ಹೋಶೇಯ 13:1-16

  • ಮೂರ್ತಿಪೂಜೆ ಮಾಡೋ ಎಫ್ರಾಯೀಮ ಯೆಹೋವನನ್ನ ಮರೆತುಬಿಟ್ಟ (1-16)

    • “ಮರಣವೇ, ಕುಟುಕುವ ನಿನ್ನ ಕೊಂಡಿಗಳು ಎಲ್ಲಿ?” (14)

13  “ಎಫ್ರಾಯೀಮ್‌ ಮಾತಾಡಿದಾಗ ಜನ ನಡುಗಿದ್ರು,ಅವನು ಇಸ್ರಾಯೇಲಲ್ಲಿ ಪ್ರಮುಖನಾಗಿದ್ದ.+ ಆದ್ರೆ ಬಾಳನ ವಿಷ್ಯದಲ್ಲಿ ಅವನು ಅಪರಾಧಿಯಾಗಿ+ ಸತ್ತ.   ಈಗ ಅವರು ಇನ್ನೂ ಹೆಚ್ಚು ಪಾಪ ಮಾಡ್ತಿದ್ದಾರೆ,ತಮ್ಮ ಬೆಳ್ಳಿಯ ಮೂರ್ತಿಗಳನ್ನ ಮಾಡ್ತಿದ್ದಾರೆ,+ಅವರು ಕೌಶಲದಿಂದ ಮೂರ್ತಿಗಳನ್ನ ಮಾಡ್ತಿದ್ದಾರೆ. ಅವೆಲ್ಲ ಕರಕುಶಲಗಾರರ ಕೈಕೆಲಸನೇ. ‘ಬಲಿ ಅರ್ಪಿಸುವವರು ಕರುಗಳ ಮೂರ್ತಿಗಳಿಗೆ ಮುತ್ತಿಡ್ಲಿ’+ ಅಂತ ಹೇಳ್ತಿದ್ದಾರೆ.   ಹಾಗಾಗಿ ಅವರು ಬೆಳಿಗ್ಗೆಯ ಮೋಡದ ತರನೂಬೇಗ ಕರಗಿ ಹೋಗೋ ಇಬ್ಬನಿ ತರನೂಬಿರುಗಾಳಿ ಕಣದಿಂದ ಬಡ್ಕೊಂಡು ಹೋಗೋ ಹೊಟ್ಟಿನ ತರಾನೂಹೊಗೆ ಕೊಳವೆಯಿಂದ ಬರೋ ಹೊಗೆ ತರನೂ ಇರ್ತಾರೆ.   ಆದ್ರೆ ನೀನು ಈಜಿಪ್ಟ್‌ ದೇಶದಲ್ಲಿದ್ದ ಕಾಲದಿಂದ ಯೆಹೋವನಾದ ನಾನೇ ನಿನ್ನ ದೇವರಾಗಿದ್ದೀನಿ,+ನನ್ನನ್ನ ಬಿಟ್ಟು ನೀನು ಬೇರೆ ದೇವರನ್ನ ಅರಿತುಕೊಂಡಿರಲಿಲ್ಲ,ನನ್ನನ್ನ ಬಿಟ್ಟು ನಿನಗೆ ಬೇರೆ ರಕ್ಷಕನಿಲ್ಲ.+   ಕಾಡಲ್ಲಿ,+ ನೀರಿಲ್ಲದ ಒಣಪ್ರದೇಶದಲ್ಲಿ ನಾನು ನಿನ್ನ ಕಡೆ ಗಮನಹರಿಸಿದೆ.   ನಾನು ಅವ್ರನ್ನ ಹುಲ್ಲುಗಾವಲುಗಳಿಗೆ ನಡೆಸಿದಾಗ ಅವರು ಅವುಗಳಿಂದ ತೃಪ್ತರಾದ್ರು,+ತೃಪ್ತರಾದಾಗ ಅವರ ಹೃದಯ ಅಹಂಕಾರದಿಂದ ಉಬ್ಬಿಕೊಂಡಿತು. ಹಾಗಾಗಿ ಅವರು ನನ್ನನ್ನ ಮರೆತುಬಿಟ್ರು.+   ನಾನು ಅವ್ರ ಪಾಲಿಗೆ ಪ್ರಾಯದ ಸಿಂಹದ ತರ ಇರ್ತಿನಿ,+ದಾರಿ ಪಕ್ಕದಲ್ಲಿ ಅಡಗಿಕೊಂಡು ಹೊಂಚುಹಾಕೋ ಚಿರತೆ ತರ ಇರ್ತಿನಿ.   ಮರಿಗಳನ್ನ ಕಳ್ಕೊಂಡ ಕರಡಿ ತರ ಅವ್ರ ಮೇಲೆ ಬಿದ್ದುಅವ್ರ ಎದೆಯನ್ನ ಸೀಳಿಹಾಕ್ತೀನಿ. ಅವ್ರನ್ನ ಸಿಂಹದ ತರ ಅಲ್ಲೇ ತಿಂದುಹಾಕ್ತೀನಿ,ಅವ್ರನ್ನ ಒಂದು ಕಾಡುಪ್ರಾಣಿ ಸೀಳಿ ತುಂಡುತುಂಡು ಮಾಡಿಬಿಡುತ್ತೆ.   ಇಸ್ರಾಯೇಲೇ, ಅದು ನಿನ್ನನ್ನ ನಾಶಮಾಡುತ್ತೆ,ಯಾಕಂದ್ರೆ ನೀನು ನನ್ನ ವಿರುದ್ಧ, ನಿನಗೆ ಸಹಾಯಮಾಡಿದ ನನ್ನ ವಿರುದ್ಧನೇ ತಿರುಗಿಬಿದ್ದೆ. 10  ನಿನ್ನ ಎಲ್ಲ ಪಟ್ಟಣಗಳಲ್ಲಿ ನಿನ್ನನ್ನ ಕಾಪಾಡಬೇಕಾದ ನಿನ್ನ ರಾಜ ಎಲ್ಲಿ?+ ನಿನ್ನ ಅಧಿಪತಿಗಳು* ಎಲ್ಲಿ? ‘ನನಗೆ ಒಬ್ಬ ರಾಜನನ್ನ ಕೊಡು, ಅಧಿಕಾರಿಗಳನ್ನ ಕೊಡು’+ ಅಂತ ಕೇಳಿದ್ದು ನೀನೇ ಅಲ್ವಾ? 11  ನಾನು ಕೋಪಗೊಂಡು ನಿನಗೆ ಒಬ್ಬ ರಾಜನನ್ನ ಕೊಟ್ಟೆ,+ನಾನು ಕ್ರೋಧದಿಂದ ಅವನನ್ನ ಕಿತ್ಕೊಳ್ತೀನಿ.+ 12  ಎಫ್ರಾಯೀಮಿನ ತಪ್ಪುಗಳನ್ನ ಮೂಟೆಕಟ್ಟಿ ಇಡಲಾಗಿದೆ,*ಅವನ ಪಾಪಗಳನ್ನ ಶೇಖರಿಸಿಡಲಾಗಿದೆ. 13  ಅವನು ಹೆರಿಗೆ ನೋವಿನ ತರ ನೋವು ಅನುಭವಿಸ್ತಾನೆ. ಅವನು ಬುದ್ಧಿಯಿಲ್ಲದ ಮಗು,ಹುಟ್ಟೋ ಸಮಯ ಬಂದ್ರೂ ಅವನಿಗೆ ಹೊರಗೆ ಬರೋಕೆ ಇಷ್ಟ ಇಲ್ಲ. 14  ನಾನು ಅವ್ರನ್ನ ಸಮಾಧಿಯ* ಅಧಿಕಾರದಿಂದ ಬಿಡಿಸ್ತೀನಿ,ನಾನು ಅವ್ರನ್ನ ಮರಣದಿಂದ ಬಿಡಿಸ್ತೀನಿ.+ ಮರಣವೇ, ಕುಟುಕುವ ನಿನ್ನ ಕೊಂಡಿಗಳು ಎಲ್ಲಿ ಹೋಯ್ತು?+ ಸಮಾಧಿಯೇ, ನಾಶಮಾಡೋ ನಿನ್ನ ಶಕ್ತಿ ಎಲ್ಲಿ ಹೋಯ್ತು?+ ಆದ್ರೆ ನಾನು ಸ್ವಲ್ಪನೂ ಕನಿಕರ ತೋರಿಸಲ್ಲ.* 15  ಅವನು ಆಪುಹುಲ್ಲಿನ ಮಧ್ಯ ಸೊಂಪಾಗಿ ಬೆಳೆದ್ರೂಪೂರ್ವ ದಿಕ್ಕಿಂದ ಗಾಳಿ ಬೀಸೋ ತರ ಯೆಹೋವ ಮಾಡ್ತಾನೆ,ಮರುಭೂಮಿಯಿಂದ ಬರೋ ಆ ಗಾಳಿ ಅವನ ಬಾವಿಯನ್ನ ಒಣಗಿಸಿ, ಅವನ ಬುಗ್ಗೆಯನ್ನ ಬತ್ತಿಸುತ್ತೆ. ಒಬ್ಬ ಬಂದು ಅವನ ಎಲ್ಲ ಅಮೂಲ್ಯ ವಸ್ತುಗಳಿರೋ ಖಜಾನೆಯನ್ನ ಲೂಟಿ ಮಾಡ್ತಾನೆ.+ 16  ಸಮಾರ್ಯ ತನ್ನ ದೇವರಿಗೆ ತಿರುಗಿಬಿದ್ದ ಕಾರಣ+ ಅದ್ರ ಮೇಲೆ ತಪ್ಪು ಹೊರಿಸಲಾಗುತ್ತೆ.+ ಅವ್ರನ್ನ ಕತ್ತಿಯಿಂದ ಕೊಲ್ತಾರೆ,+ಅವ್ರ ಮಕ್ಕಳನ್ನ ಕ್ರೂರವಾಗಿ ಕೊಲ್ಲಲಾಗುತ್ತೆ,ಗರ್ಭಿಣಿ ಸ್ತ್ರೀಯರ ಹೊಟ್ಟೆಯನ್ನ ಸೀಳಲಾಗುತ್ತೆ.”

ಪಾದಟಿಪ್ಪಣಿ

ಅಕ್ಷ. “ನ್ಯಾಯಾಧೀಶರು.”
ಅಥವಾ “ಕೂಡಿಸಿಡಲಾಗಿದೆ.”
ಅದು, ಅವರು ಇನ್ನೂ ಪಾಪಿಗಳಾಗಿದ್ದ ಕಾರಣ. ವಚನ 12ನ್ನ ನೋಡಿ.