ಉಕ್ರೇನ್ ಮೇಲೆ ರಷ್ಯಾ ದಾಳಿ
ಫೆಬ್ರವರಿ 24, 2022ರ ಮುಂಜಾನೆ, ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ಆಕ್ರಮಣವನ್ನ ಶುರುಮಾಡ್ತು. ಈ ಯುದ್ಧವನ್ನ ನಿಲ್ಲಿಸೋಕೆ ತುಂಬ ದೇಶಗಳ ನಾಯಕರು ಪ್ರಯತ್ನ ಮಾಡಿದ್ರೂ ಈ ಆಕ್ರಮಣವನ್ನ ನಿಲ್ಲಿಸೋಕೆ ಆಗಲಿಲ್ಲ. ಈ ಯುದ್ಧದಿಂದ ಇಡೀ ಜಗತ್ತಿಗೆ ಏನಾಗಲಿಕ್ಕಿದೆ? ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಕೆಲವು ದಿನಗಳ ಹಿಂದೆ ಹೀಗೆ ಹೇಳಿದರು: “ಈ ಯುದ್ಧದಿಂದಾಗಿ ಜನರು ಎಷ್ಟು ಬಳಲುತ್ತಾರೆ ಮತ್ತು ಎಷ್ಟು ದೊಡ್ಡ ವಿಪತ್ತನ್ನ ಇದು ಸೃಷ್ಟಿಸುತ್ತೆ ಅಂತ ಊಹಿಸೋಕೂ ಸಾಧ್ಯ ಇಲ್ಲ. ಯುರೋಪಿಯನ್ ರಾಷ್ಟ್ರಗಳ ಭದ್ರತೆ ಮತ್ತು ಇತರ ಎಲ್ಲ ದೇಶಗಳ ಸುರಕ್ಷತೆಗೆ ಏನಾಗುತ್ತೆ ಅನ್ನೋದನ್ನ ನಾವು ಅಂದಾಜು ಹಾಕೋಕೆ ಆಗ್ತಿಲ್ಲ.”
ಇಂಥ ಘಟನೆಗಳ ಬಗ್ಗೆ ಬೈಬಲ್ ಏನು ಹೇಳುತ್ತೆ?
“ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ” ಅಂತ ಯೇಸು ತುಂಬ ಮುಂಚೆನೇ ಹೇಳಿದ್ದನು. (ಮತ್ತಾಯ 24:7) ನಮ್ಮ ಸಮಯದಲ್ಲಿ ಆಗ್ತಾ ಇರೋ ಈ ಯುದ್ಧಗಳು ಯೇಸು ಹೇಳಿದ್ದ ಬೈಬಲ್ ಭವಿಷ್ಯವಾಣಿಯ ನೆರವೇರಿಕೆ ಆಗಿದೆಯಾ ಅಂತ ತಿಳಿಯೋಕೆ “ಇದು ಅಂತ್ಯಕಾಲನಾ?” ಅನ್ನೋ ಲೇಖನ ನೋಡಿ.
ಬೈಬಲಲ್ಲಿರೋ ಪ್ರಕಟನೆ ಅನ್ನೋ ಪುಸ್ತಕ ಯುದ್ಧಗಳನ್ನ ‘ಕೆಂಪು ಕುದುರೆ’ ಮೇಲೆ ಕುಳಿತಿರೋ ಸವಾರನಿಗೆ ಹೋಲಿಸುತ್ತೆ. ಅವನು ‘ಭೂಮಿಯಿಂದ ಶಾಂತಿ ತೆಗೆದುಕೊಂಡು’ ಹೋಗ್ತಾನೆ ಅಂತ ಅಲ್ಲಿದೆ. (ಪ್ರಕಟನೆ 6:4) ಬೈಬಲಿನ ಈ ಭವಿಷ್ಯವಾಣಿ ಯುದ್ಧಗಳಿಗೆ ಹೇಗೆ ಅನ್ವಯಿಸುತ್ತೆ ಅಂತ ತಿಳಿಯೋಕೆ, “ನಾಲ್ಕು ಕುದುರೆ ಸವಾರರು—ಯಾರವರು?” ಅನ್ನೋ ಲೇಖನ ಓದಿ.
‘ಉತ್ತರದ ರಾಜ’ ಮತ್ತು ‘ದಕ್ಷಿಣದ ರಾಜ’ ಹೋರಾಡ್ತಾರೆ ಅಂತ ದಾನಿಯೇಲ ಪುಸ್ತಕ ತುಂಬ ಮುಂಚೆನೇ ಹೇಳಿತ್ತು. (ದಾನಿಯೇಲ 11:25-45) ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳೇ ಉತ್ತರದ ರಾಜ ಅಂತ ಹೇಳೋಕೆ ಇರೋ ಕಾರಣಗಳನ್ನ ತಿಳಿದುಕೊಳ್ಳಲು, ನೆರವೇರಿದ ಭವಿಷ್ಯವಾಣಿ—ದಾನಿಯೇಲ 11ನೇ ಅಧ್ಯಾಯ ಅನ್ನೋ ವಿಡಿಯೋ ನೋಡಿ. a
ಬೈಬಲಿನ ಪ್ರಕಟನೆ ಪುಸ್ತಕ “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧದ” ಬಗ್ಗೆನೂ ಮಾತಾಡುತ್ತೆ. (ಪ್ರಕಟನೆ 16:14, 16) ಆದರೆ ಈ ಯುದ್ಧ ನಾವು ಇವತ್ತು ನೋಡ್ತಾ ಇರೋ ತರ ದೇಶಗಳ ಮಧ್ಯ ನಡಿಯೋ ಯುದ್ಧ ಅಲ್ಲ. ಭವಿಷ್ಯದಲ್ಲಿ ನಡಿಯೋ ಈ ಯುದ್ಧದ ಬಗ್ಗೆ ಜಾಸ್ತಿ ತಿಳಿಯೋಕೆ, “ಹರ್ಮಗೆದೋನ್ ಯುದ್ಧ ಅಂದರೇನು?” ಅನ್ನೋ ಲೇಖನ ಓದಿ.
ಭವಿಷ್ಯ ಚೆನ್ನಾಗಿರುತ್ತೆ ಅನ್ನೋ ನಿರೀಕ್ಷೆಯಿಂದ ನಾವು ಕಾಯಬಹುದಾ?
ದೇವರು “ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ” ಅಂತ ಬೈಬಲ್ ಹೇಳುತ್ತೆ (ಕೀರ್ತನೆ 46:9) ದೇವರು ನಮಗೆ ಮಾತು ಕೊಟ್ಟಿರೋ ಒಳ್ಳೇ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಕೆ, “ಸಂತೋಷದ ಜೀವನಮಾರ್ಗ—ನಿರೀಕ್ಷೆ” ಅನ್ನೋ ಲೇಖನ ಓದಿ.
ದೇವರ ಆಳ್ವಿಕೆ ಬರಲಿ ಅಂತ ಪ್ರಾರ್ಥನೆ ಮಾಡುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. (ಮತ್ತಾಯ 6:9, 10) ದೇವರ ಆಳ್ವಿಕೆ ಅಂದರೆ ದೇವರ ಸರ್ಕಾರ. ಅದು ದೇವರ ಇಷ್ಟವನ್ನ ಇಡೀ ಭೂಮಿಯಲ್ಲಿ ನೆರವೇರೋ ತರ ನೋಡಿಕೊಳ್ಳುತ್ತೆ. ಅದರಲ್ಲಿ ಜಗತ್ತಿನ ಶಾಂತಿ ಭದ್ರತೆ ಕೂಡ ಸೇರಿದೆ. ದೇವರ ಆಳ್ವಿಕೆ ನಿಮಗೆ ಏನೆಲ್ಲ ಒಳ್ಳೇದು ಮಾಡಲಿಕ್ಕಿದೆ ಅಂತ ತಿಳಿದುಕೊಳ್ಳೋಕೆ ದೇವರ ರಾಜ್ಯ ಅಂದರೇನು? ಅನ್ನೋ ವಿಡಿಯೋ ನೋಡಿ.
ಉಕ್ರೇನ್‌ನಲ್ಲಿ 1,29,000ಕ್ಕೂ ಹೆಚ್ಚು ಯೆಹೋವನ ಸಾಕ್ಷಿಗಳಿದ್ದಾರೆ. ಅವರು ಬೇರೆ ದೇಶಗಳಲ್ಲಿ ಇರೋ ಯೆಹೋವನ ಸಾಕ್ಷಿಗಳ ತರಾನೇ ಯೇಸು ಮಾತನ್ನ ಪಾಲಿಸ್ತಾ, ಯಾವುದೇ ರಾಜಕೀಯ ಪಕ್ಷಗಳಿಗೆ ಬೆಂಬಲಿಸಲ್ಲ, ಅದೇ ಸಮಯದಲ್ಲಿ ಯುದ್ಧದಲ್ಲಿ ಭಾಗವಹಿಸೋದು ಇಲ್ಲ. (ಯೋಹಾನ 18:36) ಯುದ್ಧಗಳನ್ನೂ ಸೇರಿಸಿ ಎಲ್ಲ ಮಾನವ ಸಮಸ್ಯೆಗಳಿಗೆ ‘ದೇವರ ಆಳ್ವಿಕೆನೇ’ ಪರಿಹಾರ ಅನ್ನೋ “ಸಿಹಿಸುದ್ದಿ”ಯನ್ನ ಯೆಹೋವನ ಸಾಕ್ಷಿಗಳು ಲೋಕದ ಎಲ್ಲ ಕಡೆಗಳಲ್ಲಿ ಸಾರುತ್ತಾ ಇದ್ದಾರೆ. (ಮತ್ತಾಯ 24:14) ಬೈಬಲ್‌ನಲ್ಲಿರೋ ಈ ನಿರೀಕ್ಷೆಯನ್ನ ಹುಟ್ಟಿಸೋ ಸಿಹಿಸುದ್ದಿ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಕೆ ದಯವಿಟ್ಟು ನಮ್ಮನ್ನ ಸಂಪರ್ಕಿಸಿ.
a ಈ ಭವಿಷ್ಯವಾಣಿ ಬಗ್ಗೆ ಇನ್ನಷ್ಟು ತಿಳಿಯೋಕೆ, “ಅಂತ್ಯಕಾಲದ ‘ಉತ್ತರ ರಾಜ’” ಮತ್ತು “ಈಗ ‘ಉತ್ತರ ರಾಜ’ ಯಾರು?” ಅನ್ನೋ ಲೇಖನಗಳನ್ನ ನೋಡಿ.