ಯೆಶಾಯ 62:1-12

  • ಚೀಯೋನಿನ ಹೊಸ ಹೆಸ್ರು (1-12)

62  ಎಲ್ಲಿ ತನಕ ಪ್ರಕಾಶಮಾನವಾದ ಬೆಳಕಿನ ತರ ಚೀಯೋನಿನ ನೀತಿ ಪ್ರಜ್ವಲಿಸಲ್ವೋ+ಅಲ್ಲಿ ತನಕ ನಾನು ಚೀಯೋನಿನ ಸಲುವಾಗಿ ಮೌನವಾಗಿರಲ್ಲ,+ಎಲ್ಲಿ ತನಕ ಉರಿಯೋ ಪಂಜಿನ ತರ ಯೆರೂಸಲೇಮಿನ ರಕ್ಷಣೆ ಕಂಡುಬರಲ್ವೋ+ಅಲ್ಲಿ ತನಕ ನಾನು ಯೆರೂಸಲೇಮಿನ ಸಲುವಾಗಿ ಶಾಂತಿಯಿಂದ ಕೂರಲ್ಲ.  2  “ಸ್ತ್ರೀಯೇ,*+ ಜನಾಂಗಗಳು ನಿನ್ನ ನೀತಿಯನ್ನ ನೋಡ್ತವೆ,ಎಲ್ಲ ರಾಜರು ನಿನ್ನ ಮಹಿಮೆಯನ್ನ ಕಾಣ್ತಾರೆ.+ ಸ್ವತಃ ಯೆಹೋವನೇ ಇಟ್ಟಿರೋಹೊಸ ಹೆಸ್ರಿಂದ ನಿನ್ನನ್ನ ಕರೆಯಲಾಗುತ್ತೆ.+  3  ನೀನು ಯೆಹೋವನ ಕೈಯಲ್ಲಿ ಸುಂದರ ಕಿರೀಟ ಆಗ್ತೀಯ,ನಿನ್ನ ದೇವರ ಕೈಯಲ್ಲಿ ನೀನು ರಾಜಪೇಟ ಆಗ್ತೀಯ.  4  ಇನ್ನು ಮುಂದೆ ನಿನ್ನನ್ನ ತೊರೆದುಬಿಟ್ಟಿರೋ ಸ್ತ್ರೀ ಅಂತ ಕರಿಯಲ್ಲ,+ಇನ್ನು ಮುಂದೆ ನಿನ್ನ ದೇಶವನ್ನ ನಿರ್ಜನ ಪ್ರದೇಶ ಅಂತ ಹೇಳಲಾಗಲ್ಲ.+ ಆದ್ರೆ ನಿನ್ನನ್ನ ‘ಅವಳಲ್ಲೇ ನನ್ನ ಸಂತೋಷ ಇದೆ’ ಅಂತ,+ನಿನ್ನ ದೇಶವನ್ನ ‘ವಿವಾಹಿತೆ’ ಅಂತ ಕರೆಯಲಾಗುತ್ತೆ. ಯಾಕಂದ್ರೆ ಯೆಹೋವ ನಿನ್ನಲ್ಲಿ ಸಂತೋಷವನ್ನ ಕಂಡ್ಕೊಳ್ತಾನೆ. ನಿನ್ನ ದೇಶ ಮದುವೆ ಆಗಿರೋ ಸ್ತ್ರೀ ತರ ಇರುತ್ತೆ.  5  ಒಬ್ಬ ಯುವಕ ಕನ್ಯೆಯನ್ನ ಮದುವೆಯಾಗೋ ತರನಿನ್ನ ನಿವಾಸಿಗಳು ನಿನ್ನನ್ನ ಮದುವೆ ಆಗ್ತಾರೆ. ಮದುಮಗ ಮದುಮಗಳಲ್ಲಿ ಸಂತೋಷಿಸೋ ತರನಿನ್ನ ದೇವರು ನಿನ್ನ ವಿಷ್ಯದಲ್ಲಿ ಸಂತೋಷಪಡ್ತಾನೆ.+  6  ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ನಾನು ಕಾವಲುಗಾರರನ್ನ ನೇಮಿಸಿದ್ದೀನಿ. ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ಒಂದು ಕ್ಷಣನೂ ಅವರು ಸುಮ್ಮನಿರಬಾರದು. ಯೆಹೋವನ ಗುಣಗಾನ ಮಾಡುವವರೇ,ವಿಶ್ರಾಂತಿ ಪಡಿಬೇಡಿ.  7  ಆತನು ಯೆರೂಸಲೇಮನ್ನ ದೃಢವಾಗಿ ಸ್ಥಾಪಿಸೋ ತನಕಹೌದು, ಇಡೀ ಭೂಮಿಯಲ್ಲಿ ಅದನ್ನ ಹಾಡಿಹೊಗಳೋ ತನಕ ಆತನಿಗೆ ಪ್ರಾರ್ಥಿಸ್ತಾ ಇರಿ.”+  8  ಯೆಹೋವ ತನ್ನ ಬಲಗೈಯಿಂದ, ತನ್ನ ಬಲಿಷ್ಠ ಬಾಹುವಿಂದ ಆಣೆ ಮಾಡ್ತಾ ಹೀಗೆ ಹೇಳಿದನು“ಇನ್ನು ಮುಂದೆ ನಾನು ನಿಮ್ಮ ಧಾನ್ಯವನ್ನ ನಿಮ್ಮ ಶತ್ರುಗಳಿಗೆ ಆಹಾರವಾಗಿ ಕೊಡಲ್ಲ,ನೀವು ಕಷ್ಟಪಟ್ಟು ಮಾಡಿದ ಹೊಸ ದ್ರಾಕ್ಷಾಮದ್ಯವನ್ನ ವಿದೇಶಿಯರು ಕುಡಿಯಲ್ಲ.+  9  ಆದ್ರೆ ಆ ಧಾನ್ಯವನ್ನ ಕೂಡಿಸುವವರು ಅದನ್ನ ತಿಂದು ಯೆಹೋವನನ್ನ ಹೊಗಳ್ತಾರೆ,ಆ ದ್ರಾಕ್ಷಾಮದ್ಯವನ್ನ ಶೇಖರಿಸುವವರು ಅದನ್ನ ನನ್ನ ಪವಿತ್ರ ಅಂಗಳಗಳಲ್ಲಿ ಕುಡಿತಾರೆ.”+ 10  ಹಾದು ಬನ್ನಿ, ಬಾಗಿಲುಗಳ ಮೂಲಕ ಹಾದು ಬನ್ನಿ. ಜನ್ರಿಗಾಗಿ ದಾರಿಯಲ್ಲಿರೋ ಅಡ್ಡಿತಡೆಗಳನ್ನ ತೆಗೆದುಹಾಕಿ,+ಎತ್ರ ಮಾಡಿ, ಹೆದ್ದಾರಿಗಳನ್ನ ಎತ್ರ ಮಾಡಿ. ಕಲ್ಲುಗಳನ್ನ ತೆಗಿರಿ.+ ಜನಾಂಗಗಳಿಗಾಗಿ ಧ್ವಜ* ಎತ್ತಿ.+ 11  ಇಗೋ! ಯೆಹೋವ ಭೂಮಿಯ ಮೂಲೆ ಮೂಲೆಯ ತನಕ ಹೀಗೆ ಹೇಳ್ತಿದ್ದಾನೆ,“ಚೀಯೋನ್‌ ಪಟ್ಟಣಕ್ಕೆ ಹೀಗೆ ಹೇಳಿ,‘ನೋಡು! ನಿನ್ನ ರಕ್ಷಣೆ ಬರ್ತಿದೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.’”+ 12  ಯೆಹೋವ ಬಿಡುಗಡೆ ಮಾಡಿರೋ ಪವಿತ್ರ ಜನ್ರಂತ ಅವ್ರನ್ನ ಕರೆಯಲಾಗುತ್ತೆ,+‘ದೇವರು ಬಯಸೋ ಪಟ್ಟಣ, ಆತನು ತೊರೆಯದ ಪಟ್ಟಣ’ ಅಂತ ನಿನ್ನನ್ನ ಕರೆಯಲಾಗುತ್ತೆ.+

ಪಾದಟಿಪ್ಪಣಿ

ಅದು, ಯೆರೂಸಲೇಮ್‌.
ಅಥವಾ “ಸೂಚನಾ ಸ್ತಂಭ.”