ಯೆಹೋಶುವ 3:1-17

  • ಇಸ್ರಾಯೇಲ್ಯರು ಯೋರ್ದನ್‌ ನದಿ ದಾಟಿದ್ರು (1-17)

3  ಯೆಹೋಶುವ ಮತ್ತು ಎಲ್ಲ ಇಸ್ರಾಯೇಲ್ಯರು* ಬೆಳಿಗ್ಗೆ ಬೇಗ ಎದ್ದು ಶಿಟ್ಟೀಮಿಂದ+ ಯೋರ್ದನ್‌ ನದಿ ಹತ್ರ ಬಂದ್ರು. ಆ ರಾತ್ರಿ ನದಿ ದಾಟದೆ ಅಲ್ಲೇ ಇದ್ರು.  ಮೂರು ದಿನ ಆದ್ಮೇಲೆ ಅಧಿಕಾರಿಗಳು+ ಪಾಳೆಯದ ಎಲ್ಲ ಕಡೆ ಹೋಗಿ  ಜನ್ರಿಗೆ ಹೀಗೆ ಹೇಳಿದ್ರು: “ಲೇವಿಯರಾದ ಪುರೋಹಿತರು ಯೆಹೋವ ದೇವರ ಒಪ್ಪಂದದ ಮಂಜೂಷ* ಹೊತ್ಕೊಂಡು+ ಹೋಗೋದನ್ನ ನೋಡಿದ ತಕ್ಷಣ ನಿಮ್ಮನಿಮ್ಮ ಜಾಗ ಬಿಟ್ಟು ಅದ್ರ ಹಿಂದೆ ಹೋಗಬೇಕು.  ಆದ್ರೆ ನೀವು ಅದ್ರಿಂದ ಸುಮಾರು 2,000 ಮೊಳ* ದೂರ ಇರಬೇಕು. ಮಂಜೂಷದ ಹತ್ರ ಹೋಗಬಾರದು. ಆಗ ಯಾವ ದಾರೀಲಿ ಹೋಗಬೇಕಂತ ನಿಮಗೆ ಗೊತ್ತಾಗುತ್ತೆ. ಯಾಕಂದ್ರೆ ಇಲ್ಲಿ ತನಕ ನೀವು ಆ ದಾರೀಲಿ ಹೋಗಿಲ್ಲ.”  ಆಗ ಯೆಹೋಶುವ ಜನ್ರಿಗೆ “ತಯಾರಾಗಿ.*+ ಯಾಕಂದ್ರೆ ನಾಳೆ ಯೆಹೋವ ನಿಮ್ಮ ಮುಂದೆ ಅದ್ಭುತ ಮಾಡ್ತಾನೆ”+ ಅಂದ.  ಆಮೇಲೆ ಯೆಹೋಶುವ ಪುರೋಹಿತರಿಗೆ “ಒಪ್ಪಂದದ ಮಂಜೂಷ ಹೊತ್ಕೊಂಡು+ ಜನ್ರ ಮುಂದೆ ಹೋಗಿ” ಅಂದ. ಅವರು ಅದನ್ನ ಹೊತ್ಕೊಂಡು ಜನ್ರ ಮುಂದೆ ಹೋದ್ರು.  ಯೆಹೋವ ಯೆಹೋಶುವನಿಗೆ “ಇವತ್ತಿಂದ ಎಲ್ಲ ಇಸ್ರಾಯೇಲ್ಯರು ನಿನ್ನನ್ನ ಗೌರವಿಸೋ ತರ ಮಾಡ್ತೀನಿ.+ ನಾನು ಮೋಶೆ ಜೊತೆ ಇದ್ದ ಹಾಗೆ+ ನಿನ್ನ ಜೊತೆನೂ ಇದ್ದೀನಿ+ ಅಂತ ಅವ್ರಿಗೆ ಆಗ ಗೊತ್ತಾಗುತ್ತೆ.  ಒಪ್ಪಂದದ ಮಂಜೂಷವನ್ನ ಹೊತ್ಕೊಂಡು ಹೋಗೋ ಪುರೋಹಿತರಿಗೆ ‘ನೀವು ಯೋರ್ದನ್‌ ನದಿ ತೀರಕ್ಕೆ ಹೋಗಿ ನೀರಲ್ಲಿ ಅಲ್ಲಾಡದೆ ನಿಲ್ಲಬೇಕು’ + ಅಂತ ಅಪ್ಪಣೆ ಕೊಡು” ಅಂದನು.  ಯೆಹೋಶುವ ಇಸ್ರಾಯೇಲ್ಯರಿಗೆ “ಇಲ್ಲಿ ಬನ್ನಿ, ನಿಮ್ಮ ದೇವರಾದ ಯೆಹೋವನ ಮಾತು ಕೇಳಿಸ್ಕೊಳ್ಳಿ” ಅಂದ. 10  ಆಮೇಲೆ ಯೆಹೋಶುವ “ಜೀವ ಇರೋ ದೇವರು ನಿಮ್ಮ ಜೊತೆ ಇದ್ದಾನೆ,+ ಆತನು ಕಾನಾನ್ಯರನ್ನ, ಹಿತ್ತಿಯರನ್ನ, ಹಿವ್ವಿಯರನ್ನ, ಪೆರಿಜೀಯರನ್ನ, ಗಿರ್ಗಾಷಿಯರನ್ನ, ಅಮೋರಿಯರನ್ನ, ಯೆಬೂಸಿಯರನ್ನ ಖಂಡಿತ ಓಡಿಸಿಬಿಡ್ತಾನೆ ಅಂತ ಇದ್ರಿಂದ ನಿಮಗೆ ಗೊತ್ತಾಗುತ್ತೆ.+ 11  ನೋಡಿ, ಇಡೀ ಭೂಮಿಯ ಒಡೆಯನ ಒಪ್ಪಂದದ ಮಂಜೂಷ ನಿಮ್ಮ ಮುಂದೆ ಯೋರ್ದನ್‌ ನದಿಯಲ್ಲಿ ಹೋಗ್ತಿದೆ. 12  ಈಗ ಇಸ್ರಾಯೇಲಿನ ಒಂದೊಂದು ಕುಲದಿಂದ ಒಬ್ಬೊಬ್ಬರಂತೆ 12 ಜನ್ರನ್ನ ಆರಿಸ್ಕೊಳ್ಳಿ.+ 13  ಇಡೀ ಭೂಮಿಯ ಒಡೆಯನಾದ ಯೆಹೋವನ ಮಂಜೂಷವನ್ನ ಹೊತ್ಕೊಂಡು ಹೋಗೋ ಪುರೋಹಿತರು ಯೋರ್ದನ್‌ ನದಿ ನೀರಲ್ಲಿ ಕಾಲಿಟ್ಟ ಕೂಡ್ಲೇ ಹರಿದು ಬರೋ ನೀರು ಗೋಡೆ ತರ* ಅಲ್ಲೇ ನಿಂತುಬಿಡುತ್ತೆ”+ ಅಂದ. 14  ಜನ್ರು ಡೇರೆ ಹಾಕಿದ್ದ ಸ್ಥಳ ಬಿಟ್ಟು ಯೋರ್ದನ್‌ ನದಿ ದಾಟೋ ಮುಂಚೆ, ಒಪ್ಪಂದದ ಮಂಜೂಷ ಹೊತ್ಕೊಂಡು ಪುರೋಹಿತರು+ ಅವ್ರ ಮುಂದೆ ಹೋದ್ರು. 15  ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಯೋರ್ದನ್‌ ನದಿ ತೀರಕ್ಕೆ ಬಂದು ನೀರಲ್ಲಿ ಕಾಲಿಟ್ಟ ಕೂಡ್ಲೇ, (ಕೊಯ್ಲಿನ ಎಲ್ಲ ದಿನ ಯೋರ್ದನ್‌ ನದಿ ದಡಮೀರಿ ಹರಿತಿತ್ತು)+ 16  ಮೇಲಿಂದ ಬರ್ತಿದ್ದ ನೀರು ದೂರದಲ್ಲಿ ಚಾರೆತಾನ್‌ ಹತ್ರ ಆದಾಮ್‌ ಅನ್ನೋ ಪಟ್ಟಣದಲ್ಲಿ ಗೋಡೆ ತರ* ನಿಂತುಬಿಡ್ತು. ಅಲ್ಲಿಂದ ಮುಂದೆ ಹರಿತಿದ್ದ ನೀರು ಅರಾಬಾ ಅನ್ನೋ ಲವಣ ಸಮುದ್ರದ* ಕಡೆ ಹರಿದು ಹೋಯ್ತು. ಹೀಗೆ ನದಿ ಹರಿಯದೆ ನಿಂತೋಯ್ತು. ಆಗ ಜನ ಯೆರಿಕೋ ಮುಂದೆ ನದಿ ದಾಟಿದ್ರು. 17  ಯೆಹೋವನ ಒಪ್ಪಂದದ ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಯೋರ್ದನ್‌ ನದಿ ಮಧ್ಯ ಒಣ ನೆಲದಲ್ಲಿ ಅಲ್ಲಾಡದೆ ನಿಂತಿದ್ದಾಗ,+ ಎಲ್ಲ ಇಸ್ರಾಯೇಲ್ಯರು ಒಣ ನೆಲದ ಮೇಲೆ ನಡ್ಕೊಂಡು ಹೋದ್ರು.+ ಹೀಗೆ ಇಡೀ ಜನಾಂಗ ಯೋರ್ದನನ್ನ ದಾಟ್ತು.

ಪಾದಟಿಪ್ಪಣಿ

ಅಕ್ಷ. “ಇಸ್ರಾಯೇಲನ ಗಂಡು ಮಕ್ಕಳು.”
ಅಥವಾ “ಸಾಕ್ಷಿ ಮಂಜೂಷ.” ಪದವಿವರಣೆ ನೋಡಿ.
ಸುಮಾರು 890 ಮೀ. (2,920 ಅಡಿ) ಪರಿಶಿಷ್ಟ ಬಿ14 ನೋಡಿ.
ಅಕ್ಷ. “ನಿಮ್ಮನ್ನ ಪವಿತ್ರ ಮಾಡ್ಕೊಳ್ಳಿ.”
ಅಥವಾ “ಅಣೆಕಟ್ಟಿನ ತರ.”
ಅಥವಾ “ಅಣೆಕಟ್ಟಿನ ತರ.”
ಅದು, ಮೃತ ಸಮುದ್ರ.