ಒಂದನೇ ಪೂರ್ವಕಾಲವೃತ್ತಾಂತ 22:1-19

  • ದೇವಾಲಯಕ್ಕಾಗಿ ದಾವೀದನ ತಯಾರಿ (1-5)

  • ದಾವೀದನಿಂದ ಸೊಲೊಮೋನನಿಗೆ ನಿರ್ದೇಶನ (6-16)

  • ಸೊಲೊಮೋನನಿಗೆ ಸಹಾಯ ಮಾಡೋಕೆ ನಾಯಕರಿಗೆ ಆಜ್ಞೆ (17-19)

22  ದಾವೀದ “ಸತ್ಯ ದೇವರಾದ ಯೆಹೋವನ ಆಲಯ ಇದೇ. ಇಸ್ರಾಯೇಲ್ಯರು ಅರ್ಪಿಸೋ ಸರ್ವಾಂಗಹೋಮದ ಯಜ್ಞವೇದಿ ಇದೇ”+ ಅಂದ. 2  ಆಮೇಲೆ ದಾವೀದ ಇಸ್ರಾಯೇಲ್‌ ದೇಶದಲ್ಲಿದ್ದ ವಿದೇಶಿಯರನ್ನ ಒಂದು ಕಡೆ ಸೇರಿಸೋಕೆ ಹೇಳಿ,+ ಕಲ್ಲು ಒಡೆಯೋ ಕೆಲಸವನ್ನ ಅವ್ರಿಗೆ ನೇಮಿಸಿದ. ಸತ್ಯ ದೇವರ ಆಲಯ ಕಟ್ಟೋಕೆ ಅವರು ಕಲ್ಲು ಕತ್ತರಿಸಿ ಆಕಾರ ಕೊಡ್ತಿದ್ರು.+ 3  ಬಾಗಿಲುಗಳಿಗಾಗಿ ಬೇಕಾಗಿರೋ ಮೊಳೆ, ಹಿಡಿಕೆಗಳನ್ನ ತಯಾರಿಸೋಕೆ ಭಾರಿ ಮೊತ್ತದ ಕಬ್ಬಿಣವನ್ನ ದಾವೀದ ಶೇಖರಿಸಿಟ್ಟ. ತೂಕ ಮಾಡೋಕೆ ಆಗದಷ್ಟು ತಾಮ್ರ ಕೂಡಿಸಿಟ್ಟ.+ 4  ಜೊತೆಗೆ ಲೆಕ್ಕ ಮಾಡೋಕೆ ಆಗದಷ್ಟು ದೇವದಾರು ಮರಗಳನ್ನ+ ಶೇಖರಿಸಿಟ್ಟ. ಯಾಕಂದ್ರೆ ಸೀದೋನ್ಯರು,+ ತೂರ್ಯರು+ ಭಾರಿ ಮೊತ್ತದಲ್ಲಿ ದೇವದಾರು ಮರಗಳನ್ನ ದಾವೀದನಿಗೆ ತಂದ್ಕೊಟ್ರು. 5  ಆಮೇಲೆ ದಾವೀದ “ನನ್ನ ಮಗ ಸೊಲೊಮೋನ ಇನ್ನೂ ಚಿಕ್ಕವನು. ಅವನಿಗೆ ಅನುಭವ ಇಲ್ಲ.+ ಯೆಹೋವನಿಗಾಗಿ ಕಟ್ಟೋ ಆಲಯ ಎಷ್ಟು ಶ್ರೇಷ್ಠ + ಅಂದ್ರೆ ಅದ್ರ ಸೌಂದರ್ಯದ ಬಗ್ಗೆ, ವೈಭವದ+ ಬಗ್ಗೆ ಎಲ್ಲ ದೇಶದ ಜನ್ರಿಗೆ ಗೊತ್ತಾಗಬೇಕು.+ ಹಾಗಾಗಿ ನಾನು ನನ್ನ ಮಗನಿಗೋಸ್ಕರ ಆಲಯಕ್ಕೆ ಬೇಕಾಗಿರೋದನ್ನೆಲ್ಲ ಸಿದ್ಧ ಮಾಡ್ತೀನಿ” ಅಂದ. ಹೀಗೆ ದಾವೀದ ತಾನು ಸಾಯೋ ಮುಂಚೆ ಭಾರಿ ಮೊತ್ತದಲ್ಲಿ ವಸ್ತುಗಳನ್ನ ಕೂಡಿಸಿಟ್ಟ. 6  ದಾವೀದ ತನ್ನ ಮಗ ಸೊಲೊಮೋನನನ್ನ ಕರೆದು ಇಸ್ರಾಯೇಲ್‌ ದೇವರಾದ ಯೆಹೋವನಿಗಾಗಿ ಒಂದು ಆಲಯ ಕಟ್ಟೋಕೆ ಏನೇನು ಮಾಡಬೇಕು ಅಂತ ಹೇಳಿದ. 7  ದಾವೀದ ಅವನಿಗೆ “ನನ್ನ ದೇವರಾದ ಯೆಹೋವನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋದು ನನ್ನ ಆಸೆ ಆಗಿತ್ತು.+ 8  ಆದ್ರೆ ಯೆಹೋವ ನನಗೆ ‘ನೀನು ತುಂಬ ರಕ್ತ ಸುರಿಸಿದೆ. ದೊಡ್ಡದೊಡ್ಡ ಯುದ್ಧಗಳನ್ನ ಮಾಡಿದೆ. ನನ್ನ ಹೆಸ್ರಿಗಾಗಿ ನೀನು ಆಲಯ ಕಟ್ಟಲ್ಲ.+ ಯಾಕಂದ್ರೆ ಭೂಮಿ ಮೇಲೆ ನೀನು ತುಂಬ ರಕ್ತ ಸುರಿಸಿದೆ. 9  ನಿನಗೆ ಒಬ್ಬ ಮಗ ಹುಟ್ತಾನೆ.+ ಅವನು ಸಮಾಧಾನವಾಗಿ* ಬದುಕ್ತಾನೆ. ನಾನು ಅವನ ಸುತ್ತ ಇರೋ ಎಲ್ಲ ಶತ್ರುಗಳನ್ನ ತೊಲಗಿಸಿ ಅವನು ಹಾಯಾಗಿ ಇರೋ ಹಾಗೆ ಮಾಡ್ತೀನಿ.+ ಅವನ ಹೆಸ್ರು ಸೊಲೊಮೋನ*+ ಆಗಿರುತ್ತೆ. ನಾನು ಅವನ ದಿನಗಳಲ್ಲಿ ಇಸ್ರಾಯೇಲ್ಯರಿಗೆ ಶಾಂತಿ ನೆಮ್ಮದಿ ಕೊಡ್ತೀನಿ.+ 10  ಅವನೇ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ತಾನೆ.+ ನನಗೆ ಮಗನಾಗಿ ಇರ್ತಾನೆ, ನಾನು ಅವನಿಗೆ ಅಪ್ಪ ಆಗಿರ್ತಿನಿ.+ ಇಸ್ರಾಯೇಲಿನ ಮೇಲೆ ಅವನ ಆಡಳಿತ ಶಾಶ್ವತವಾಗಿ ಇರೋ ತರ ಮಾಡ್ತೀನಿ’+ ಅಂದನು. 11  ನನ್ನ ಮಗನೇ, ಯೆಹೋವ ನಿನ್ನ ಜೊತೆ ಇರಲಿ. ನೀನು ಯಶಸ್ವಿ ಆಗ್ತೀಯ, ದೇವರಾದ ಯೆಹೋವನ ಆಲಯ ಕಟ್ತೀಯ ಅಂತ ದೇವರು ನಿನ್ನ ಬಗ್ಗೆ ಹೇಳಿದ್ದನು. ಆ ಮಾತು ನಿಜ ಆಗ್ಲಿ.+ 12  ಯೆಹೋವ ಇಸ್ರಾಯೇಲಿನ ಮೇಲೆ ನಿನಗೆ ಅಧಿಕಾರ ಕೊಟ್ಟಾಗ ನಿನ್ನ ದೇವರಾದ ಯೆಹೋವನ ನಿಯಮ ಪುಸ್ತಕವನ್ನ ಪಾಲಿಸೋಕೆ+ ಆಗೋ ಹಾಗೇ ಆತನೇ ನಿನಗೆ ವಿವೇಚನೆ, ಯೋಚನಾ ಸಾಮರ್ಥ್ಯ ಕೊಡ್ಲಿ.+ 13  ಯೆಹೋವ ಮೋಶೆಗೆ ಕೊಟ್ಟ ನಿಯಮಗಳನ್ನ, ತೀರ್ಪುಗಳನ್ನ ನೀನು ಜಾಗ್ರತೆಯಿಂದ ಪಾಲಿಸಿದ್ರೆ+ ಯಶಸ್ವಿ ಆಗ್ತೀಯ.+ ಹೆದರಬೇಡ, ಕಳವಳಪಡಬೇಡ. ಧೈರ್ಯವಾಗಿರು.+ 14  ನಾನು ತುಂಬ ಕಷ್ಟಪಟ್ಟು ಯೆಹೋವನ ಆಲಯಕ್ಕಾಗಿ 1,00,000 ತಲಾಂತು* ಚಿನ್ನ, 10,00,000 ತಲಾಂತು ಬೆಳ್ಳಿ ಕೂಡಿಸಿದ್ದೀನಿ. ಜೊತೆಗೆ ತೂಕಮಾಡೋಕೆ ಆಗದಷ್ಟು ತಾಮ್ರ, ಕಬ್ಬಿಣ,+ ಮರದ ದಿಮ್ಮಿ, ಕಲ್ಲುಗಳನ್ನೂ ಸಿದ್ಧ ಮಾಡಿದ್ದೀನಿ.+ ನೀನು ಅದಕ್ಕೆ ಇನ್ನೂ ಕೂಡಿಸಬೇಕು. 15  ಕಲ್ಲು ಒಡೆಯುವವರು, ಕಲ್ಲು ಕೆಲಸಗಾರರು,+ ಬಡಗಿಗಳು, ಎಲ್ಲ ತರದ ನಿಪುಣ ಕೆಲಸಗಾರರು+ ಹೀಗೆ ತುಂಬ ಜನ ನಿನ್ನ ಹತ್ರ ಇದ್ದಾರೆ. 16  ತೂಕ ಮಾಡೋಕೆ ಆಗದಷ್ಟು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಇದೆ.+ ಹೋಗು, ಆಲಯದ ಕೆಲಸ ಶುರು ಮಾಡು. ಯೆಹೋವ ನಿನ್ನ ಜೊತೆ ಇರಲಿ”+ ಅಂದ. 17  ಆಮೇಲೆ ದಾವೀದ ತನ್ನ ಮಗ ಸೊಲೊಮೋನನಿಗೆ ಸಹಾಯ ಮಾಡೋಕೆ ಇಸ್ರಾಯೇಲಿನ ಎಲ್ಲ ಅಧಿಕಾರಿಗಳಿಗೆ ಹೇಳಿದ. 18  “ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇದ್ದಾನೆ. ಆತನು ನಿನಗೆ ಎಲ್ಲ ಕಡೆಯಿಂದ ಶಾಂತಿ ಸಮಾಧಾನ ಕೊಟ್ಟಿದ್ದಾನೆ. ಆತನು ಈ ದೇಶದ ಜನ್ರನ್ನ ನನ್ನ ಕೈಗೆ ಒಪ್ಪಿಸಿದ್ದಾನೆ. ಈ ದೇಶ ಯೆಹೋವನ, ಆತನ ಜನ್ರ ಅಧೀನಕ್ಕೆ ಒಳಗಾಗಿದೆ. 19  ಈಗ ನೀನು ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ ನಿನ್ನ ದೇವರಾದ ಯೆಹೋವನನ್ನ ಆರಾಧಿಸೋಕೆ*+ ದೃಢನಿರ್ಧಾರ ಮಾಡು. ಸತ್ಯ ದೇವರಾದ ಯೆಹೋವನಿಗಾಗಿ ಆರಾಧನಾ ಜಾಗವನ್ನ ಕಟ್ಟೋಕೆ ಶುರು ಮಾಡು.+ ಯೆಹೋವನ ಹೆಸ್ರಲ್ಲಿ ಕಟ್ಟೋ ಆ ಆಲಯದ+ ಒಳಗೆ ಯೆಹೋವನ ಒಪ್ಪಂದದ ಮಂಜೂಷವನ್ನ, ಸತ್ಯದೇವರ ಪವಿತ್ರ ಪಾತ್ರೆಗಳನ್ನ ತಂದಿಡು”+ ಅಂದ.

ಪಾದಟಿಪ್ಪಣಿ

ಅಕ್ಷ. “ವಿಶ್ರಾಂತಿ.”
“ಶಾಂತಿ” ಅಂತ ಅರ್ಥ ಇರೋ ಒಂದು ಹೀಬ್ರು ಪದದಿಂದ ಬಂದಿರೋ ಹೆಸ್ರು.
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಹುಡುಕೋಕೆ.”