ಸದಾ ಎಚ್ಚರವಾಗಿರಿ!
2024ರಲ್ಲಿ ಏನಾದ್ರೂ ಒಳ್ಳೇದಾಗುತ್ತಾ?—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ನಮಗೆ ಬರೋ ಸಮಸ್ಯೆಗಳಿಗೆ 2024ರಲ್ಲೂ ಪರಿಹಾರ ಸಿಗಲ್ಲ ಅಂತ ಆನೇಕರು ನೆನಸ್ತಾರೆ. ಆದ್ರೂ ಮುಂದೆ ನಮ್ಮ ಭವಿಷ್ಯ ಚೆನ್ನಾಗಿರುತ್ತೆ. ನಾವ್ಯಾಕೆ ಹೀಗೆ ಹೇಳಬಹುದು?
ಬೈಬಲ್ ನಿರೀಕ್ಷೆ ಕೊಡುತ್ತೆ
ಈಗಿರೋ ಕಷ್ಟ ಸಮಸ್ಯೆಗಳಿಂದ ನಮ್ಮ ಜೀವನ ಕತ್ತಲೆಯ ಕೂಪದಲ್ಲಿ ಬಿದ್ದು ಹೋಗಿದೆ ಅಂತ ಅನಿಸಬಹುದು. ಆದ್ರೆ ದೇವರು ಬೈಬಲಿನ ಮೂಲಕ ನಿರೀಕ್ಷೆಯ ಬೆಳಕನ್ನ ಕೊಟ್ಟಿದ್ದಾನೆ. ಅದೇನಂದ್ರೆ, ಅತಿ ಬೇಗನೆ ದೇವರು “[ನಮ್ಮ] ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ.”—ಪ್ರಕಟನೆ 21:4.
ಭವಿಷ್ಯದ ಬಗ್ಗೆ ಬೈಬಲ್ ಹೇಳಿರೋ ವಿಷ್ಯಗಳನ್ನ ತಿಳ್ಕೊಳ್ಳೋಕೆ “ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು” ಅನ್ನೋ ಲೇಖನವನ್ನ ನೋಡಿ.
ಬೈಬಲ್ ಈಗ ಹೇಗೆ ಸಹಾಯ ಮಾಡುತ್ತೆ?
ಬೈಬಲ್ ಕೊಡೋ ನಿರೀಕ್ಷೆ ನಮ್ಮ ಬಾಳಿಗೆ ಭರವಸೆ ಕೊಡುತ್ತೆ. ಯಾಕಂದ್ರೆ ಅದ್ರಲ್ಲಿರೋ ಮಾತುಗಳು ನಮ್ಮಲ್ಲಿರೋ ಕೆಟ್ಟ ಯೋಚನೆಗಳ ವಿರುದ್ಧ ಹೋರಾಡೋಕೆ ಮತ್ತು ಒಳ್ಳೇ ವಿಷಯಗಳ ಕಡೆ ಗಮನ ಕೊಡೋಕೆ ಸಹಾಯ ಮಾಡುತ್ತೆ. (ರೋಮನ್ನರಿಗೆ 15:13) ಅಷ್ಟೇ ಅಲ್ಲ, ಬೈಬಲ್‌ನಲ್ಲಿರೋ ಸಲಹೆಗಳನ್ನ ಪಾಲಿಸಿದ್ರೆ ನಾವು ಈಗ ಎದುರಿಸ್ತಿರೋ ಬಡತನ, ಅನ್ಯಾಯ ಮತ್ತು ಅನಾರೋಗ್ಯವನ್ನ ನಿಭಾಯಿಸೋಕೆ ಸಹಾಯ ಮಾಡುತ್ತೆ.
ಒಬ್ಬ ವ್ಯಕ್ತಿ ಚಿಕ್ಕ ವಯಸ್ಸಿಂದಾನೂ ಬಡತನದಲ್ಲೇ ಬೆಳೆದಿದ್ರೂ ಬೈಬಲ್ ಕೊಟ್ಟ ನಿರೀಕ್ಷೆಯಿಂದ ಅವನು ಹೇಗೆ ಶಾಂತಿ ಮತ್ತು ಸಂತೋಷದಿಂದ ಇದ್ದಾನೆ ಅಂತ ಜುವನ್ ಪ್ಯಾಬ್ಲೊ ಸೆರ್ಮೆನೊ: ಯೆಹೋವ ದೇವರು ನನ್ನ ಜೀವನಕ್ಕೆ ದಾರಿ ತೋರಿಸಿದ್ರು ಅನ್ನೋ ವಿಡಿಯೋದಲ್ಲಿ ಗಮನಿಸಿ.
ಚುಚ್ಚೋ ಮನಸಾಕ್ಷಿ, ದುಃಖ, ಚಿಂತೆ ಮತ್ತು ಪ್ರೀತಿ ಪಾತ್ರರ ಸಾವಿನಂಥ ಸಮಸ್ಯೆಗಳನ್ನ ನಿಭಾಯಿಸೋಕೆ ಬೈಬಲ್ ಹೇಗೆ ಸಹಾಯ ಮಾಡುತ್ತೆ ಅಂತ ತಿಳ್ಕೊಳ್ಳೋಕೆ “ನಿಜವಾದ ಸಾಂತ್ವನ ಯಾರಿಂದ ಸಿಗುತ್ತದೆ?” ಅನ್ನೋ ಲೇಖನ ಓದಿ.
ಈ ಮುಂಚೆ ಮಿಲಿಟರಿಯಲ್ಲಿ ಕೆಲಸ ಮಾಡ್ತಿದ್ದ ಒಬ್ಬ ಸ್ತ್ರೀ ಕ್ರೂರವಾಗಿ, ಕಠೋರವಾಗಿ ನಡ್ಕೊಳ್ತಿದ್ದಳು. ಆದ್ರೆ ಬೈಬಲ್ ಕೊಟ್ಟ ನಿರೀಕ್ಷೆ ಅವಳ ಬದುಕನ್ನ ಹೇಗೆ ಬದಲಾಯಿಸಿತು ಅಂತ ತಿಳ್ಕೊಳ್ಳೋಕೆ ಐ ಪುಟ್ ಡೌನ್ ಮೈ ರೈಫಲ್ ಅನ್ನೋ ವಿಡಿಯೋ (ಇಂಗ್ಲೀಷ್) ನೋಡಿ.
2024ರಲ್ಲೂ ನೀವು ಮತ್ತು ನಿಮ್ಮ ಕುಟುಂಬದವರು ಖುಷಿ ಖುಷಿಯಾಗಿರಬಹುದು. ಅದಕ್ಕೆ ಬೈಬಲ್ ನಿಮಗೆ ಹೇಗೆ ಸಹಾಯ ಮಾಡುತ್ತೆ ಅಂತ ತಿಳ್ಕೊಳ್ಳೋಕೆ ಉಚಿತ ಬೈಬಲ್ ಕೋರ್ಸ್‌ನ್ನ ವಿನಂತಿಸಿ. ಈಗ “ಶಾಂತಿ ನೆಮ್ಮದಿಯಿಂದ” ಬದುಕೋಕೆ, ‘ನಿಮ್ಮ ಭವಿಷ್ಯ ಚೆನ್ನಾಗಿರೋಕೆ’ ಮತ್ತು ‘ನೀವು ಒಳ್ಳೇದನ್ನ ಎದುರುನೋಡೋಕೆ’ ದೇವರು ಹೇಗೆ ಸಹಾಯ ಮಾಡ್ತಾನೆ ಅಂತ ತಿಳ್ಕೊಳ್ಳಿ.—ಯೆರೆಮೀಯ 29:11.