ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 81

“ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

“ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

(ಲೂಕ 17:5)

1. ಓ ಯೆಹೋವ, ನಮ್ಮ ಅಸಂಪೂರ್ಣತೆ

ನಮ್ಮ ಹೃದಯವ ಕೆಡಿಸಿದೆ.

ಸಲೀಸಾದ ಪಾಪ ಪಾಶವೊಂದಿದೆ

ಅದು ನಮ್ಮ ನ್ಯೂನ ನಂಬಿಕೆಯೇ.

(ಪಲ್ಲವಿ)

ಹೆಚ್ಚಿಸೆಮ್ಮ ನಂಬಿಕೆಯ, ಓ ದೇವಾ.

ಅಗತ್ಯವಿರೋದನ್ನು ಕೊಡಪ್ಪಾ.

ಹೆಚ್ಚಿಸೆಮ್ಮ ನಂಬಿಕೆ ಕೃಪೆಯಿಂದ.

ತರಲೆಮ್ಮ ನಡೆ ನಿಂಗೆ ಮಾನ.

2. ನ್ಯೂನ ನಂಬಿಕೆ ನಿನ್ನ ಮೆಚ್ಚಿಸದು.

ನಂಬಬೇಕು ಪ್ರತಿಫಲವನ್ನೂ.

ನಂಬಿಕೆಯು ಗುರಾಣಿಯಂತೆ ದೃಢ

ಬೆದರೆವು ನಾವು ಭವಿಷ್ಯವ.

(ಪಲ್ಲವಿ)

ಹೆಚ್ಚಿಸೆಮ್ಮ ನಂಬಿಕೆಯ, ಓ ದೇವಾ.

ಅಗತ್ಯವಿರೋದನ್ನು ಕೊಡಪ್ಪಾ.

ಹೆಚ್ಚಿಸೆಮ್ಮ ನಂಬಿಕೆ ಕೃಪೆಯಿಂದ.

ತರಲೆಮ್ಮ ನಡೆ ನಿಂಗೆ ಮಾನ.