ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 100

ಅತಿಥಿಸತ್ಕಾರ ಮಾಡೋಣ

ಅತಿಥಿಸತ್ಕಾರ ಮಾಡೋಣ

(ಅಪೊಸ್ತಲರ ಕಾರ್ಯ 17:7)

  1. 1. ಯೆಹೋವನ ಪ್ರೀತಿ ಮತ್ತು ಕಾಳಜಿ

    ಕಾಣುತ್ತೆ ಎಲ್ಲೆಲ್ಲೂ ಈ ಸೃಷ್ಟಿಯಲ್ಲಿ

    ಉದಯಿಸೋ ಸೂರ್ಯ,

    ಬೆಳಗೋ ಚಂದಿರ

    ಪ್ರತಿ ಕೊಡುಗೆಯೂ ಸುಂದರ.

    ದೀನರಿಗೆ ಉದಾರತೆ ತೋರಿಸಿ

    ಅನುಕರಿಸೋಣ ದೇವ ಮಾದರಿ.

    ನಿಸ್ವಾರ್ಥವಾಗಿರೋ

    ವಿಶಾಲ ಹೃದಯ

    ಮೆಚ್ಚಿಸುತೆ ನಮ್ಮ ದೇವರ.

  2. 2. ಸಂಪೂರ್ಣ ಮನದಿ ನೀಡಿ ಸಾಂತ್ವನ

    ತಂಗಾಳಿಯ ಹಾಗೆ ಮುದ ನೀಡೋಣ.

    ಹೊಸಬರಾದರೂ,

    ವಿದೇಶಿ ಆದರೂ,

    ಹಂಚೋಣ ನಮ್ಮ ಪ್ರೀತಿಯನು.

    ಆತಿಥ್ಯ ತೋರೋಣ ಲುದ್ಯಳ ಹಾಗೆ

    ಆಶ್ರಯ ನೀಡೋಣ ಎಂದೆಂದೂ ಹೀಗೆ.

    ಇಂಥ ಪ್ರೀತಿಯನು

    ಮರೆಯದೆ ದೇವ

    ಪ್ರತಿಫಲವನು ನೀಡುವ.