ಯೋಬ 27:1-23

  • ನಿಷ್ಠೆ ಕಾಪಾಡ್ಕೊಳ್ಳೋಕೆ ಯೋಬನ ದೃಢಸಂಕಲ್ಪ (1-23)

    • “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ” (5)

    • ದೇವರನ್ನ ಬಿಟ್ಟುಬಿಟ್ಟವನಿಗೆ ನಿರೀಕ್ಷೆ ಇಲ್ಲ (8)

    • ‘ಅರ್ಥ ಇಲ್ಲದ ಮಾತುಗಳನ್ನ ಯಾಕೆ ಆಡ್ತೀರ?’ (12)

    • ಕೆಟ್ಟವನಿಗೆ ಏನೂ ಸಿಗಲ್ಲ (13-23)

27  ಯೋಬ ತನ್ನ ಮಾತು ಮುಂದುವರಿಸಿ ಹೀಗೆ ಹೇಳಿದ,  2  “ನನಗೆ ಅನ್ಯಾಯ ಮಾಡಿದ ದೇವರ+ ಜೀವದಾಣೆ,ನನ್ನ ಬಾಳನ್ನ ಕಹಿಯಾಗಿ ಮಾಡಿದ ಸರ್ವಶಕ್ತನ+ ಜೀವದಾಣೆ,  3  ನನ್ನ ಉಸಿರು ಇರೋ ತನಕ,ದೇವರು ನನ್ನ ಮೂಗಲ್ಲಿ ಊದಿದ ಜೀವಶ್ವಾಸ*+ ಇರೋ ತನಕ  4  ನಾನು ತಪ್ಪಾಗಿ ಮಾತಾಡೋದೆ ಇಲ್ಲ,ಮೋಸದ ಮಾತುಗಳು ನನ್ನ ಬಾಯಲ್ಲಿ ಬರೋದೇ ಇಲ್ಲ!  5  ನೀವು ನೀತಿವಂತರು ಅಂತ ನಾನು ಊಹಿಸೋಕೂ ಆಗಲ್ಲ,ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!+  6  ನಿನಗೆ ಇಷ್ಟ ಆಗೋದನ್ನೇ ಯಾವಾಗ್ಲೂ ಮಾಡ್ತೀನಿ, ಅದನ್ನ ಯಾವತ್ತೂ ಬಿಟ್ಟುಬಿಡಲ್ಲ,+ಆಗ ಬದುಕಿರೋ ತನಕ ನನ್ನ ಮನಸ್ಸು ಚುಚ್ಚಲ್ಲ.  7  ಕೆಟ್ಟವ್ರಿಗೆ ಬರೋ ಗತಿನೇ ನನ್ನ ಶತ್ರುಗಳಿಗೆ ಬರಲಿ,ಅವ್ರಿಗೆ ಬರೋ ಗತಿನೇ ನನ್ನ ಮೇಲೆ ದಾಳಿ ಮಾಡುವವರಿಗೆ ಬರಲಿ.  8  ದೇವ್ರನ್ನ ಬಿಟ್ಟುಬಿಟ್ಟವನು* ನಾಶ ಆದ್ಮೇಲೆ,+ದೇವರು ಅವನ ಪ್ರಾಣವನ್ನ ತೆಗೆದ ಮೇಲೆ ಅವನಿಗೇನಾದ್ರೂ ನಿರೀಕ್ಷೆ ಇದ್ಯಾ?  9  ಕಷ್ಟ ಬಂದಾಗಅವನ ಕೂಗನ್ನ ದೇವರು ಕೇಳ್ತಾನಾ?+ 10  ಸರ್ವಶಕ್ತನಿಂದಾಗಿ ಅವನು ಸಂತೋಷವಾಗಿ ಇರ್ತಾನಾ? ಎಲ್ಲ ಸಮಯದಲ್ಲಿ ದೇವ್ರಿಗೆ ಅವನು ಪ್ರಾರ್ಥನೆ ಮಾಡ್ತಾನಾ? 11  ನಿಮಗೆ ದೇವರ ಶಕ್ತಿ ಬಗ್ಗೆ* ಕಲಿಸ್ತೀನಿ,ಸರ್ವಶಕ್ತನ ಬಗ್ಗೆ ಏನೂ ಮುಚ್ಚಿಡಲ್ಲ. 12  ನೀವೆಲ್ಲ ದರ್ಶನ ನೋಡಿದ್ದೀರ ಅಂತ ಹೇಳ್ತಾ ಇದ್ದೀರಲ್ಲಾ,ಅಂದ್ಮೇಲೆ ಸ್ವಲ್ಪನೂ ಅರ್ಥ ಇಲ್ಲದ ಮಾತುಗಳನ್ನ ಯಾಕೆ ಆಡ್ತೀರ? 13  ಕೆಟ್ಟವನಿಗೆ ದೇವ್ರಿಂದ ಸಿಗೋ ಪಾಲು,+ಕ್ರೂರಿಗೆ ಸರ್ವಶಕ್ತನಿಂದ ಸಿಗೋ ಆಸ್ತಿ ಏನು ಗೊತ್ತಾ? 14  ಅವನಿಗೆ ತುಂಬ ಗಂಡು ಮಕ್ಕಳು ಹುಟ್ಟಿದ್ರೂ ಅವರು ಕತ್ತಿಯಿಂದ ಸಾಯ್ತಾರೆ,+ಅವನ ವಂಶದವ್ರಿಗೆ ಹೊಟ್ಟೆ ತುಂಬಾ ಊಟ ಇರಲ್ಲ. 15  ಅವನ ವಂಶದಲ್ಲಿ ಉಳಿದವರು ಕಾಯಿಲೆ ಬಂದು ಮಣ್ಣಿಗೆ ಸೇರ್ತಾರೆ,ಅವರ ಹೆಂಡತಿಯರು ಅವ್ರಿಗಾಗಿ ಕಣ್ಣೀರಿಡಲ್ಲ. 16  ಅವನು ಬೆಳ್ಳಿಯನ್ನ ರಾಶಿ ರಾಶಿ ಧೂಳಿನಷ್ಟು ಕೂಡಿಸಿಟ್ರೂಒಳ್ಳೊಳ್ಳೆ ಬಟ್ಟೆಗಳನ್ನ ಮಣ್ಣಿನ ಗುಡ್ಡೆಗಳಷ್ಟು ಸೇರಿಸಿಟ್ರೂ 17  ಅವನು ಕೂಡಿಸಿಟ್ಟ ಬಟ್ಟೆಗಳನ್ನೆಲ್ಲ ನೀತಿವಂತರು ಹಾಕೊಳ್ತಾರೆ,+ಅವನ ಬೆಳ್ಳಿಯನ್ನೆಲ್ಲ ನಿರಪರಾಧಿಗಳು ಹಂಚ್ಕೊಳ್ತಾರೆ. 18  ಅವನು ಕಟ್ಟಿದ ಮನೆಗೆ ಚಿಟ್ಟೆಯ ಗೂಡಿನ* ಹಾಗೆಕಾವಲುಗಾರನ ಚಪ್ಪರದ+ ಹಾಗೆ ಬಲ ಇರಲ್ಲ. 19  ಅವನು ಮಲಗುವಾಗ ತುಂಬ ಶ್ರೀಮಂತ ಆಗಿದ್ರೂಅವನ ಹತ್ರ ಏನೂ ಉಳಿಯಲ್ಲ,ಅವನು ನಿದ್ದೆಯಿಂದ ಎದ್ದಾಗ ಬಡವನಾಗಿ ಬಿಡ್ತಾನೆ. 20  ಪ್ರವಾಹದ ತರ ಭಯ ಅವನನ್ನ ಕೊಚ್ಕೊಂಡು ಹೋಗುತ್ತೆ,ರಾತ್ರಿಯಲ್ಲಿ ಬಿರುಗಾಳಿ ಅವನನ್ನ ಹೊಡ್ಕೊಂಡು ಹೋಗುತ್ತೆ.+ 21  ಪೂರ್ವದ ಗಾಳಿ ಅವನನ್ನ ಹೊತ್ಕೊಂಡು ಹೋಗುತ್ತೆ,ಆಗ ಅವನು ಇಲ್ಲದೇ ಹೋಗ್ತಾನೆ,ಅವನ ಜಾಗದಿಂದ ಅದು ಎತ್ತಿ ಬಿಸಾಡುತ್ತೆ.+ 22  ಅದ್ರಿಂದ ತಪ್ಪಿಸ್ಕೊಂಡು ಓಡುವಾಗ+ಅದು ಸ್ವಲ್ವನೂ ದಯೆ ತೋರಿಸದೆ ಅವನ ಮೇಲೆ ಜೋರಾಗಿ ಬೀಸುತ್ತೆ.+ 23  ಅದು* ಅವನ ಪರದಾಟ ನೋಡಿ ಚಪ್ಪಾಳೆ ಹೊಡೆಯುತ್ತೆ,ತನ್ನ ಜಾಗದಲ್ಲೇ ನಿಂತು ಅವನನ್ನ ಅಣಕಿಸಿ ಸೀಟಿ+ ಹಾಕುತ್ತೆ.

ಪಾದಟಿಪ್ಪಣಿ

ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಅಥವಾ “ಧರ್ಮಭ್ರಷ್ಟ.”
ಬಹುಶಃ, “ದೇವರ ಸಹಾಯದಿಂದ.”
ಅಥವಾ “ಪತಂಗದ ಪ್ಯೂಪದ.”
ಬಹುಶಃ, “ಜನ್ರು.”