ ಹಲಗೆಗೆ ಫೋಮ್‌ ಹಾಕಿ ಅದು ಕಲ್ಲಿನ ತರ ಕಾಣೋ ಹಾಗೆ ಬಣ್ಣ ಬಳಿದ್ರು. ಈ “ಗೋಡೆಗಳನ್ನ” ಬೇರೆ ಬೇರೆ ದೃಶ್ಯಗಳಿಗೆ ಬಳಸಿದ್ರಿಂದ ಬೇರೆ ಹೊಸ ಸೆಟ್‌ಗಳನ್ನ ಹಾಕೋ ಅವಶ್ಯಕತೆ ಇರಲಿಲ್ಲ. ಇಷ್ಟೆಲ್ಲ ಮಾಡಿದ್ರು ಕೂಡ ಈ ನಾಟಕದ ಸೆಟ್‌ ಹಾಕೋಕೆ ಸುಮಾರು 74 ರಿಂದ 75 ಲಕ್ಷ ರೂಪಾಯಿಗಳು ಬೇಕಾಯ್ತು. a

 ತೆರೆಮರೆಯಲ್ಲಿ ನಡೆದ ಈ ವಿಷ್ಯಗಳನ್ನ ನಾವು ತಿಳ್ಕೊಂಡಿದ್ರಿಂದ ಈ ವರ್ಷದ ಪ್ರಾದೇಶಿಕ ಅಧಿವೇಶನದ ಬಗ್ಗೆ ನಮ್ಮ ಗಣ್ಯತೆ ಜಾಸ್ತಿಯಾಗಿದೆ. ಈ ಕಾರ್ಯಕ್ರಮಕ್ಕಾಗಿ ಇಷ್ಟೆಲ್ಲ ಕಷ್ಟಪಟ್ಟಿದ್ರಿಂದ ಲೋಕದಲ್ಲೆಲ್ಲ ಯೆಹೋವನ ಹೆಸರಿಗೆ ಹೆಚ್ಚು ಮಹಿಮೆ ಸಿಗುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. donate.jw.org ಮತ್ತು ಬೇರೆ ವಿಧಾನಗಳ ಮೂಲಕ ಕೊಟ್ಟ ನಿಮ್ಮ ಉದಾರ ಕಾಣಿಕೆಗಳಿಗಾಗಿ ತುಂಬ ಧನ್ಯವಾದಗಳು.

a ನೆಹೆಮೀಯ: “ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ” ಈ ಬೈಬಲ್‌ ಚಲನಚಿತ್ರವನ್ನ ಕೋವಿಡ್‌-19 ಬರೋದಕ್ಕಿಂತ ಮುಂಚೆ ತಯಾರಿಸಲಾಗಿತ್ತು. ಹಾಗಾಗಿ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳೋ ಅವಶ್ಯಕತೆ ಇರಲಿಲ್ಲ.