ಒಂದನೇ ಪೂರ್ವಕಾಲವೃತ್ತಾಂತ 2:1-55

  • ಇಸ್ರಾಯೇಲನ 12 ಗಂಡು ಮಕ್ಕಳು (1, 2)

  • ಯೆಹೂದ ವಂಶದವರು (3-55)

2  ಇಸ್ರಾಯೇಲನ+ ಗಂಡು ಮಕ್ಕಳು ರೂಬೇನ್‌,+ ಸಿಮೆಯೋನ್‌,+ ಲೇವಿ,+ ಯೆಹೂದ,+ ಇಸ್ಸಾಕಾರ್‌,+ ಜೆಬುಲೂನ್‌,+ 2  ದಾನ್‌,+ ಯೋಸೇಫ,+ ಬೆನ್ಯಾಮೀನ್‌,+ ನಫ್ತಾಲಿ,+ ಗಾದ್‌,+ ಅಶೇರ್‌.+ 3  ಯೆಹೂದನ ಗಂಡು ಮಕ್ಕಳು ಏರ್‌, ಓನಾನ್‌, ಶೇಲಹ. ಈ ಮೂವರು ಕಾನಾನ್‌ ಸ್ತ್ರೀಯಾದ ಶೂಗನ ಮಗಳಿಂದ ಹುಟ್ಟಿದ್ರು.+ ಯೆಹೂದನ ದೊಡ್ಡ ಮಗ ಏರ ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾಗಿದ್ದ. ಅದಕ್ಕೆ ದೇವರು ಅವನನ್ನ ಕೊಂದನು.+ 4  ಯೆಹೂದನಿಗೆ ಸೊಸೆ ತಾಮಾರಳಿಂದ+ ಪೆರೆಚ್‌,+ ಜೆರಹ ಹುಟ್ಟಿದ್ರು. ಯೆಹೂದನಿಗೆ ಒಟ್ಟು ಐದು ಗಂಡು ಮಕ್ಕಳು. 5  ಪೆರೆಚನ ಗಂಡು ಮಕ್ಕಳು ಹೆಚ್ರೋನ್‌, ಹಾಮೂಲ್‌.+ 6  ಜೆರಹನ ಗಂಡು ಮಕ್ಕಳು ಜಿಮ್ರಿ, ಏತಾನ, ಹೇಮಾನ್‌, ಕಲ್ಕೋಲ್‌, ದಾರ. ಅವರು ಒಟ್ಟು ಐದು ಗಂಡು ಮಕ್ಕಳು. 7  ಕರ್ಮೀಯ ಮಗ* ಆಕಾರ.* ಯಾವುದನ್ನ ಪೂರ್ತಿ ನಾಶ ಮಾಡಬೇಕಿತ್ತೋ+ ಅದನ್ನ ಕದ್ದು ಇಸ್ರಾಯೇಲಿನ ಮೇಲೆ ಕಷ್ಟ ತಂದು ಹಾಕಿದವನು ಇವನೇ.+ 8  ಏತಾನನ ಮಗ* ಅಜರ್ಯ. 9  ಹೆಚ್ರೋನನ ಗಂಡು ಮಕ್ಕಳು ಯೆರಹ್ಮೇಲ್‌,+ ರಾಮ,+ ಕೆಲೂಬಾಯ್‌.* 10  ರಾಮನ ಮಗ ಅಮ್ಮೀನಾದಾಬ.+ ಅಮ್ಮೀನಾದಾಬನ ಮಗ ನಹಶೋನ.+ ನಹಶೋನ ಯೆಹೂದ ಕುಲದ ಪ್ರಧಾನ. 11  ನಹಶೋನನ ಮಗ ಸಲ್ಮೋನ.+ ಸಲ್ಮೋನನ ಮಗ ಬೋವಜ.+ 12  ಬೋವಜನ ಮಗ ಓಬೇದ. ಓಬೇದನ ಮಗ ಇಷಯ.+ 13  ಇಷಯನ ಮೊದಲ್ನೇ ಮಗ ಎಲೀಯಾಬ್‌. ಎರಡ್ನೇ ಮಗ ಅಬೀನಾದಾಬ್‌,+ ಮೂರನೇ ಮಗ ಶಿಮ್ಮ,+ 14  ನಾಲ್ಕನೇ ಮಗ ನೆತನೇಲ್‌, ಐದನೇ ಮಗ ರದೈ. 15  ಆರನೇ ಮಗ ಓಚೆಮ್‌, ಏಳ್ನೇ ಮಗ ದಾವೀದ.+ 16  ಇವ್ರ ಸಹೋದರಿಯರ ಹೆಸ್ರು ಚೆರೂಯ, ಅಬೀಗೈಲ್‌.+ ಅಬೀಷೈ,+ ಯೋವಾಬ,+ ಅಸಾಹೇಲ್‌+ ಚೆರೂಯಳ ಮೂರು ಗಂಡು ಮಕ್ಕಳು. 17  ಅಬೀಗೈಲ್‌ಗೆ ಅಮಾಸ+ ಹುಟ್ಟಿದ. ಇಷ್ಮಾಯೇಲ್ಯನಾಗಿದ್ದ ಯೆತೆರ್‌ ಅಮಾಸನ ತಂದೆ. 18  ಹೆಚ್ರೋನನ ಮಗ ಕಾಲೇಬನಿಗೆ* ತನ್ನ ಹೆಂಡತಿಯರಾದ ಅಜೂಬಳಿಂದ, ಯೆರಿಯೋತಳಿಂದ ಯೇಷೆರ್‌, ಶೋಬಾಬ್‌, ಅರ್ದೋನ್‌ ಅನ್ನೋ ಗಂಡು ಮಕ್ಕಳು ಹುಟ್ಟಿದ್ರು. 19  ಅಜೂಬ ತೀರಿಹೋದಾಗ ಕಾಲೇಬ ಎಫ್ರಾತಳನ್ನ+ ಮದುವೆಯಾದ. ಅವಳಲ್ಲಿ ಕಾಲೇಬನಿಗೆ ಹೂರ+ ಹುಟ್ಟಿದ. 20  ಹೂರನಿಗೆ ಊರಿಯ ಹುಟ್ಟಿದ. ಊರಿಯನಿಗೆ ಬೆಚಲೇಲ+ ಹುಟ್ಟಿದ. 21  ಆಮೇಲೆ ಹೆಚ್ರೋನ ಗಿಲ್ಯಾದನ+ ತಂದೆಯಾದ ಮಾಕೀರನ+ ಮಗಳನ್ನ ಮದುವೆಯಾದ. ಆಗ ಅವನಿಗೆ 60 ವರ್ಷ. ಅವಳಿಂದ ಹೆಚ್ರೋನನಿಗೆ ಸೆಗೂಬ ಹುಟ್ಟಿದ. 22  ಸೆಗೂಬ ಯಾಯೀರನ+ ತಂದೆ. ಯಾಯೀರನಿಗೆ ಗಿಲ್ಯಾದ್‌+ ದೇಶದಲ್ಲಿ 23 ಪಟ್ಟಣ ಇತ್ತು. 23  ಆಮೇಲೆ ಗೆಷೂರ್ಯರು,+ ಅರಾಮ್ಯರು+ ಅಲ್ಲಿ ವಾಸಿಸ್ತಿದ್ದ ಜನ್ರಿಂದ ಹವತ್‌-ಯಾಯೀರನ್ನ,+ ಕೆನತನ್ನ,+ ಅದಕ್ಕೆ ಸೇರಿದ* ಊರುಗಳನ್ನ, 60 ಪಟ್ಟಣಗಳನ್ನ ತಗೊಂಡ್ರು. ಇವ್ರೆಲ್ಲ ಗಿಲ್ಯಾದನ ತಂದೆಯಾಗಿದ್ದ ಮಾಕೀರನ ವಂಶದವರು. 24  ಹೆಚ್ರೋನನು+ ಕಾಲೇಬ್‌-ಎಫ್ರಾತದಲ್ಲಿ ತೀರಿಹೋದ ಮೇಲೆ ಹೆಚ್ರೋನನ ಹೆಂಡತಿ ಅಬೀಯಾಗೆ ಅಷ್ಹೂರ+ ಹುಟ್ಟಿದ. ಅಷ್ಹೂರನಿಗೆ ತೆಕೋವ+ ಹುಟ್ಟಿದ. 25  ಹೆಚ್ರೋನನ ಮೊದಲ್ನೇ ಮಗ ಯೆರಹ್ಮೇಲನ ಗಂಡು ಮಕ್ಕಳು ಯಾರಂದ್ರೆ, ಮೊದಲ್ನೇ ಮಗ ರಾಮ, ಬೂನ, ಓರೆನ್‌, ಓಚೆಮ್‌, ಅಹೀಯ. 26  ಯೆರಹ್ಮೇಲನಿಗೆ ಇನ್ನೊಬ್ಬ ಹೆಂಡತಿ ಇದ್ದಳು. ಅವಳ ಹೆಸ್ರು ಅಟಾರ. ಇವಳಿಗೆ ಓನಾಮ ಹುಟ್ಟಿದ. 27  ಯೆರಹ್ಮೇಲನ ಮೊದಲ್ನೇ ಮಗ ರಾಮನ ಗಂಡು ಮಕ್ಕಳು ಮಾಚ್‌, ಯಾಮೀನ್‌, ಏಕೆರ್‌. 28  ಓನಾಮನ ಗಂಡು ಮಕ್ಕಳು ಶಮೈ, ಯಾದ. ಶಮೈಯ ಗಂಡು ಮಕ್ಕಳು ನಾದಾಬ್‌, ಅಬೀಷೂರ್‌. 29  ಅಬೀಷೂರನ ಹೆಂಡತಿ ಹೆಸ್ರು ಅಬೀಹೈಲ್‌. ಅವಳಿಂದ ಅವನಿಗೆ ಅಹ್ಬಾನ್‌, ಮೋಲೀದ್‌ ಹುಟ್ಟಿದ್ರು. 30  ನಾದಾಬನ ಗಂಡು ಮಕ್ಕಳು ಸೆಲೆದ್‌, ಅಪ್ಪಯಿಮ್‌. ಸೆಲೆದ ಮಕ್ಕಳಿಲ್ಲದೆ ತೀರಿಹೋದ. 31  ಅಪ್ಪಯಿಮನ ಮಗ* ಇಷ್ಷೀ. ಇಷ್ಷೀಯ ಮಗ* ಶೇಷಾನ್‌. ಶೇಷಾನನ ಮಗ* ಅಹ್ಲೈ. 32  ಶಮೈನ ಸಹೋದರನಾದ ಯಾದನ ಗಂಡು ಮಕ್ಕಳು ಯೆತೆರ್‌, ಯೋನಾತಾನ. ಯೆತೆರ ಮಕ್ಕಳಿಲ್ಲದೆ ತೀರಿಹೋದ. 33  ಯೋನಾತಾನನ ಗಂಡು ಮಕ್ಕಳು ಪೆಲೆತ್‌, ಜಾಜ. ಇವ್ರೆಲ್ಲ ಯೆರಹ್ಮೇಲನ ವಂಶದವರು. 34  ಶೇಷಾನನಿಗೆ ಗಂಡು ಮಕ್ಕಳು ಇರ್ಲಿಲ್ಲ, ಹೆಣ್ಣು ಮಕ್ಕಳು ಇದ್ರು. ಶೇಷಾನನಿಗೆ ಈಜಿಪ್ಟಿನ ಒಬ್ಬ ಸೇವಕನಿದ್ದ. ಅವನ ಹೆಸ್ರು ಯರ್ಹ. 35  ಶೇಷಾನ ತನ್ನ ಮಗಳನ್ನ ತನ್ನ ಸೇವಕನಾದ ಯರ್ಹನಿಗೆ ಮದುವೆ ಮಾಡ್ಕೊಟ್ಟ. ಅವಳಿಂದ ಯರ್ಹನಿಗೆ ಅತೈ ಹುಟ್ಟಿದ. 36  ಅತೈಯ ಮಗ ನಾತಾನ. ನಾತಾನನ ಮಗ ಜಾಬಾದ. 37  ಜಾಬಾದನ ಮಗ ಎಫ್ಲಾಲ. ಎಫ್ಲಾಲನ ಮಗ ಓಬೇದ. 38  ಓಬೇದನ ಮಗ ಯೇಹು. ಯೇಹುವಿನ ಮಗ ಅಜರ್ಯ. 39  ಅಜರ್ಯನ ಮಗ ಹೆಲೆಚ. ಹೆಲೆಚನ ಮಗ ಎಲ್ಲಾಸಾ. 40  ಎಲ್ಲಾಸಾನ ಮಗ ಸಿಸ್ಮೈ. ಸಿಸ್ಮೈಯ ಮಗ ಶಲ್ಲೂಮ. 41  ಶಲ್ಲೂಮನ ಮಗ ಯೆಕಮ್ಯಾಹ. ಯೆಕಮ್ಯಾಹನ ಮಗ ಎಲೀಷಾಮ. 42  ಯೆರಹ್ಮೇಲನ ಸಹೋದರನಾದ ಕಾಲೇಬನ*+ ಸಂತತಿಯವರು ಯಾರಂದ್ರೆ ಅವನ ಮೊದಲ್ನೇ ಮಗನೂ ಜೀಫನ ತಂದೆಯೂ ಆದ ಮೇಶಾ ಮತ್ತು ಹೆಬ್ರೋನನ ತಂದೆಯಾದ ಮಾರೇಷನ ಗಂಡು ಮಕ್ಕಳು. 43  ಹೆಬ್ರೋನನ ಗಂಡು ಮಕ್ಕಳು ಕೋರಹ, ತಪ್ಪೂಹ, ರೆಕೆಮ್‌, ಶೆಮ. 44  ಶೆಮನ ಮಗ ರಹಮ್ಯ. ರಹಮ್ಯನ ಮಗ ಯೊರ್ಕೆಯಾಮ. ರೆಕೆಮ್‌ನ ಮಗ ಶಮೈ. 45  ಶಮೈಯ ಮಗ ಮಾವೋನ. ಮಾವೋನನ ಮಗ ಬೇತ್‌-ಚೂರ.+ 46  ಕಾಲೇಬನಿಗೆ ಅವನ ಉಪಪತ್ನಿಯಾಗಿದ್ದ ಏಫಳಿಂದ ಹಾರಾನ, ಮೋಚ, ಗಾಜೇಜ ಹುಟ್ಟಿದ್ರು. ಹಾರಾನನ ಮಗ ಗಾಜೇಜ. 47  ಯಾದೈಯನ ಗಂಡು ಮಕ್ಕಳು ರೆಗೆಮ್‌, ಯೋತಾಮ, ಗೇಷಾನ್‌, ಪೆಲೆಟ್‌, ಏಫ, ಶಾಫ್‌. 48  ಕಾಲೇಬನ ಉಪಪತ್ನಿ ಮಾಕಾಳಿಗೆ ಶೆಬೆರ್‌, ತಿರ್ಹನ ಹುಟ್ಟಿದ್ರು. 49  ಆಮೇಲೆ ಅವಳಿಗೆ ಶಾಫನ, ಶೆವ ಹುಟ್ಟಿದ್ರು. ಶಾಫನನ ಮಗ ಮದ್ಮನ್ನ.+ ಶೆವನ ಮಕ್ಕಳು ಮಕ್‌ಬೇನ, ಗಿಬ್ಯ.+ ಕಾಲೇಬನ+ ಮಗಳು ಅಕ್ಷಾ.+ 50  ಇವ್ರೆಲ್ಲ ಕಾಲೇಬನ ವಂಶದವರು. ಎಫ್ರಾತನ+ ಮೊದಲನೇ ಮಗ ಹೂರನ+ ಗಂಡು ಮಕ್ಕಳು ಯಾರಂದ್ರೆ, ಕಿರ್ಯತ್‌-ಯಾರೀಮನ+ ತಂದೆ ಶೋಬಾಲ, 51  ಬೆತ್ಲೆಹೇಮನ+ ತಂದೆ ಸಲ್ಮ, ಬೇತ್‌-ಗಾದೇರನ ತಂದೆ ಹಾರೇಫ್‌. 52  ಕಿರ್ಯತ್‌-ಯಾರೀಮನ ತಂದೆಯಾದ ಶೋಬಾಲನ ಗಂಡು ಮಕ್ಕಳು ಹಾರೋಯೆ, ಮೆನಹತಿನ ಪ್ರಜೆಗಳಲ್ಲಿ ಅರ್ಧ ಜನ್ರು. 53  ಕಿರ್ಯತ್‌-ಯಾರೀಮಿನಲ್ಲಿ ವಾಸ ಇದ್ದ ಮನೆತನದವರು ಇತ್ರೀಯರು,+ ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು. ಇವ್ರಿಂದನೇ ಚೊರ್ರಾತ್ಯರು,+ ಎಷ್ಟಾವೋಲ್ಯರು+ ಬಂದ್ರು. 54  ಸಲ್ಮನ ವಂಶದವರು ಬೆತ್ಲೆಹೇಮಿನಲ್ಲಿ,+ ನೆಟೋಫಾದಲ್ಲಿ, ಅಟರೋತ್‌-ಬೇತ್ಯೋವಾಬಿನಲ್ಲಿ ವಾಸಿಸೋ ಜನ್ರು, ಮಾನಹತಿನಲ್ಲಿ ವಾಸಿಸೋ ಅರ್ಧ ಜನ್ರು, ಚೊರ್ಗದಲ್ಲಿ ವಾಸಿಸುವವರು. 55  ಯಾಬೇಚಿನಲ್ಲಿ ವಾಸವಿದ್ದ ಬರಹಗಾರರ ಮನೆತನದವರು ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು. ಇವರು ಹಮ್ಮತನ ವಂಶದವರಾಗಿದ್ದ ಕೇನ್ಯರು.+ ರೇಕಾಬ್‌+ ಮನೆತನದವ್ರ ತಂದೆ ಹಮ್ಮತ.

ಪಾದಟಿಪ್ಪಣಿ

ಅಕ್ಷ. “ಗಂಡು ಮಕ್ಕಳು.”
ಅರ್ಥ “ಕಷ್ಟ ತರುವವನು. ಘೋರ ಸಂಕಟ ತರುವವನು.” ಯೆಹೋ 7:1ರಲ್ಲಿ ಇವನ ಹೆಸ್ರು ಆಕಾನ.
ಅಕ್ಷ. “ಗಂಡು ಮಕ್ಕಳು.”
ವಚನ 18, 19, 42ರಲ್ಲಿ ಇವನ ಹೆಸ್ರು ಕಾಲೇಬ್‌.
ವಚನ 9ರಲ್ಲಿ ಇವನ ಹೆಸ್ರು ಕೆಲೂಬಾಯ್‌.
ಅಥವಾ “ಸುತ್ತಮುತ್ತಲಿನ.”
ಅಕ್ಷ. “ಗಂಡು ಮಕ್ಕಳು.”
ಅಕ್ಷ. “ಗಂಡು ಮಕ್ಕಳು.”
ಅಕ್ಷ. “ಗಂಡು ಮಕ್ಕಳು.”
ವಚನ 9ರಲ್ಲಿ ಇವನ ಹೆಸ್ರು ಕೆಲೂಬಾಯ್‌.