ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 32

ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!

ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!

(1 ಕೊರಿಂಥ 15:58)

1. ಜನಾಂಗಗಳ ಕ್ಲೇಶ ಅಪಾರ.

ಅವರ ಭವಿಷ್ಯ ಭಯಾನಕ.

ನಾವೋ ಸ್ಥಿರಚಿತ್ತ ನಿಶ್ಚಲರು,

ದೇವರ ಸೇವಕರು.

(ಪಲ್ಲವಿ)

ಸ್ಥಿರಚಿತ್ತರಾಗಿದ್ದು,

ಲೋಕದಿ ಬೇರ್ಪಟ್ಟಿದ್ದು,

ಕಾಪಾಡಿಕೊಳ್ಳುವ ಸಮಗ್ರತೆಯನ್ನು.

2. ಲೋಕದಿ ಪ್ರಲೋಭನೆ ಹೇರಳ.

ಸ್ವಸ್ಥಚಿತ್ತತೆ ನಮಗವಶ್ಯ.

ನಡೆದರೆ ದೇವವಾಕ್ಯದಂತೆ,

ಪ್ರತಿಫಲ ಭದ್ರತೆ.

(ಪಲ್ಲವಿ)

ಸ್ಥಿರಚಿತ್ತರಾಗಿದ್ದು,

ಲೋಕದಿ ಬೇರ್ಪಟ್ಟಿದ್ದು,

ಕಾಪಾಡಿಕೊಳ್ಳುವ ಸಮಗ್ರತೆಯನ್ನು.

3. ದೇವರ ಹೃತ್ಪೂರ್ವಕ ಸ್ತುತಿಸಿ.

ಕರ್ತನ ಸೇವೇಲಿ ಭಾಗಿಯಾಗಿ.

ಬಿಡದೆ ಸುವಾರ್ತೆಯನ್ನು ಸಾರಿ,

ಬರುತೆ ಅಂತ್ಯ ಖಾತ್ರಿ.

(ಪಲ್ಲವಿ)

ಸ್ಥಿರಚಿತ್ತರಾಗಿದ್ದು,

ಲೋಕದಿ ಬೇರ್ಪಟ್ಟಿದ್ದು,

ಕಾಪಾಡಿಕೊಳ್ಳುವ ಸಮಗ್ರತೆಯನ್ನು.

(ಲೂಕ 21:9; 1 ಪೇತ್ರ 4:7 ಸಹ ನೋಡಿ.)