ಹೋಶೇಯ 3:1-5

  • ಹೋಶೇಯ ವ್ಯಭಿಚಾರ ಮಾಡಿದ್ದ ತನ್ನ ಹೆಂಡತಿಯನ್ನ ಬಿಡಿಸಿ ತರ್ತಾನೆ (1-3)

  • ಇಸ್ರಾಯೇಲ್ಯರು ಯೆಹೋವನ ಹತ್ರ ವಾಪಸ್‌ ಬರ್ತಾರೆ (4, 5)

3  ಆಮೇಲೆ ಯೆಹೋವ ನನಗೆ “ಇಸ್ರಾಯೇಲ್‌ ಜನ ನನ್ನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸ್ತಾ+ ಅವುಗಳಿಗೆ ಒಣದ್ರಾಕ್ಷಿಯ ಬಿಲ್ಲೆಗಳನ್ನ ಅರ್ಪಿಸೋಕೆ ತುಂಬ ಇಷ್ಟಪಡ್ತಾರೆ. ಆದ್ರೂ ಯೆಹೋವನಾದ ನಾನು ಅವ್ರನ್ನ ಪ್ರೀತಿಸ್ತೀನಿ.+ ಅದೇ ರೀತಿ, ಬೇರೊಬ್ಬ ಗಂಡಸಿಗೆ ಪ್ರಿಯಳಾಗಿರೋ ಮತ್ತು ವ್ಯಭಿಚಾರ ಮಾಡ್ತಿರೋ ನಿನ್ನ ಆ ಸ್ತ್ರೀಯನ್ನ ನೀನು ಮತ್ತೆ ಪ್ರೀತಿಸು”+ ಅಂದನು. 2  ಹಾಗಾಗಿ ನಾನು ಹೋಗಿ 15 ಬೆಳ್ಳಿಯ ಶೆಕೆಲ್‌* ಮತ್ತು ಒಂದೂವರೆ ಹೋಮೆರ್‌* ಬಾರ್ಲಿ* ಕೊಟ್ಟು ಗೋಮೆರಳನ್ನ ಖರೀದಿಸಿದೆ. 3  ಆಮೇಲೆ ಅವಳಿಗೆ “ನೀನು ತುಂಬ ದಿನ ನನ್ನವಳಾಗೇ ಇರ್ತೀಯ. ನೀನು ವೇಶ್ಯಾವಾಟಿಕೆ ಮಾಡಬಾರದು. ಬೇರೆ ಗಂಡಸು ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳಬಾರದು. ನಾನು ಕೂಡ ನಿನ್ನ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳಲ್ಲ” ಅಂದೆ. 4  ಯಾಕಂದ್ರೆ ತುಂಬ ಸಮಯದ ತನಕ* ಇಸ್ರಾಯೇಲ್‌ ಜನ್ರಿಗೆ ಒಬ್ಬ ರಾಜನಾಗಲಿ+ ಅಧಿಕಾರಿಯಾಗಲಿ ಇರಲ್ಲ. ಅಷ್ಟೇ ಅಲ್ಲ ಅವರು ಬಲಿ ಅರ್ಪಿಸಲ್ಲ. ಪೂಜಾಕಂಬ, ಏಫೋದ್‌,+ ಮನೆದೇವರುಗಳ ಮೂರ್ತಿಗಳು+ ಅವ್ರ ಹತ್ರ ಇರಲ್ಲ. 5  ಆಮೇಲೆ ಇಸ್ರಾಯೇಲ್‌ ಜನ ಹಿಂದೆ ಬಂದು ತಮ್ಮ ದೇವರಾದ ಯೆಹೋವನ ಹತ್ರ, ತಮ್ಮ ರಾಜನಾದ ದಾವೀದನ+ ಹತ್ರ ವಾಪಸ್‌ ಬರೋಕೆ ಶ್ರಮಿಸ್ತಾರೆ.*+ ಅವರು ಕೊನೇ ದಿನಗಳಲ್ಲಿ ಯೆಹೋವನ ಒಳ್ಳೇತನವನ್ನ ಅನುಭವಿಸೋಕೆ ನಡುಗ್ತಾ ಆತನ ಹತ್ರ ಬರ್ತಾರೆ.+

ಪಾದಟಿಪ್ಪಣಿ

ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಒಂದು ಹೋಮೆರ್‌ ಬಾರ್ಲಿ ಅಂದ್ರೆ ಸುಮಾರು 130 ಕೆಜಿ ಇದ್ದಿರಬಹುದು. ಪರಿಶಿಷ್ಟ ಬಿ14 ನೋಡಿ.
ಅಥವಾ “ಜವೆಗೋದಿ.”
ಅಕ್ಷ. “ತುಂಬ ದಿನ ತನಕ.”
ಅಕ್ಷ. “ಹುಡುಕ್ತಾರೆ.”