ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ 2:1-20
2 ಸಹೋದರರೇ, ನಾವು ನಿಮ್ಮ ಹತ್ರ ಬಂದು ಹೋಗಿದ್ದು ವ್ಯರ್ಥವಾಗಿಲ್ಲ+ ಅಂತ ನಿಮಗೆ ಚೆನ್ನಾಗಿ ಗೊತ್ತು.
2 ಫಿಲಿಪ್ಪಿಯಲ್ಲಿ ಇದ್ದಾಗ ನಮಗೆ ತುಂಬ ಕಷ್ಟ, ವಿರೋಧ ಬಂತು, ಅವಮಾನ ಆಯ್ತು.+ ಆದ್ರೂ ನಮ್ಮ ದೇವರು ಆತನ ಸಿಹಿಸುದ್ದಿಯನ್ನ ನಿಮಗೆ ಹೇಳೋಕೆ ನಮಗೆ ಧೈರ್ಯ ಕೊಟ್ಟನು.+ ಇದು ನಿಮಗೇ ಗೊತ್ತು.
3 ನಾವು ಕೆಟ್ಟ ಉದ್ದೇಶದಿಂದ, ಮೋಸದಿಂದ ನಿಮ್ಮನ್ನ ಮರಳು ಮಾಡಬೇಕು ಅಂತ ಬುದ್ಧಿವಾದ ಹೇಳ್ತಿಲ್ಲ.
4 ಸಿಹಿಸುದ್ದಿಯನ್ನ ಸಾರೋಕೆ ದೇವರು ನಮ್ಮನ್ನ ನೇಮಿಸಿದ್ರಿಂದ ನಿಮಗೆ ಅದನ್ನ ಹೇಳ್ತಿದ್ದೀವಿ. ಮನುಷ್ಯರನ್ನ ಮೆಚ್ಚಿಸೋಕಲ್ಲ, ನಮ್ಮ ಹೃದಯ ಪರೀಕ್ಷಿಸೋ ದೇವರನ್ನ+ ಮೆಚ್ಚಿಸೋಕೆ ನಾವು ಅದನ್ನ ಹೇಳ್ತೀವಿ.
5 ನಿಜ ಏನಂದ್ರೆ ನಿಮಗೆ ಗೊತ್ತಿರೋ ಹಾಗೆ ನಾವು ಯಾವತ್ತೂ ಬೆಣ್ಣೆ ಹಚ್ಚೋ ಹಾಗೆ ಮಾತಾಡಲಿಲ್ಲ, ಒಳಗೆ ದುರಾಸೆ ಇಟ್ಕೊಂಡು ಹೊರಗೆ ಒಳ್ಳೆಯವ್ರ ತರ ನಾಟಕ ಮಾಡಲಿಲ್ಲ.+ ಇದಕ್ಕೆ ದೇವರೇ ಸಾಕ್ಷಿ!
6 ನಿಮ್ಮನ್ನಾಗಲಿ ಬೇರೆಯವ್ರನ್ನಾಗಲಿ ಮೆಚ್ಚಿಸೋಕೆ ನಾವು ಪ್ರಯತ್ನ ಮಾಡಲಿಲ್ಲ. ನಾವು ಕ್ರಿಸ್ತನ ಅಪೊಸ್ತಲರಾಗಿ ಇರೋದ್ರಿಂದ ನಿಮ್ಮಿಂದ ತುಂಬ ಖರ್ಚು ಮಾಡಿಸಿ ನಿಮ್ಮ ಮೇಲೆ ಭಾರ ಹಾಕಬಹುದಿತ್ತು.+
7 ಆದ್ರೆ ನಾವು ಹಾಗೆ ಮಾಡಲಿಲ್ಲ. ಅಮ್ಮ ತನ್ನ ಮಗುಗೆ ಹಾಲು ಕೊಟ್ಟು ಕೋಮಲವಾಗಿ* ನೋಡ್ಕೊಳ್ಳೋ ತರ ನಾವು ನಿಮ್ಮನ್ನ ವಾತ್ಸಲ್ಯದಿಂದ ನೋಡ್ಕೊಂಡ್ವಿ.
8 ನಿಮ್ಮ ಮೇಲೆ ಕೋಮಲ ಮಮತೆ ಇರೋದ್ರಿಂದಾನೇ ದೇವರ ಸಿಹಿಸುದ್ದಿಯನ್ನ ನಿಮಗೆ ಹೇಳೋಕೆ ಅಷ್ಟೇ ಅಲ್ಲ, ನಿಮಗಾಗಿ ಜೀವ ಕೊಡೋಕೂ ತಯಾರಾಗಿದ್ವಿ.*+ ನಿಮ್ಮನ್ನ ನಾವು ಅಷ್ಟು ಪ್ರೀತಿಸಿದ್ವಿ.+
9 ಸಹೋದರರೇ, ನಾವು ನಿಮಗೆ ದೇವರ ಸಿಹಿಸುದ್ದಿಯನ್ನ ಸಾರೋಕೆ ಬಂದಾಗ ನಿಮ್ಮಿಂದ ತುಂಬ ಖರ್ಚು ಮಾಡಿಸಿ ನಿಮಗೆ ಭಾರವಾಗಿ ಇರಬಾರದು ಅಂತ ಹಗಲೂರಾತ್ರಿ ಕಷ್ಟಪಟ್ಟು ದುಡಿದ್ವಿ. ಹೀಗೆ ನಾವು ಕಷ್ಟಪಟ್ಟಿದ್ದು ನಿಮಗೆ ನೆನಪಿರಲೇಬೇಕು.+
10 ವಿಶ್ವಾಸಿಗಳಾದ ನಿಮ್ಮ ಜೊತೆ ನಾವು ನೀತಿನಿಷ್ಠೆಯಿಂದ, ತಪ್ಪಿಲ್ದೆ ನಡ್ಕೊಂಡ್ವಿ. ಇದಕ್ಕೆ ನೀವು ಮತ್ತು ದೇವರೇ ಸಾಕ್ಷಿ.
11 ಅಪ್ಪ+ ಮಕ್ಕಳನ್ನ ನೋಡ್ಕೊಳ್ಳೋ ಹಾಗೆ ನಾವು ನಿಮ್ಮನ್ನ ನೋಡ್ಕೊಂಡು ಎಲ್ರಿಗೂ ಬುದ್ಧಿ ಹೇಳ್ತಾ ಸಮಾಧಾನ ಮಾಡ್ತಾ ಪ್ರೋತ್ಸಾಹಿಸ್ತಾ ಇದ್ವಿ ಅಂತ ನಿಮಗೆ ಚೆನ್ನಾಗಿ ಗೊತ್ತು.+
12 ನಿಮ್ಮನ್ನ ದೇವರು ಮೆಚ್ಚಬೇಕು,+ ಅಂದ್ರೆ ನಿಮ್ಮನ್ನ ಆತನ ಆಳ್ವಿಕೆಯಲ್ಲಿ ಸೇರಿಸ್ಕೊಂಡು+ ತನ್ನ ಮಹಿಮೆಯನ್ನ ನಿಮಗೆ ಕೊಡಬೇಕು+ ಅಂತ ನಾವು ಹಾಗೆ ಮಾಡಿದ್ವಿ.
13 ನೀವು ದೇವರ ಸಂದೇಶವನ್ನ ನಮ್ಮಿಂದ ಕೇಳಿಸ್ಕೊಂಡಾಗ ಅದನ್ನ ಮನುಷ್ಯರ ಮಾತು ಅಂತ ಅಂದ್ಕೊಳ್ಳದೆ ದೇವರ ಮಾತು ಅಂತಾನೇ ಒಪ್ಕೊಂಡ್ರಿ. ಅದಕ್ಕಾಗಿ ನಾವು ದೇವರಿಗೆ ಯಾವಾಗ್ಲೂ ಧನ್ಯವಾದ ಹೇಳ್ತೀವಿ.+ ಅದು ನಿಜವಾಗ್ಲೂ ದೇವರ ಸಂದೇಶನೇ. ಆ ಸಂದೇಶ ವಿಶ್ವಾಸಿಗಳಾದ ನಿಮ್ಮೊಳಗೆ ಕೆಲಸ ಮಾಡ್ತಿದೆ.
14 ಸಹೋದರರೇ, ಯೂದಾಯದಲ್ಲಿ ಕ್ರಿಸ್ತ ಯೇಸು ಜೊತೆ ಒಂದಾಗಿರೋ ದೇವರ ಸಭೆಗಳ ಮಾದರಿಯನ್ನ ನೀವು ಅನುಕರಿಸಿದ್ರಿ. ಯಾಕಂದ್ರೆ ಅವರು ಯೆಹೂದ್ಯರಿಂದ ತುಂಬ ಕಷ್ಟಪಡ್ತಿದ್ದಾರೆ. ಅವ್ರ ತರಾನೇ ನೀವೂ ನಿಮ್ಮ ದೇಶದವ್ರಿಂದ ಕಷ್ಟಪಟ್ರಿ.+
15 ಆ ಯೆಹೂದ್ಯರು ಪ್ರಭು ಯೇಸುವನ್ನ, ಪ್ರವಾದಿಗಳನ್ನ ಕೊಂದ್ರು.+ ನಮಗೆ ಹಿಂಸೆ ಕೊಟ್ರು.+ ಅಷ್ಟೇ ಅಲ್ಲ, ಅವರು ದೇವರಿಗೆ ಇಷ್ಟ ಆಗೋ ಹಾಗೆ ನಡಿತಿಲ್ಲ. ಅವರು ಮಾಡ್ತಿರೋ ಕೆಲಸದಿಂದ ಯಾರಿಗೂ ಒಳ್ಳೇದಾಗ್ತಿಲ್ಲ.
16 ರಕ್ಷಣೆ ತರೋ ಸಿಹಿಸುದ್ದಿಯನ್ನ ಬೇರೆ ಜನ್ರಿಗೆ ಸಾರಬಾರದು ಅಂತ ಅವರು ನಮ್ಮನ್ನ ತಡಿಯೋಕೆ ಪ್ರಯತ್ನಿಸ್ತಾ ಇದ್ದಾರೆ.+ ಹೀಗೆ ಅವ್ರ ಪಾಪದ ಕೊಡ ತುಂಬ್ತಾ ಇದೆ. ಆದ್ರೆ ಕೊನೆಗೂ ದೇವರು ಅವ್ರ ಮೇಲೆ ತನ್ನ ಕೋಪ ಸುರಿಸಿದ್ದಾನೆ.+
17 ಸಹೋದರರೇ, ಸ್ವಲ್ಪ ಸಮಯ ನಾವು ನಿಮ್ಮಿಂದ ದೂರ ಹೋಗಬೇಕಾಯ್ತು. ಆದ್ರೆ ನಮ್ಮ ಮನಸ್ಸೆಲ್ಲ ನಿಮ್ಮ ಹತ್ರಾನೇ ಇತ್ತು. ನಿಮ್ಮನ್ನ ನೋಡಬೇಕಂತ ತುಂಬ ಆಸೆ ಇದ್ದಿದ್ರಿಂದ ನಿಮ್ಮನ್ನ ಭೇಟಿಮಾಡೋಕೆ ತುಂಬ ಪ್ರಯತ್ನಪಟ್ವಿ.
18 ನಿಮ್ಮ ಹತ್ರ ಬರೋಕೆ ಇಷ್ಟಪಟ್ವಿ. ನಾವು, ಅದ್ರಲ್ಲೂ ಪೌಲನಾದ ನಾನು ಒಂದು ಸಲ ಅಲ್ಲ, ಎರಡು ಸಲ ಬರೋಕೆ ಪ್ರಯತ್ನಿಸಿದೆ. ಆದ್ರೆ ಸೈತಾನ ನಮ್ಮ ದಾರಿಗೆ ಅಡ್ಡಗಾಲು ಹಾಕಿದ.
19 ನಮ್ಮ ಪ್ರಭು ಯೇಸುವಿನ ಸಾನಿಧ್ಯದ ಸಮಯದಲ್ಲಿ ಆತನ ಮುಂದೆ ನಮ್ಮ ನಿರೀಕ್ಷೆ, ಆನಂದ, ವಿಜಯದ ಕಿರೀಟ ಯಾರು ಆಗಿರ್ತಾರೆ? ನೀವೇ ತಾನೇ?+
20 ನಿಜ, ನೀವೇ ನಮ್ಮ ಮಹಿಮೆ, ಆನಂದ.