ಮಾಹಿತಿ ಇರುವಲ್ಲಿ ಹೋಗಲು

‘ನೋಡಿ ನಡೆಯದೆ ನಂಬಿಕೆಯಿಂದ ನಡೆಯಿರಿ’

ಯೆರೂಸಲೇಮಿನ ಮೇಲೆ ಮುತ್ತಿಗೆ ಹಾಕಲು ಬಂದ ರೋಮ್‌ನ ಸೈನಿಕರು ಏನೋ ಕಾರಣದಿಂದ ವಾಪಸ್ಸು ಹೋಗುತ್ತಾರೆ. ಈಗ ಎರಡು ಕ್ರೈಸ್ತ ಕುಟುಂಬಗಳಿಗೆ ಏನು ಮಾಡಬೇಕು ಎನ್ನುವ ಗೊಂದಲ. ಅವರು ಯೇಸುವಿನ ಮಾತಿನಂತೆ ತಮ್ಮೆಲ್ಲ ಆಸ್ತಿಪಾಸ್ತಿಗಳಿದ್ದ ಯೆರೂಸಲೇಮನ್ನು ಬಿಟ್ಟು ದೂರ ಹೋಗುತ್ತಾರಾ? ಈಗ ಅವರು ಮಾಡುವ ನಿರ್ಣಯದ ಮೇಲೆ ಅವರ ಜೀವ ಮತ್ತು ಮರಣ ಆತುಕೊಂಡಿದೆ. ಈ ನಾಟಕ ಬೈಬಲಿನ ನೈಜ ಘಟನೆಗಳನ್ನು ಕಣ್ಣ ಮುಂದೆ ತರುತ್ತೆ. ನಡೆದಂತೆ ಘಟನೆಯನ್ನು ನೈಜವಾಗಿ ತೋರಿಸುವ ಸಲುವಾಗಿ ಕಾದಾಟದ ಕೆಲವು ಸನ್ನಿವೇಶಗಳಿವೆ. ಆದರೆ ಅವನ್ನೇ ಅತಿಯಾಗಿ ಎದ್ದು ಕಾಣುವಂತೆ ಚಿತ್ರಿಸಲಾಗಿಲ್ಲ. ಒಂದನೇ ಶತಮಾನದ ಕ್ರೈಸ್ತರ ಸನ್ನಿವೇಶ ಅರ್ಥಮಾಡಿಸಲು ಹಿಂಸೆಯ ದೃಶ್ಯವನ್ನು ಸೇರಿಸಲಾಗಿದೆ ಅಷ್ಟೆ.