ಎರಡನೇ ಸಮುವೇಲ 22:1-51
22 ಯೆಹೋವ ದಾವೀದನನ್ನ ಅವನ ಎಲ್ಲ ಶತ್ರುಗಳ ಕೈಯಿಂದ,+ ಸೌಲನ ಕೈಯಿಂದ+ ಬಿಡಿಸಿದಾಗ ದಾವೀದ ಯೆಹೋವನಿಗಾಗಿ ಈ ಹಾಡನ್ನ ಹಾಡಿದ.+
2 “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ,+ ಆತನೇ ನನ್ನ ರಕ್ಷಕ.+
3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ.
4 ಸ್ತುತಿಗೆ ಯೋಗ್ಯನಾಗಿರೋ ಯೆಹೋವನನ್ನ ನಾನು ಕೂಗಿ ಕರಿತೀನಿ,ಆತನು ಶತ್ರುಗಳಿಂದ ನನ್ನನ್ನ ಬಿಡಿಸ್ತಾನೆ.
5 ನನ್ನ ಸುತ್ತ ಸಾವಿನ ಅಲೆಗಳು ಎದ್ದವು,+ಅಯೋಗ್ಯ ಜನ್ರು ತಟ್ಟನೆ ಪ್ರವಾಹದ ತರ ಬಂದು ನನ್ನನ್ನ ಹೆದರಿಸಿದ್ರು.+
6 ಸಮಾಧಿಯ* ಹಗ್ಗಗಳು ನನ್ನನ್ನ ಸುತ್ಕೊಂಡಿವೆ,+ಸಾವಿನ ಉರ್ಲು ನನ್ನ ಮುಂದಿದೆ.+
7 ಕಷ್ಟದಲ್ಲಿರುವಾಗ ಯೆಹೋವನನ್ನ ಕರೆದೆ,+ನನ್ನ ದೇವರನ್ನ ಕರಿತಾ ಇದ್ದೆ.
ಆಗ ಆತನು ನನ್ನ ಕೂಗನ್ನ ತನ್ನ ಆಲಯದಿಂದ ಕೇಳಿಸ್ಕೊಂಡನು,ಸಹಾಯಕ್ಕಾಗಿ ನಾನು ಮಾಡಿದ ಪ್ರಾರ್ಥನೆ ಆತನ ಕಿವಿ ಮುಟ್ತು.+
8 ಭೂಮಿ ಕಂಪಿಸಿ ಅಲುಗಾಡಿತು,+ಆತನಿಗೆ ಕೋಪ ಬಂತುಆಕಾಶದ ಅಸ್ತಿವಾರ ನಡುಗಿ, ಅದುರಿತು.+
9 ಆತನ ಮೂಗಿಂದ ಹೊಗೆ ಬಂತು,ಆತನ ಬಾಯಿಂದ ಸುಡೋ ಬೆಂಕಿ ಬಂತು,+ಆತನಿಂದ ಉರಿಯೋ ಕೆಂಡ ಬಂತು.
10 ಆತನು ಇಳಿದು ಬರುವಾಗ ಆಕಾಶ ಬಗ್ಗಿಸಿದನು,+ಆತನ ಪಾದಗಳ ಕೆಳಗೆ ಕಪ್ಪು ಮೋಡ ಇತ್ತು.+
11 ಆತನು ಕೆರೂಬಿಯ ಮೇಲೆ+ ಹತ್ತಿ ಹಾರುತ್ತಾ ಬಂದನು.
ದೇವದೂತನ* ರೆಕ್ಕೆಗಳ ಮೇಲೆ ಕಾಣಿಸ್ಕೊಂಡನು.+
12 ಆತನು ದಟ್ಟವಾದ ಕಪ್ಪು ಮೋಡಗಳಲ್ಲಿ,ಕತ್ತಲನ್ನ ತನ್ನ ಸುತ್ತ ಡೇರೆ ತರ ಹಾಕೊಂಡನು.+
13 ಆತನ ಮುಂದಿದ್ದ ಉಜ್ವಲ ಬೆಳಕಿಂದ ಉರಿಯೋ ಕೆಂಡಗಳು ಬಂದವು.
14 ಆಮೇಲೆ ಯೆಹೋವ ಆಕಾಶದಿಂದ ಗುಡುಗಿದನು,+ಸರ್ವೋನ್ನತ ತನ್ನ ಸ್ವರ ಕೇಳೋ ಹಾಗೆ ಮಾಡಿದನು.+
15 ಆತನು ತನ್ನ ಬಾಣಗಳನ್ನ+ ಬಿಟ್ಟು ಶತ್ರುಗಳು ದಿಕ್ಕುಪಾಲಾಗೋ ಹಾಗೆ ಮಾಡಿದನು,ಮಿಂಚಿಂದ ಅವರು ಗಲಿಬಿಲಿ ಆಗೋ ತರ ಮಾಡಿದನು.+
16 ಯೆಹೋವನ ಗದರಿಕೆಯಿಂದ, ಆತನ ಮೂಗಿಂದ ಬಂದ ರಭಸವಾದ ಉಸಿರಿಂದ+ಸಮುದ್ರದ ತಳ ಕಾಣಿಸ್ತು,+ಭೂಮಿಯ ತಳಪಾಯ ಬಟ್ಟಬಯಲಾಯ್ತು.
17 ಆತನು ಸ್ವರ್ಗದಿಂದ ಕೈಚಾಚಿ,ನನ್ನನ್ನ ಹಿಡಿದು ಆಳವಾದ ನೀರಿಂದ ಮೇಲೆ ಎತ್ತಿದನು.+
18 ನನ್ನ ಬಲಿಷ್ಠ ಶತ್ರುವಿನಿಂದ ನನ್ನನ್ನ ಬಿಡಿಸಿ ಕಾಪಾಡಿದನು+ದ್ವೇಷಿಸುವವರ ಕೈಯಿಂದ, ನನಗಿಂತ ಶಕ್ತಿಶಾಲಿಗಳ ಕೈಯಿಂದ ರಕ್ಷಿಸಿದನು.
19 ನನ್ನ ಕಷ್ಟದ ದಿನಗಳಲ್ಲಿ ಅವರು ನನಗೆ ತಿರುಗಿಬಿದ್ರು,+ಆದ್ರೆ ಯೆಹೋವ ನನಗೆ ಬೆಂಬಲವಾಗಿ ನಿಂತನು.
20 ಆತನು ನನ್ನನ್ನ ಸುರಕ್ಷಿತ ಜಾಗಕ್ಕೆ* ಕರ್ಕೊಂಡು ಬಂದನು,+ನಾನಂದ್ರೆ ಆತನಿಗೆ ಇಷ್ಟ, ಅದಕ್ಕೇ ನನ್ನನ್ನ ಕಾಪಾಡಿದನು.+
21 ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ತಾನೆ,+ನನ್ನ ಮುಗ್ಧತೆಗೆ* ತಕ್ಕ ಬಹುಮಾನ ಕೊಡ್ತಾನೆ.+
22 ಯಾಕಂದ್ರೆ ಯೆಹೋವನ ದಾರಿಯಲ್ಲೇ ನಡಿತಿದ್ದೀನಿ,ನನ್ನ ದೇವರನ್ನ ಬಿಟ್ಟು ನಾನು ಕೆಟ್ಟದು ಮಾಡಲಿಲ್ಲ.
23 ಆತನ ತೀರ್ಪುಗಳೆಲ್ಲ+ ನನ್ನ ಮುಂದೆ ಇದೆ,ಆತನ ನಿಯಮಗಳನ್ನ ಬಿಟ್ಟು ಅಡ್ಡದಾರಿ ಹಿಡಿಯಲ್ಲ.+
24 ನಾನು ಅವನ ಮುಂದೆ ತಪ್ಪಿಲ್ಲದವನಾಗಿ+ ಇರ್ತಿನಿ,ತಪ್ಪಿಂದ ದೂರ ಇರ್ತಿನಿ.+
25 ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ಲಿ,+ಆತನು ಕಣ್ಣಾರೆ ನೋಡಿದ ನನ್ನ ಮುಗ್ಧತೆಗೆ ತಕ್ಕಂತೆ ಬಹುಮಾನ ಕೊಡ್ಲಿ.+
26 ನಿಷ್ಠಾವಂತನ ಜೊತೆ ನಿಷ್ಠೆಯಿಂದ ನಡ್ಕೊಳ್ತೀಯ,+ನಿಷ್ಕಳಂಕನ ಜೊತೆ ನಿಷ್ಕಳಂಕವಾಗಿ ವ್ಯವಹರಿಸ್ತೀಯ.+
27 ಪ್ರಾಮಾಣಿಕನ ಜೊತೆ ಪ್ರಾಮಾಣಿಕನಾಗಿ ಇರ್ತಿಯ,+ವಕ್ರನ ಜೊತೆ ಜಾಣನಾಗಿ ಇರ್ತಿಯ.+
28 ದೀನರನ್ನ ರಕ್ಷಿಸ್ತೀಯ,+ಆದ್ರೆ ಗರ್ವಿಷ್ಠರನ್ನ, ನೋಡೋಕ್ಕೂ ಇಷ್ಟಪಡದೆ ತಳ್ಳಿಹಾಕ್ತೀಯ.+
29 ಯೆಹೋವನೇ, ನೀನೇ ನನ್ನ ದೀಪ.+
ಯೆಹೋವನೇ ನನ್ನ ಅಂಧಕಾರವನ್ನ ಬೆಳಗಿಸುವವನು.+
30 ನಿನ್ನ ಸಹಾಯದಿಂದ ಲೂಟಿಗಾರರ ಮೇಲೆ ದಾಳಿ ಮಾಡಬಲ್ಲೆ,ದೇವರ ಬಲದಿಂದ ನಾನು ಗೋಡೆ ಜಿಗಿಬಲ್ಲೆ.+
31 ಸತ್ಯ ದೇವರ ದಾರಿ ಪರಿಪೂರ್ಣ,+ಯೆಹೋವನ ಮಾತುಗಳು ಶುದ್ಧ.+
ಆತನಲ್ಲಿ ಆಶ್ರಯಪಡೆಯೋ ಎಲ್ರಿಗೂ ಆತನು ಗುರಾಣಿ.+
32 ಯೆಹೋವನನ್ನ ಬಿಟ್ಟು ಬೇರೆ ದೇವರಿದ್ದಾನಾ?+
ನಮ್ಮ ದೇವರನ್ನ ಬಿಟ್ಟು ಬೇರೆ ಬಂಡೆ ಇದ್ಯಾ?+
33 ಸತ್ಯ ದೇವರು ನನ್ನ ಬಲವಾದ ಕೋಟೆ,+ಆತನು ನನ್ನ ದಾರಿ ಸುಗಮ ಮಾಡ್ತಾನೆ.+
34 ನನ್ನ ಕಾಲುಗಳನ್ನ ಜಿಂಕೆ ಕಾಲುಗಳ ತರ ಮಾಡ್ತಾನೆ,ನನ್ನನ್ನ ಉನ್ನತ ಸ್ಥಳಗಳಲ್ಲಿ ನಿಲ್ಲಿಸ್ತಾನೆ.+
35 ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತಿ ಕೊಡ್ತಾನೆ,ಹಾಗಾಗಿ ನನ್ನ ಕೈಗಳು ತಾಮ್ರದ ಬಿಲ್ಲನ್ನೂ ಬಗ್ಗಿಸುತ್ತೆ.
36 ನನಗೆ ನಿನ್ನ ರಕ್ಷಣೆಯ ಗುರಾಣಿ ಕೊಡ್ತೀಯ,ನಿನ್ನ ದೀನತೆ ನನ್ನನ್ನ ಮೇಲೆ ಏರಿಸುತ್ತೆ.+
37 ನನ್ನ ಕಾಲು* ಜಾರದ ಹಾಗೆ,+ನೀನು ದಾರಿಯನ್ನ ಅಗಲ ಮಾಡ್ತೀಯ.
38 ನನ್ನ ಶತ್ರುಗಳ ಹಿಂದೆ ಹೋಗಿ ಸರ್ವನಾಶ ಮಾಡ್ತೀಯ,ಅವರು ನಾಶ ಆಗೋ ತನಕ ನಾನು ವಾಪಸ್ ಬರಲ್ಲ.
39 ಅವರು ಎದ್ದೇಳದ ಹಾಗೆ ಅಳಿಸಿಹಾಕ್ತೀನಿ, ತುಳಿದುಬಿಡ್ತಿನಿ.+
ಅವರು ನನ್ನ ಕಾಲ ಕೆಳಗೆ ಬೀಳ್ತಾರೆ.
40 ಯುದ್ಧಕ್ಕೆ ಬೇಕಾದ ಬಲ ಕೊಟ್ಟು ನನ್ನನ್ನ ಸಜ್ಜು ಮಾಡ್ತೀಯ,+ಶತ್ರುಗಳು ಕುಸಿದು ನನ್ನ ಕೆಳಗೆ ಬೀಳೋ ಹಾಗೆ ಮಾಡ್ತೀಯ.+
41 ಶತ್ರುಗಳು ನನ್ನನ್ನ ಬಿಟ್ಟು ಓಡಿ ಹೋಗೋ ತರ ಮಾಡ್ತೀಯ,+ನನ್ನನ್ನ ದ್ವೇಷಿಸುವವರನ್ನ ನಾಶ ಮಾಡ್ತೀಯ.*+
42 ಅವರು ಸಹಾಯಕ್ಕಾಗಿ ಕೂಗ್ತಾರೆ ಆದ್ರೆ ಯಾರೂ ಬರಲ್ಲ,ಯೆಹೋವನನ್ನ ಕೂಗಿದ್ರೂ ಆತನು ಉತ್ತರ ಕೊಡಲ್ಲ.+
43 ಅವರನ್ನ ಕುಟ್ಟಿ ಧೂಳಿನ ತರ ಮಾಡ್ತೀನಿ,ತುಳಿದು, ಬೀದಿಯ ಮಣ್ಣಿನ ತರ ಪುಡಿಪುಡಿ ಮಾಡ್ತೀನಿ.
44 ತಪ್ಪು ಹುಡುಕೋ ಜನ್ರಿಂದ ನನ್ನನ್ನ ಕಾಪಾಡ್ತೀಯ,+ನನ್ನನ್ನ ಕಾಪಾಡಿ ದೇಶದ ಮುಖ್ಯಸ್ಥ ಆಗೋ ಹಾಗೆ ಮಾಡ್ತೀಯ,+ನನಗೆ ಪರಿಚಯನೇ ಇಲ್ಲದ ಜನ್ರು ನನ್ನ ಸೇವೆ ಮಾಡ್ತಾರೆ.+
45 ವಿದೇಶಿಯರು ನನ್ನ ಮುಂದೆ ಅಂಗಲಾಚ್ತಾರೆ,+ನನ್ನ ಬಗ್ಗೆ ಕೇಳಿಸ್ಕೊಳ್ಳೋ ವಿಷ್ಯಗಳಿಂದ ನನಗೆ ಬೆಲೆ ಕೊಡ್ತಾರೆ.
46 ವಿದೇಶಿಯರು ಧೈರ್ಯ ಕಳ್ಕೊಳ್ತಾರೆ,ತಮ್ಮ ಆಶ್ರಯ ಸ್ಥಳಗಳಿಂದ ನಡುಗ್ತಾ ಹೊರಗೆ ಬರ್ತಾರೆ.
47 ಯೆಹೋವ ಜೀವ ಇರೋ ದೇವರು! ನನ್ನ ಬಂಡೆಯಾಗಿರೋ ಆತನಿಗೆ ಹೊಗಳಿಕೆ ಸಿಗಲಿ!+
ನನ್ನ ರಕ್ಷಣೆಯ ಬಂಡೆಯಾಗಿರೋ ದೇವರಿಗೆ ಗೌರವ ಸಲ್ಲಲಿ.+
48 ಸತ್ಯ ದೇವರು ನನ್ನ ಪರವಾಗಿ ಸೇಡು ತೀರಿಸ್ತಾನೆ,+ಜನ್ರನ್ನ ನನ್ನ ಅಧೀನಕ್ಕೆ ತರ್ತಾನೆ.+
49 ಶತ್ರುಗಳಿಂದ ನನ್ನನ್ನ ಕಾಪಾಡ್ತಾನೆ.
ದಾಳಿ ಮಾಡೋರಿಂದ ನನ್ನನ್ನ ನೀನು ಮೇಲೆ ಎತ್ತಿದೆ,+ಹಿಂಸೆ ಕೊಡುವವನ ಕೈಯಿಂದ ನನ್ನನ್ನ ಬಿಡಿಸಿದೆ.+
50 ಯೆಹೋವನೇ, ನಿನಗೆ ದೇಶಗಳ ಮಧ್ಯದಲ್ಲಿ ಧನ್ಯವಾದ ಹೇಳ್ತೀನಿ,+ನಿನ್ನ ಹೆಸ್ರನ್ನ ಗೌರವಿಸೋಕೆ ಹಾಡು ಹಾಡ್ತೀನಿ.*+
51 ಆತನು ನೇಮಿಸಿದ ರಾಜನಿಗಾಗಿ ದೊಡ್ಡದೊಡ್ಡ ರಕ್ಷಣಾ ಕಾರ್ಯಗಳನ್ನ ಮಾಡ್ತಾನೆ,*+ತನ್ನ ಅಭಿಷಿಕ್ತನಾದ ದಾವೀದನ ಕಡೆಗೆ,ಅವನ ಸಂತತಿ ಕಡೆಗೆ ಶಾಶ್ವತ ಪ್ರೀತಿಯನ್ನ ಯಾವಾಗ್ಲೂ ತೋರಿಸ್ತಾನೆ.+
ಪಾದಟಿಪ್ಪಣಿ
^ ಅಥವಾ “ನನ್ನ ಬಲಿಷ್ಠ ರಕ್ಷಕನ.”
^ ಅಥವಾ “ಉನ್ನತ ಸ್ಥಳ.”
^ ಅಥವಾ “ಗಾಳಿಯ.”
^ ಅಥವಾ “ವಿಶಾಲ ಜಾಗಕ್ಕೆ.”
^ ಅಕ್ಷ. “ಕೈಗಳ ಶುದ್ಧತೆಗೆ.”
^ ಅಥವಾ “ಕಣಕಾಲು.”
^ ಅಕ್ಷ. “ಸದ್ದಡಗಿಸ್ತೀಯ.”
^ ಅಥವಾ “ಸಂಗೀತ ರಚಿಸ್ತೀನಿ.”
^ ಅಥವಾ “ಭಾರೀ ಜಯ ಕೊಡ್ತಾನೆ.”