ಯೋಬ 3:1-26

  • ಯಾಕೆ ಹುಟ್ಟಿದೆ ಅಂತ ದುಃಖಿಸಿದ ಯೋಬ (1-26)

    • ತನ್ನ ಕಷ್ಟಗಳಿಗೆ ಕಾರಣ ಕೇಳಿದ (20, 21)

3  ಇದಾದ ಮೇಲೆ ಯೋಬ ಮಾತಾಡೋಕೆ ಶುರುಮಾಡಿ ತಾನು ಹುಟ್ಟಿದ ದಿನವನ್ನ ಶಪಿಸ್ತಾ+  ಹೀಗಂದ:   “ನಾನು ಹುಟ್ಟಿದ ದಿನ ಹಾಳಾಗಿ ಹೋಗಬೇಕಿತ್ತು,+‘ಗಂಡು ಮಗು ಹುಟ್ಟಿದೆ’ ಅಂತ ಹೇಳಿದ ರಾತ್ರಿ ಹಾಳಾಗಿ ಹೋಗಬೇಕಿತ್ತು.   ಆ ದಿನ ಕತ್ತಲೆ ಆಗಬೇಕಿತ್ತು. ಮೇಲಿರೋ ದೇವರು ಆ ದಿನವನ್ನ ಲೆಕ್ಕಿಸಬಾರದಿತ್ತು,ಆ ದಿನ ಬೆಳಕು ಬರ್ಲೇ ಬಾರದಿತ್ತು.   ಗಾಢ ಅಂಧಕಾರ* ಆ ದಿನವನ್ನ ಮುಚ್ಚಿ ಬಿಡಬೇಕಿತ್ತು. ದಟ್ಟ ಮೋಡ ಕವಿಬೇಕಿತ್ತು. ಆ ದಿನದ ಬೆಳಕು ಭಯಾನಕ ಕತ್ತಲೆಯಲ್ಲಿ ಹೂತು ಹೋಗಬೇಕಿತ್ತು.   ಆ ರಾತ್ರಿ ಕತ್ತಲೆಯಲ್ಲಿ ಕಳೆದು ಹೋಗಬೇಕಿತ್ತು,+ವರ್ಷದ ಬೇರೆ ದಿನಗಳ ಹಾಗೇ ಆ ದಿನ ಸಂತೋಷವನ್ನೇ ನೋಡಬಾರದಿತ್ತು,ಆ ದಿನ ಯಾವ ತಿಂಗಳಲ್ಲೂ ಸೇರಬಾರದಿತ್ತು.   ಆ ರಾತ್ರಿ ಬರಡಾಗಬೇಕಿತ್ತು,ಅದ್ರಲ್ಲಿ ಹರ್ಷಾನಂದ ಕೇಳಿಬರಬಾರದಿತ್ತು.   ದಿನವನ್ನ ಶಪಿಸುವವರು, ಲಿವ್ಯಾತಾನನ್ನ*+ ಎಬ್ಬಿಸಬಲ್ಲವರುನಾನು ಹುಟ್ಟಿದ ದಿನವನ್ನ ಶಪಿಸಬೇಕಿತ್ತು.   ಆ ದಿನದ ಮುಂಜಾನೆ ಮಸುಕಲ್ಲಿ ನಕ್ಷತ್ರಗಳು ಕಪ್ಪಾಗಬೇಕಿತ್ತು,ಆ ದಿನ ಬೆಳಕಿಗಾಗಿ ಕಾಯೋದು ವ್ಯರ್ಥ ಆಗಬೇಕಿತ್ತು,ಸೂರ್ಯೋದಯದ ಕಿರಣಗಳನ್ನ ಆ ದಿನ ನೋಡಬಾರದಿತ್ತು. 10  ಯಾಕಂದ್ರೆ ಅದು ನನ್ನ ಅಮ್ಮನ ಗರ್ಭದ ಬಾಯನ್ನ ಮುಚ್ಚಿಬಿಡಲಿಲ್ಲ,+ಕಷ್ಟಗಳನ್ನ ನನ್ನಿಂದ ಮರೆಮಾಡಲಿಲ್ಲ. 11  ಹುಟ್ಟಿದಾಗ್ಲೇ ನಾನು ಸಾಯಬಾರದಿತ್ತಾ? ಅಮ್ಮನ ಗರ್ಭದಿಂದ ಹೊರಗೆ ಬಂದಾಗ್ಲೇ ನನ್ನ ಉಸಿರು ನಿಂತು ಹೋಗಬಾರದಿತ್ತಾ?+ 12  ನನ್ನ ಅಮ್ಮ ನನ್ನನ್ನ ಯಾಕೆ ಮಡಿಲಲ್ಲಿ ಹಾಕೊಂಡಳು? ಯಾಕೆ ನನಗೆ ಹಾಲು ಕೊಟ್ಟಳು? 13  ಹಾಗೆ ಮಾಡದೇ ಇದ್ದಿದ್ರೆ ಸಮಾಧಿಯಲ್ಲಿ ಚಿಂತೆಯಿಲ್ಲದೆ ಮಲಗಿರ್ತಿದ್ದೆ,+ವಿಶ್ರಾಂತಿ ಪಡೀತಾ ನೆಮ್ಮದಿಯಿಂದ ನಿದ್ದೆ ಮಾಡ್ತಿದ್ದೆ+ 14  ತಮಗಾಗಿ ಕಟ್ಕೊಂಡಿದ್ದ ಆದ್ರೆ ಈಗ ನಾಶ ಆಗಿಹೋಗಿರೋ ಕಟ್ಟಡಗಳಲ್ಲಿ* ಆ ರಾಜರ, ಅವ್ರ ಸಲಹೆಗಾರರ ಜೊತೆ ನಿದ್ದೆ ಮಾಡ್ತಿದ್ದೆ. 15  ಮನೇಲಿ ಚಿನ್ನ ಬೆಳ್ಳಿಯನ್ನ ತುಂಬಿಸಿ ಇಟ್ಕೊಂಡಿದ್ದರಾಜಕುಮಾರರ* ಜೊತೆ ಮಣ್ಣಾಗಿರ್ತಿದ್ದೆ. 16  ಗರ್ಭಸ್ರಾವವಾಗಿ ಹೋದ,ಬೆಳಕನ್ನೇ ನೋಡದೆ ಸತ್ತುಹೋದ ಕೂಸಿನ ಹಾಗೆ ನಾನು ಇರಬಾರದಿತ್ತಾ? 17  ಸಮಾಧಿಯಲ್ಲಿ ಕೆಟ್ಟವರಿಗೆ ಕಳವಳ ಇಲ್ಲ,ಬಳಲಿಹೋದವರೂ ಅಲ್ಲಿ ಹಾಯಾಗಿ ಇರ್ತಾರೆ.+ 18  ಕೈದಿಗಳೂ ಅಲ್ಲಿ ಆರಾಮವಾಗಿ ಇರ್ತಾರೆ,ಒತ್ತಾಯದಿಂದ ಕೆಲಸ ಮಾಡಿಸುವವರ ಸ್ವರ ಅವ್ರಿಗೆ ಕೇಳಿಸಲ್ಲ. 19  ಅಲ್ಲಿ ಶ್ರೇಷ್ಠ, ಕನಿಷ್ಠ ಅನ್ನೋ ಭೇದ ಇಲ್ಲ,+ದಾಸನಿಗೆ ಯಜಮಾನನ ಕಟ್ಟುಪಾಡಿಲ್ಲ. 20  ಕಷ್ಟದಲ್ಲಿ ಇರುವವನಿಗೆ ದೇವರು ಬೆಳಕು ಕೊಡೋದು ಯಾಕೆ? ನೋವಲ್ಲಿ ಬೆಂದು ನೊಂದವನನ್ನ ಬದುಕೋಕೆ ಬಿಟ್ಟಿರೋದು ಯಾಕೆ?+ 21  ಸಾವಿಗಾಗಿ ಹಂಬಲಿಸುವವರಿಗೆ ಸಾವು ಯಾಕೆ ಬರೋದಿಲ್ಲ?+ ನಿಧಿನಿಕ್ಷೇಪ ಹುಡುಕೋದಕ್ಕಿಂತ ಹೆಚ್ಚಾಗಿ ಸಾವನ್ನ ಹುಡುಕಿದ್ರೂ ಯಾಕೆ ಸಿಗೋದಿಲ್ಲ? 22  ಸಮಾಧಿ ಸಿಕ್ಕಿದಾಗ ಅವರು ಖುಷಿಪಡ್ತಾರೆ,ಸಂತೋಷದಿಂದ ಸಂಭ್ರಮಿಸ್ತಾರೆ. 23  ದಾರಿ ತಪ್ಪಿದವನ ಸುತ್ತ ದೇವರು ಯಾಕೆ ಬೇಲಿ ಹಾಕ್ತಾನೆ?+ ಅವನನ್ನ ಯಾಕೆ ಬದುಕೋಕೆ ಬಿಡ್ತಾನೆ? 24  ದುಃಖದ ನಿಟ್ಟುಸಿರೇ ನನಗೆ ಆಹಾರ,+ಹರಿಯೋ ನೀರಿನ ಹಾಗೇ ನನ್ನ ನರಳಾಟಕ್ಕೆ+ ಕೊನೆ ಇಲ್ಲ. 25  ಯಾವುದಕ್ಕೆ ತುಂಬ ಭಯಪಡ್ತಿನೋ ಅದೇ ನನಗೆ ಬಂದಿದೆ,ಯಾವುದಕ್ಕೆ ಹೆದರುತ್ತಿನೋ ಅದ್ರಲ್ಲೇ ಸಿಕ್ಕಿಹಾಕೊಂಡಿದ್ದೀನಿ. 26  ನನಗೆ ಶಾಂತಿ, ನೆಮ್ಮದಿ, ವಿಶ್ರಾಂತಿ ಇಲ್ಲ,ಒಂದಾದ ಮೇಲೊಂದು ಕಷ್ಟ ಬರ್ತಾನೇ ಇದೆ.”

ಪಾದಟಿಪ್ಪಣಿ

ಅಥವಾ “ಕತ್ತಲೆ ಮತ್ತು ಸಾವಿನ ನೆರಳು.”
ಇದು ಮೊಸಳೆಯನ್ನ ಅಥವಾ ತುಂಬ ದೊಡ್ಡದಾದ, ಬಲಿಷ್ಠವಾದ ನೀರಲ್ಲಿರೋ ಬೇರೆ ಯಾವುದೋ ಪ್ರಾಣಿಯನ್ನ ಸೂಚಿಸುತ್ತೆ ಅಂತಾರೆ ಸ್ವಲ್ಪ ಜನ.
ಬಹುಶಃ, “ಹಾಳುಬಿದ್ದ ಸ್ಥಳಗಳನ್ನ ತಮಗಾಗಿ ಕಟ್ಟಿಸಿಕೊಂಡಿರೋ.”
ಅಥವಾ “ಆಸ್ಥಾನದ ಉನ್ನತ ಅಧಿಕಾರಿಗಳ.”