ಗೀತೆ 30
ಯೆಹೋವನು ತನ್ನ ಆಳ್ವಿಕೆಯನ್ನು ಆರಂಭಿಸುತ್ತಾನೆ
1. ಇದು ಮಹಿಮಾ ದಿನ, ದೇವಾಳ್ವಿಕೆಯ ದಿನ.
ಮೂಲೆಗಲ್ಲು ಚೀಯೋನಿನಲ್ಲಿದೆ,
ಸ್ವರವೆತ್ತಿ ಹಾಡಿರಿ, ಹರ್ಷಿಸಿ ಸ್ತುತಿಸಿರಿ,
ಕ್ರಿಸ್ತ ರಕ್ಷಕ ಪಟ್ಟವೇರಿರುತ್ತಾನೆ.
(ಪಲ್ಲವಿ)
ದೇವರಾಜ್ಯ, ತರುವಿ ಏನು?
ಸತ್ಯ ನೀತಿ ಜಯವನ್ನು.
ತರುವಿ ನೀನು ಇನ್ನೇನನ್ನು?
ನಿತ್ಯಜೀವ, ಹರ್ಷವನ್ನು.
ವಿಶ್ವರಾಜನ ಸ್ತುತಿಸು,
ಆತ ನಂಬಿಗಸ್ತನು.
2. ಇಲ್ಲಿದೆ ಕ್ರಿಸ್ತ ರಾಜ್ಯ, ಅರ್ಮಗೆದೋನ್ ಸಮೀಪ.
ಸೈತಾನ ವ್ಯವಸ್ಥೆ ನಶಿಸುತೆ.
ಇದೇ ಸಾರೋ ಸಮಯ, ಕೇಳದವರನೇಕ;
ದೀನರು ಪಕ್ಷವಹಿಸೋ ಕಾಲ ಇದೇ.
(ಪಲ್ಲವಿ)
ದೇವರಾಜ್ಯ, ತರುವಿ ಏನು?
ಸತ್ಯ ನೀತಿ ಜಯವನ್ನು.
ತರುವಿ ನೀನು ಇನ್ನೇನನ್ನು?
ನಿತ್ಯಜೀವ, ಹರ್ಷವನ್ನು.
ವಿಶ್ವರಾಜನ ಸ್ತುತಿಸು,
ಆತ ನಂಬಿಗಸ್ತನು.
3. ಅರಸ ಅಮೂಲ್ಯನು, ನಮಗೆಷ್ಟೋ ಇಷ್ಟನು,
ಒಪ್ಪುವೆವಾತನ ಆಳ್ವಿಕೆಯ.
ಆಲಯ ಪ್ರವೇಶಿಸಿ, ದೇವಾನುಗ್ರಹ ಬೇಡಿ,
ಆತ ಸರ್ವವನ್ನಾಳೋ ದಿನ ಸಮೀಪ.
(ಪಲ್ಲವಿ)
ದೇವರಾಜ್ಯ, ತರುವಿ ಏನು?
ಸತ್ಯ ನೀತಿ ಜಯವನ್ನು.
ತರುವಿ ನೀನು ಇನ್ನೇನನ್ನು?
ನಿತ್ಯಜೀವ, ಹರ್ಷವನ್ನು.
ವಿಶ್ವರಾಜನ ಸ್ತುತಿಸು,
ಆತ ನಂಬಿಗಸ್ತನು.
(2 ಸಮು. 7:22; ದಾನಿ. 2:44; ಪ್ರಕ. 7:15 ಸಹ ನೋಡಿ.)