ಗೀತೆ 142
ಬಾಳಲ್ಲಿರಲಿ ಬಲವಾದ ನಿರೀಕ್ಷೆ
-
1. ಶಾಶ್ವತ ಜೀವವ ಪಡೆಯಲು ಲೋಕ
ಮಾಡುವ ಸಾಧನೆ ವಿಫಲ ನಿಜ;
ಯಾವ ನಿರೀಕ್ಷೆಯೂ ಇಲ್ಲದೆ ಈಗ
ದೂರಕೆ ಸಾಗಿದೆ ಈ ಲೋಕ.
(ಪಲ್ಲವಿ)
ಹಾಡಿ ಯೆಹೋವಗೆ ಕೀರ್ತನೆಯ!
ನಿರೀಕ್ಷೆಯ ನೀಡಿದನು ಒಡೆಯ.
ಬಾಳ ಪ್ರಯಾಣಕೆ ಇಲ್ಲ ಭಯ;
ನಿರೀಕ್ಷೆಯು ಲಂಗರದಂತೆ ಸ್ಥಿರ.
-
2. ಲೋಕವು ಕೇಳಿದೆ “ಇನ್ನೂ ಎಷ್ಟು ಕಾಲ?”
ಆದರೆ ಆ ದಿನ ಸನಿಹವಿದೆ.
ಸೃಷ್ಟಿಯು ಕಾಯುತ ನಿಂತಿದೆ ಈಗ;
ಸಾರುತ ಸಾಗುವೆವು ಮುಂದೆ.
(ಪಲ್ಲವಿ)
ಹಾಡಿ ಯೆಹೋವಗೆ ಕೀರ್ತನೆಯ!
ನಿರೀಕ್ಷೆಯ ನೀಡಿದನು ಒಡೆಯ.
ಬಾಳ ಪ್ರಯಾಣಕೆ ಇಲ್ಲ ಭಯ;
ನಿರೀಕ್ಷೆಯು ಲಂಗರದಂತೆ ಸ್ಥಿರ.
(ಕೀರ್ತ. 27:14; ಪ್ರಸಂ. 1:14; ಯೋವೇ. 2:1; ಹಬ. 1:2, 3; ರೋಮ. 8:22 ಸಹ ನೋಡಿ.)