ಯೆಹೋಶುವ 19:1-51

  • ಸಿಮೆಯೋನನ ಆಸ್ತಿ (1-9)

  • ಜೆಬುಲೂನನ ಆಸ್ತಿ (10-16)

  • ಇಸ್ಸಾಕಾರನ ಆಸ್ತಿ (17-23)

  • ಅಶೇರನ ಆಸ್ತಿ (24-31)

  • ನಫ್ತಾಲಿಯ ಆಸ್ತಿ (32-39)

  • ದಾನನ ಆಸ್ತಿ (40-48)

  • ಯೆಹೋಶುವನ ಆಸ್ತಿ (49-51)

19  ಆಮೇಲೆ ಸಿಮೆಯೋನ್‌+ ಕುಲಕ್ಕೆ ಎರಡನೇ ಚೀಟಿ+ ಬಿತ್ತು. ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿ ಯೆಹೂದ ಕುಲದ ಆಸ್ತಿ ಮಧ್ಯ ಇತ್ತು.+ 2  ಅವ್ರಿಗೆ ಸಿಕ್ಕಿದ ಪ್ರದೇಶಗಳು ಯಾವುದಂದ್ರೆ, ಶೆಬದ ಜೊತೆಗೆ ಬೇರ್ಷೆಬ,+ ಮೋಲಾದಾ,+ 3  ಹಚರ್‌-ಷೂವಾಲ್‌,+ ಬಾಲಾ, ಎಚೆಮ್‌,+ 4  ಎಲ್ಟೋಲದ್‌,+ ಬೆತೂಲ್‌, ಹೊರ್ಮಾ, 5  ಚಿಕ್ಲಗ್‌,+ ಬೇತ್‌-ಮರ್ಕಾಬೋತ್‌, ಹಚರ್‌-ಸೂಸಾ, 6  ಬೇತ್‌-ಲೆಬಾವೋತ್‌+ ಮತ್ತು ಶಾರೂಹೆನ್‌. ಹೀಗೆ 13 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 7  ಅಯಿನ್‌, ರಿಮ್ಮೋನ್‌, ಏತೆರ್‌, ಆಷಾನ್‌.+ ಹೀಗೆ ನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 8  ಬಾಲತ್‌-ಬೇರಿನ ತನಕ ಅಂದ್ರೆ ದಕ್ಷಿಣದಲ್ಲಿರೋ ರಾಮದ ತನಕ ಇದ್ದ ಎಲ್ಲ ಪಟ್ಟಣಗಳು, ಸುತ್ತ ಇದ್ದ ಹಳ್ಳಿಗಳು ಸಹ ಸಿಕ್ತು. ಇದು ಸಿಮೆಯೋನ್‌ ಕುಲಕ್ಕೆ ಸಿಕ್ಕಿದ ಆಸ್ತಿ. 9  ಯೆಹೂದ ವಂಶದವ್ರಿಗೆ ಸಿಕ್ಕಿದ ಪಾಲಿಂದ ಸಿಮೆಯೋನ್‌ ವಂಶದವರು ಆಸ್ತಿ ತಗೊಂಡ್ರು. ಯಾಕಂದ್ರೆ ಯೆಹೂದ ವಂಶಕ್ಕೆ ಜಾಸ್ತಿ ಪಾಲು ಸಿಕ್ಕಿತ್ತು. ಹೀಗೆ ಸಿಮೆಯೋನ್‌ ವಂಶದವರು ಯೆಹೂದ ವಂಶದವ್ರ ಪ್ರದೇಶದಲ್ಲಿ ಆಸ್ತಿ ಪಡ್ಕೊಂಡ್ರು.+ 10  ಆಮೇಲೆ ಜೆಬುಲೂನ್‌+ ವಂಶಕ್ಕೆ ಮೂರನೇ ಚೀಟಿ+ ಬಿತ್ತು. ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿಯ ಗಡಿ ಸಾರೀದಿನ ತನಕ ಇತ್ತು. 11  ಅವ್ರ ಗಡಿ ಪಶ್ಚಿಮದ ಮರ್ಗಲಾದ ತನಕ ಹೋಗಿ, ದಬ್ಬೆಷೆತನ್ನ ದಾಟಿ ಯೊಕ್ನೆಯಾಮ್‌ ಮುಂದೆ ಇದ್ದ ಕಣಿವೆ ತನಕ* ಸಾಗಿತ್ತು. 12  ಆಮೇಲೆ ಅದು ಸಾರೀದಿಂದ ಪೂರ್ವಕ್ಕಿದ್ದ ಕಿಸ್ಲೋತ್‌-ತಾಬೋರಿನ ಅಂಚಿನ ತನಕ ಹೋಗಿ, ದಾಬೆರತಿಗೆ+ ಬಂದು ಯಾಫೀಯದ ತನಕ ಸಾಗ್ತಿತ್ತು. 13  ಅಲ್ಲಿಂದ ಅದು ಮತ್ತೆ ಪೂರ್ವ ದಿಕ್ಕಲ್ಲಿದ್ದ ಗತ್‌-ಹೇಫೆರಿಗೆ+ ಮತ್ತು ಎತ್‌-ಕಾಚೀನಿಗೆ ಹೋಗ್ತಿತ್ತು. ಅಲ್ಲಿಂದ ರಿಮ್ಮೋನನ್ನ ದಾಟಿ ನೇಯದ ತನಕ ಇತ್ತು. 14  ಆಮೇಲೆ ಆ ಗಡಿ ಉತ್ತರಕ್ಕಿದ್ದ ಹನ್ನಾತೋನಿನ ಕಡೆಗೆ ತಿರುಗಿ ಇಪ್ತಹೇಲ್‌ ಕಣಿವೆಯಲ್ಲಿ ಮುಗಿತಿತ್ತು. 15  ಅದ್ರ ಜೊತೆ ಕಟ್ಟಾತ್‌, ನಹಲಾಲ್‌, ಶಿಮ್ರೋನ್‌,+ ಇದಲಾ ಮತ್ತು ಬೆತ್ಲೆಹೇಮ್‌.+ ಹೀಗೆ 12 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 16  ಇವು ಜೆಬುಲೂನ್‌ ವಂಶದ+ ಮನೆತನಗಳಿಗೆ ಸಿಕ್ಕಿದ ಆಸ್ತಿಯಾಗಿತ್ತು. 17  ಆಮೇಲೆ ಇಸ್ಸಾಕಾರ್‌+ ವಂಶಕ್ಕೆ ನಾಲ್ಕನೇ ಚೀಟಿ+ ಬಿತ್ತು. 18  ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿಯ ಗಡಿಯಲ್ಲಿ ಈ ಪ್ರದೇಶಗಳಿದ್ವು: ಇಜ್ರೇಲ್‌,+ ಕೆಸುಲ್ಲೋತ್‌, ಶೂನೇಮ್‌,+ 19  ಹಫಾರಯಿಮ್‌, ಶೀಯೋನ್‌, ಅನಾಹರತ್‌, 20  ರಬ್ಬೀತ್‌, ಕಿಷ್ಯೋನ್‌, ಎಬೆಜ್‌, 21  ರೆಮೆತ್‌, ಏಂಗನ್ನೀಮ್‌,+ ಏನ್‌-ಹದ್ದಾ ಮತ್ತು ಬೇತ್‌-ಪಚ್ಚೇಚ್‌. 22  ಅವ್ರ ಗಡಿ ತಾಬೋರನ್ನ+ ಮುಟ್ಟಿ ಶಹಚೀಮಾ ಮತ್ತು ಬೇತ್‌-ಷೆಮೆಷಿನ ತನಕ ಹೋಗಿ ಯೋರ್ದನಲ್ಲಿ ಮುಗಿತಿತ್ತು. ಹೀಗೆ 16 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 23  ಇವು ಇಸ್ಸಾಕಾರ್‌ ಕುಲದ+ ಮನೆತನಗಳಿಗೆ ಸಿಕ್ಕಿದ ಆಸ್ತಿ. 24  ಆಮೇಲೆ ಅಶೇರ್‌+ ಕುಲಕ್ಕೆ ಐದನೇ ಚೀಟಿ+ ಬಿತ್ತು. 25  ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿಯ ಗಡಿಯಲ್ಲಿ ಈ ಪ್ರದೇಶಗಳಿದ್ವು: ಹೆಲ್ಕತ್‌,+ ಹಲೀ, ಬೆಟೆನ್‌, ಅಕ್ಷಾಫ್‌, 26  ಅಲಮ್ಮೆಲೆಕ್‌, ಅಮಾದ್‌ ಮತ್ತು ಮಿಷಾಲ್‌. ಅವ್ರ ಗಡಿ ಪಶ್ಚಿಮದ ಕಡೆಗಿದ್ದ ಕರ್ಮೆಲಿಗೆ+ ಹೋಗಿ ಶೀಹೋರ್‌-ಲಿಬ್ನತ್‌ ತನಕ ಇತ್ತು. 27  ಅದು ವಾಪಸ್‌ ಅಲ್ಲಿಂದ ಪೂರ್ವಕ್ಕಿದ್ದ ಬೇತ್‌-ದಾಗೋನಿಗೆ ಹೋಗಿ ಜೆಬುಲೂನನ್ನ ಮುಟ್ತಿತ್ತು, ಇಪ್ತಹೇಲ್‌ ಕಣಿವೆಯ ಉತ್ತರಕ್ಕಿದ್ದ ಬೇತ್‌-ಏಮೆಕ್‌ ಮತ್ತು ನೆಗೀಯೇಲ್‌ ತನಕ ಸಾಗಿ ಎಡಕ್ಕಿದ್ದ ಕಾಬೂಲ್‌ ತನಕ ಇತ್ತು. 28  ಎಬ್ರೋನ್‌, ರೆಹೋಬ್‌, ಹಮ್ಮೋನ್‌ ಮತ್ತು ಕಾನಾ ಮೇಲಿಂದ ಮಹಾ ಸೀದೋನಿನ+ ತನಕ ಇತ್ತು. 29  ಆಮೇಲೆ ಈ ಗಡಿ ವಾಪಸ್‌ ರಾಮದ ತನಕ ಮತ್ತು ಭದ್ರವಾದ ಕೋಟೆಯಿದ್ದ ತೂರ್‌+ ಪಟ್ಟಣದ ತನಕ ಹರಡಿತ್ತು. ಅಲ್ಲಿಂದ ಅದು ಹೋಸಾಗೆ ಬಂದು ಅಕ್ಜೀಬ್‌ ಪ್ರಾಂತ್ಯದಲ್ಲಿದ್ದ ಸಮುದ್ರ ತೀರದಲ್ಲಿ ಮುಗಿತಿತ್ತು. 30  ಉಮ್ಮಾ, ಅಫೇಕ್‌+ ಮತ್ತು ರೆಹೋಬ್‌.+ ಹೀಗೆ 22 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 31  ಇವು ಅಶೇರ್‌ ಕುಲದ+ ಮನೆತನಗಳಿಗೆ ಸಿಕ್ಕಿದ ಆಸ್ತಿ. 32  ಆಮೇಲೆ ನಫ್ತಾಲಿ ವಂಶಕ್ಕೆ ಆರನೇ ಚೀಟಿ+ ಬಿತ್ತು. 33  ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿಯ ಗಡಿ ಹೇಲೆಫಿನ ಮತ್ತು ಚಾನನ್ನೀಮಿನ+ ಹತ್ರ ಇದ್ದ ದೊಡ್ಡ ಮರದಿಂದ ಅದಾಮೀನೆಕೆಬಿನ ತನಕ ಹೋಗಿ ಯಬ್ನೆಯೇಲನ್ನ ದಾಟಿ ಲಕ್ಕೂಮಿನ ತನಕ ಇತ್ತು. ಅದು ಯೋರ್ದನಲ್ಲಿ ಮುಗಿತಿತ್ತು. 34  ಗಡಿ ಪಶ್ಚಿಮದ ಕಡೆಗೆ ವಾಪಸ್‌ ಅಜ್ನೋತ್‌-ತಾಬೋರಿಗೆ ಹೋಗಿ ಅಲ್ಲಿಂದ ಹುಕ್ಕೋಕಿನ ತನಕ ಹಬ್ಬಿತ್ತು. ಆಮೇಲೆ ಅದು ದಕ್ಷಿಣಕ್ಕೆ ಜೆಬುಲೂನನ್ನ ಪಶ್ಚಿಮಕ್ಕೆ ಅಶೇರನ್ನ ಪೂರ್ವಕ್ಕೆ ಯೋರ್ದನ್‌ ಹತ್ರ ಇದ್ದ ಯೆಹೂದವನ್ನ ಮುಟ್ತಿತ್ತು. 35  ಭದ್ರ ಕೋಟೆಗಳಿದ್ದ ಪಟ್ಟಣಗಳು ಯಾವದಂದ್ರೆ ಚಿದ್ದೀಮ್‌, ಚೇರ್‌, ಹಮ್ಮತ್‌,+ ರಕ್ಕತ್‌, ಕಿನ್ನೆರೆತ್‌, 36  ಅದಾಮಾ, ರಾಮ, ಹಾಚೋರ್‌,+ 37  ಕೆದೆಷ್‌,+ ಎದ್ರೈ, ಏನ್‌-ಹಾಚೋರ್‌, 38  ಇರೋನ್‌, ಮಿಗ್ದಲೇಲ್‌, ಹೊರೇಮ್‌, ಬೇತನಾತ್‌ ಮತ್ತು ಬೇತ್‌-ಷೆಮೆಷ್‌.+ ಹೀಗೆ 19 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 39  ಇವು ನಫ್ತಾಲಿ ಕುಲದ+ ಮನೆತನಗಳಿಗೆ ಸಿಕ್ಕಿದ ಆಸ್ತಿ. 40  ಆಮೇಲೆ ದಾನ್‌+ ಕುಲಕ್ಕೆ ಏಳನೇ ಚೀಟಿ+ ಬಿತ್ತು. 41  ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿಯ ಗಡಿಯಲ್ಲಿ ಈ ಪ್ರದೇಶಗಳಿದ್ವು: ಚೊರ್ಗ,+ ಎಷ್ಟಾವೋಲ್‌, ಈರ್‌-ಷೆಮೆಷ್‌, 42  ಶಾಲಬ್ಬೀನ್‌,+ ಅಯ್ಯಾಲೋನ್‌,+ ಇತ್ಲಾ, 43  ಏಲೋನ್‌, ತಿಮ್ನಾ,+ ಎಕ್ರೋನ್‌,+ 44  ಎಲ್ತೆಕೇ, ಗಿಬ್ಬೆತೋನ್‌,+ ಬಾಲತ್‌, 45  ಯೆಹುದ್‌, ಬೆನೇಬೆರಕ್‌, ಗತ್‌-ರಿಮ್ಮೋನ್‌,+ 46  ಮೇಯರ್ಕೋನ್‌, ರಕ್ಕೋನ್‌. ಯೊಪ್ಪದ+ ಮುಂದಿನ ತನಕ ಈ ಗಡಿ ಸಾಗ್ತಿತ್ತು. 47  ಆದ್ರೆ ದಾನ್‌ ಪ್ರದೇಶ ತುಂಬ ಚಿಕ್ಕದಾಗಿದ್ರಿಂದ+ ಅವರು ಲೆಷೆಮಿಗೆ+ ಹೋಗಿ ಅದ್ರ ವಿರುದ್ಧ ಯುದ್ಧಮಾಡಿ ಎಲ್ರನ್ನ ಕತ್ತಿಯಿಂದ ಸಾಯಿಸಿದ್ರು. ಆಮೇಲೆ ಅವರು ಆ ಪ್ರದೇಶನ ವಶ ಮಾಡ್ಕೊಂಡು ಅಲ್ಲೇ ಇರೋಕೆ ಶುರು ಮಾಡಿದ್ರು. ಲೆಷೆಮಿಗೆ ದಾನ್‌ ಅಂತ ಹೆಸ್ರಿಟ್ರು. ಅದು ಅವ್ರ ಪೂರ್ವಜನ ಹೆಸ್ರಾಗಿತ್ತು.+ 48  ಈ ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು ದಾನ್‌ ಕುಲದ ಮನೆತನಗಳಿಗೆ ಸಿಕ್ಕಿದ ಆಸ್ತಿ. 49  ಹೀಗೆ ಅವರು ದೇಶನ ಪಾಲುಮಾಡಿ ತಮ್ಮತಮ್ಮ ಆಸ್ತಿ ಹಂಚ್ಕೊಡ್ರು. ಆಮೇಲೆ ಇಸ್ರಾಯೇಲ್ಯರು ನೂನನ ಮಗ ಯೆಹೋಶುವಗೆ ತಮ್ಮ ಮಧ್ಯ ಆಸ್ತಿ ಕೊಟ್ರು. 50  ಅವನು ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿದ್ದ ತಿಮ್ನತ್‌-ಸೆರಹವನ್ನ+ ಕೇಳಿದ. ಯೆಹೋವನ ಆಜ್ಞೆ ಪ್ರಕಾರ ಆ ಪಟ್ಟಣವನ್ನೇ ಅವನಿಗೆ ಕೊಟ್ರು. ಆಮೇಲೆ ಅವನು ಆ ಪಟ್ಟಣನ ಮತ್ತೆ ಕಟ್ಟಿ ಅಲ್ಲೇ ವಾಸಿಸಿದ. 51  ಇದೆಲ್ಲ ಪುರೋಹಿತ ಎಲ್ಲಾಜಾರ, ನೂನನ ಮಗ ಯೆಹೋಶುವ ಮತ್ತು ಇಸ್ರಾಯೇಲ್‌ ಕುಲಗಳ ಮುಖ್ಯಸ್ಥರು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಹಂಚ್ಕೊಟ್ಟ ಪ್ರದೇಶಗಳು.+ ಅವರು ಈ ಪ್ರದೇಶಗಳನ್ನ ಶೀಲೋನಲ್ಲಿದ್ದ+ ದೇವದರ್ಶನ ಡೇರೆಯ ಬಾಗಿಲಲ್ಲಿ+ ಯೆಹೋವನ ಸನ್ನಿಧಿಯಲ್ಲೇ ಚೀಟಿಹಾಕಿ ಹಂಚ್ಕೊಟ್ರು. ಹೀಗೆ ಅವರು ದೇಶ ಪಾಲು ಮಾಡೋ ಕೆಲಸ ಮುಗಿಸಿದ್ರು.

ಪಾದಟಿಪ್ಪಣಿ

ಅಥವಾ “ನಾಲೆ ತನಕ.”