ಗೀತೆ 103
ಮಂದೆಯನ್ನು ಕಾಯುವ ಪಾಲಕರು
(ಎಫೆಸ 4:8)
-
1. ಮಂದೆಯ ಕಾಯೋ ಪಾಲಕರ,
ನೇಮಿಸಿದ ದೇವ;
ತ್ಯಾಗವ ಮಾಡಿ ಪಾಲಕರು
ಕಾಯುವರು ಜೀವ.
(ಪಲ್ಲವಿ)
ದೇವರ ಪ್ರೀತಿಯ ಏರ್ಪಾಡು
ಮಂದೆಯ ಪಾಲಕರು;
ನಾವು ವಿಧೇಯತೆ ತೋರೋಣ
ಗೌರವಿಸಿ ಅವರ.
-
2. ನೊಂದಿರುವಾಗ ಈ ಹೃದಯ
ಬೇಡುತೆ ಆರೈಕೆ;
ತೋರುವರಾಗ ಕಾಳಜಿಯ,
ಸ್ನೇಹಿತರ ಹಾಗೆ.
(ಪಲ್ಲವಿ)
ದೇವರ ಪ್ರೀತಿಯ ಏರ್ಪಾಡು
ಮಂದೆಯ ಪಾಲಕರು;
ನಾವು ವಿಧೇಯತೆ ತೋರೋಣ
ಗೌರವಿಸಿ ಅವರ.
-
3. ಬೀಳದ ಹಾಗೆ ಕಾಯುವರು
ಪ್ರೀತಿಯ ಕೈಯಿಂದ;
ಜೀವದ ದಾರಿ ತೋರುವರು
ಕೋಮಲ ಮಾತಿಂದ.
(ಪಲ್ಲವಿ)
ದೇವರ ಪ್ರೀತಿಯ ಏರ್ಪಾಡು
ಮಂದೆಯ ಪಾಲಕರು;
ನಾವು ವಿಧೇಯತೆ ತೋರೋಣ
ಗೌರವಿಸಿ ಅವರ.
(ಯೆಶಾ. 32:1, 2; ಯೆರೆ. 3:15; ಯೋಹಾ. 21:15-17; ಅ. ಕಾ. 20:28 ಸಹ ನೋಡಿ.)