ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 109

ಯೆಹೋವನ ಜ್ಯೇಷ್ಠ ಪುತ್ರನಿಗೆ ಜೈ!

ಯೆಹೋವನ ಜ್ಯೇಷ್ಠ ಪುತ್ರನಿಗೆ ಜೈ!

(ಇಬ್ರಿಯ 1:6)

1. ದೇವರ ಜ್ಯೇಷ್ಠಗೆ,

ನೇಮಿತ ರಾಜಗೆ ಜೈ.

ಸತ್ಯ, ನ್ಯಾಯವಿರುವ

ಆತನಾಳ್ವಿಕೆಗೆ ಜೈ.

ಘನಮಾನದಿಂದಾತ

ದೇವರ ನಾಮವ

ಪವಿತ್ರೀಕರಿಸುವ,

ಕೀರ್ತಿಸಿ ದೇವರ.

(ಪಲ್ಲವಿ)

ದೇವರ ಜ್ಯೇಷ್ಠಗೆ,

ದೇವಾಭಿಷಿಕ್ತಗೆ ಜೈ!

ಚೀಯೋನ ಬೆಟ್ಟದಿಂದ

ಆಳುತ್ತಾನೆ ಈಗ ಸೈ!

2. ದೇವರ ಜ್ಯೇಷ್ಠಗೆ,

ಜೀವತೆತ್ತವಗೆ ಜೈ.

ಮೌಲ್ಯ ತೆತ್ತುದರಿಂದ

ಪಾಪಕ್ಷಮೆ ಲಭ್ಯ ಸೈ.

ಕಾಯುತ್ತಿದ್ದಾಳೆ ವಧು,

ಶ್ವೇತ ಭೂಷಿತಳು.

ಸ್ವರ್ಗದ ಈ ವಿವಾಹ

ಆಳಿಕೆಗೆ ಸಾಕ್ಷ್ಯ.

(ಪಲ್ಲವಿ)

ದೇವರ ಜ್ಯೇಷ್ಠಗೆ,

ದೇವಾಭಿಷಿಕ್ತಗೆ ಜೈ!

ಚೀಯೋನ ಬೆಟ್ಟದಿಂದ

ಆಳುತ್ತಾನೆ ಈಗ ಸೈ!