ಗೀತೆ 60
ಆತನು ನಿನ್ನನ್ನು ಬಲಪಡಿಸುವನು
1. ಸರ್ವಶಕ್ತ ನಿಂಗೆ ಕೊಟ್ಟನು ಸತ್ಯವ,
ತಂದನಾತ ಬೆಳಕಿಗೆ ನಿನ್ನ.
ನೋಡಿ ನಿನ್ನ ಹೃದಯದ ಹಂಬಲವ,
ಹುಡುಕುವ ನಿನ್ನ ಬಯಕೆಯ.
ವಚನ ಕೊಟ್ಟಿ ಚಿತ್ತ ಮಾಡಲು
ನಿನಗೆ ಸಹಾಯ ದೊರೆಯಿತು.
(ಪಲ್ಲವಿ)
ದೇವ ಕೊಂಡ ನಿನ್ನನ್ನು, ಕ್ರಿಸ್ತ ರಕ್ತದಿಂದ.
ನೀನಾತನ ಸ್ವತ್ತು, ಮಾಡುವನು ಸ್ಥಿರ.
ಆತನು ನಡಿಸಿ ಕಾಪಾಡುವ ನಿನ್ನನು.
ಮಾಡ್ವನು ನಿನ್ನನ್ನು ಸ್ಥಿರ, ಬಲಾಢ್ಯನು.
2. ನೀಡಿದನು ದೇವ ತನ್ನೇಕಜಾತನ;
ನಿನ್ನ ಒಳಿತಿಗಾಗಿ ನಿಶ್ಚಯ.
ತನ್ನೇಕಜಾತ ಪುತ್ರನನ್ನೇ ಕೊಟ್ಟಾತ
ಕೊಡದಿರುವನೇ ನಿಂಗೆ ಬಲ?
ನಿನ್ನ ಪ್ರೀತಿಯ ಆತ ಮರೆಯ,
ಪಾಲಿಸುವನು ನಿನ್ನನ್ನು ಆತ.
(ಪಲ್ಲವಿ)
ದೇವ ಕೊಂಡ ನಿನ್ನನ್ನು, ಕ್ರಿಸ್ತ ರಕ್ತದಿಂದ.
ನೀನಾತನ ಸ್ವತ್ತು, ಮಾಡುವನು ಸ್ಥಿರ.
ಆತನು ನಡಿಸಿ ಕಾಪಾಡುವ ನಿನ್ನನು.
ಮಾಡ್ವನು ನಿನ್ನನ್ನು ಸ್ಥಿರ, ಬಲಾಢ್ಯನು.
(ರೋಮ. 8:32; 14:8, 9; ಇಬ್ರಿ. 6:10; 1 ಪೇತ್ರ 2:9 ಸಹ ನೋಡಿ.)