ಗೀತೆ 115
ನಮ್ಮ ದಾರಿಯನ್ನು ಸಫಲಗೊಳಿಸುವುದು
1. ಯಾಹು ವಾಕ್ಯ ಹರ್ಷಕರ,
ದಿನಾಲೂ ಓದೋಣ.
ಧ್ಯಾನಿಸಿ, ಮೆಲುಕು ಹಾಕಿ,
ವಿಧೇಯರಾಗೋಣ.
ನಡೆಸಲಿ ಅದು ನಮ್ಮ
ದಾರಿ, ಯೋಚನೆಯ.
(ಪಲ್ಲವಿ)
ಓದಿ, ಧ್ಯಾನಿಸಿ, ಪಾಲಿಸಿ.
ಯೆಹೋವ ಮೆಚ್ಚುವ.
ನಡೆದು ಆತ ಜೊತೇಲಿ,
ಗಳಿಸಿ ಸಾಫಲ್ಯ.
2. ಇಸ್ರೇಲಿನ ರಾಜರಿಗೆ
ದೇವಾಜ್ಞೆ ಹೀಗಿತ್ತು:
ದೇವ ನೇಮವನು ರಾಜ
ಕೈ ಯಿಂದ ಬರೆದು,
ಓದಬೇಕು ಜೀವಮಾನ
ಆಜ್ಞೆ ಮೀರದಂತೆ.
(ಪಲ್ಲವಿ)
ಓದಿ, ಧ್ಯಾನಿಸಿ, ಪಾಲಿಸಿ.
ಯೆಹೋವ ಮೆಚ್ಚುವ.
ನಡೆದು ಆತ ಜೊತೇಲಿ,
ಗಳಿಸಿ ಸಾಫಲ್ಯ.
3. ಪ್ರತಿ ದಿನ ಓದಿದರೆ,
ಲಭ್ಯ ಸಾಂತ್ವನವು.
ಹೃದಯ ಶಾಂತವಾಗುತೆ,
ನಂಬಿಕೆ ಹಸನು.
ದೇವ ವಾಕ್ಯ ಆಲಿಂಗಿಸೆ
ಆಗ್ವೆವು ಪ್ರೌ ಢರು.
(ಪಲ್ಲವಿ)
ಓದಿ, ಧ್ಯಾನಿಸಿ, ಪಾಲಿಸಿ.
ಯೆಹೋವ ಮೆಚ್ಚುವ.
ನಡೆದು ಆತ ಜೊತೇಲಿ,
ಗಳಿಸಿ ಸಾಫಲ್ಯ.
(ಧರ್ಮೋ. 17:18; 1 ಅರ. 2:3, 4; ಕೀರ್ತ. 119:1; ಯೆರೆ. 7:23 ಸಹ ನೋಡಿ.)