ನಿನ್ನಿಷ್ಟ ನನ್ನ ಆನಂದ (2025ರ ಅಧಿವೇಶನದ ಗೀತೆ)
1. ಸ್ವರ್ಗದಿಂದ ಭೂಮಿಗೆ ಬಂದ,
ಬೆಳಕಂತೆ ಧಾವಿಸಿದ.
ನಿನ್ನ ಇಷ್ಟ ಮಾಡುತ್ತಾ ಕ್ರಿಸ್ತ
ನಿಜ ಸಂತೋಷ ಕಂಡ.
ಹೆಗಲೇರಿ ನಿಂತರೂ ಕಷ್ಟ,
ಶರಣಾಗಿಲ್ಲ ಆತ.
ನನಗಾಗಿ ಮಾದರಿಯಾದ
ನಿನಗೆ ಕೀರ್ತಿ ತಂದ.
(ಪಲ್ಲವಿ)
ನಿನ್ನಿಷ್ಟ ಮಾಡುವಾಗಲೇ
ಸಂತೋಷ ನಾನು ಕಾಣುವೆ.
ಯೆಹೋವನೇ, ನಿನ್ನ ಸೇವೆ
ತುಂಬಾ ಶ್ರೇಷ್ಠ ಬಾಳಲ್ಲಿ.
ನಿನ್ನಿಷ್ಟ ನನ್ನ ಆನಂದ
ನೀ ತೋರೋ ದಾರಿ ಸಂತಸ.
ಎಂಥಾ ಖುಷಿ, ಈ ಕಣ್ಣಲ್ಲಿ
ಘನ ಮಾನ ನೀಡೋದೆ
ನನ್ನಾನಂದ.
2. ಗರ್ಭದಲ್ಲಿ ನಾನಿರುವಾಗ
ನನ್ನ ನೀನು ನೋಡಿರುವೆ.
ನಿನ್ನ ವಾಕ್ಯ ಕೇಳಿದ ಮೇಲೆ
ಕಂಡೆ ನಾನು ನಿನ್ನನ್ನೇ.
ನನ್ನ ಬಾಳು ಸಾರ್ಥಕ ಈಗ
ನಿನಗಾಗಿ ಈ ಪ್ರಾಣ.
ನಿನ್ನ ವಾಕ್ಯ ಸಾರಲೇಬೇಕು
ಅದರಲ್ಲೇ ಸಂತೋಷ.
(ಪಲ್ಲವಿ)
ನಿನ್ನಿಷ್ಟ ಮಾಡುವಾಗಲೇ
ಸಂತೋಷ ನಾನು ಕಾಣುವೆ.
ಯೆಹೋವನೇ, ನಿನ್ನ ಸೇವೆ
ತುಂಬಾ ಶ್ರೇಷ್ಠ ಬಾಳಲ್ಲಿ.
ನಿನ್ನಿಷ್ಟ ನನ್ನ ಆನಂದ
ನೀ ತೋರೋ ದಾರಿ ಸಂತಸ.
ಎಂಥಾ ಖುಷಿ, ಈ ಕಣ್ಣಲ್ಲಿ
ಘನ ಮಾನ ನೀಡೋದೆ
ನನ್ನಾನಂದ . . .
ಎಂದೆಂದೂ ಆನಂದ.
(ಕೀರ್ತನೆ 40:3, 10 ಸಹ ನೋಡಿ)