ಯೆಶಾಯ 34:1-17

  • ಜನಾಂಗಗಳ ಮೇಲೆ ಯೆಹೋವ ಸೇಡು ತೀರಿಸ್ತಾನೆ (1-4)

  • ಎದೋಮ್‌ ಹಾಳುಬೀಳುತ್ತೆ (5-17)

34  ಜನಾಂಗಗಳೇ, ಹತ್ರ ಬಂದು ಕೇಳಿಸ್ಕೊಳ್ಳಿ,ಜನಾಂಗಗಳ ಜನ್ರೇ, ಗಮನಕೊಡಿ. ಭೂಮಿ ಮತ್ತು ಅದ್ರಲ್ಲಿ ತುಂಬಿಕೊಂಡಿರೋ ಎಲ್ಲನೂದೇಶ ಮತ್ತು ಅದ್ರಲ್ಲಿ ವಾಸ ಮಾಡುವವರೆಲ್ಲ ಕೇಳಿಸ್ಕೊಳ್ಳಲಿ.  2  ಯಾಕಂದ್ರೆ ಎಲ್ಲ ಜನಾಂಗಗಳ ವಿರುದ್ಧ ಯೆಹೋವನ ಕೋಪ ಹೊತ್ತಿ ಉರಿಯುತ್ತೆ,+ಅವ್ರ ಸೈನ್ಯಗಳ ವಿರುದ್ಧ ಆತನ ಕ್ರೋಧ ಧಗಧಗನೆ ಉರಿಯುತ್ತೆ.+ ಆತನು ಅವ್ರನ್ನ ಪೂರ್ತಿ ನಾಶಮಾಡ್ತಾನೆ,ಆತನು ಅವ್ರನ್ನ ಮರಣಶಿಕ್ಷೆಗೆ ಒಪ್ಪಿಸ್ತಾನೆ.+  3  ಅವ್ರ ಶವಗಳನ್ನ ಬಿಸಾಡಲಾಗುತ್ತೆ,ಅವ್ರ ಮೃತದೇಹಗಳಿಂದ ದುರ್ನಾತ ಬರುತ್ತೆ,+ಅವ್ರ ರಕ್ತದಿಂದ ಬೆಟ್ಟಗಳು ಕರಗಿಹೋಗ್ತವೆ.*+  4  ಸುರುಳಿಯನ್ನ ಸುತ್ತೋ ತರ ಆಕಾಶವನ್ನ ಸುತ್ತಲಾಗುತ್ತೆ. ಆಕಾಶದ ಸೈನ್ಯವೆಲ್ಲ ಕೊಳೆತು ಹೋಗುತ್ತೆ,ದ್ರಾಕ್ಷಿಬಳ್ಳಿಯಿಂದ ಬಾಡಿಹೋಗಿರೋ ಎಲೆ ಉದುರೋ ತರ,ಅಂಜೂರದ ಮರದಿಂದ ಒಣಗಿರೋ ಅಂಜೂರ ಕೆಳಗೆ ಬೀಳೋ ತರ,ಅವ್ರ ಸೈನ್ಯವೆಲ್ಲ ಬಾಡಿ ಬಿದ್ದುಹೋಗುತ್ತೆ.  5  “ಯಾಕಂದ್ರೆ ಆಕಾಶದಲ್ಲಿ ನನ್ನ ಕತ್ತಿ ರಕ್ತದಿಂದ ತೋಯ್ದುಹೋಗುತ್ತೆ.+ ಆ ಕತ್ತಿ ನ್ಯಾಯವನ್ನ ತೀರಿಸೋಕೆ ಎದೋಮಿನ ಮೇಲೆ,+ನಾನು ಯಾರನ್ನ ಸಂಪೂರ್ಣ ನಾಶಮಾಡಬೇಕಂತ ಇದ್ದೀನೋ ಆ ಜನ್ರ ಮೇಲೆ ಇಳಿದುಬರುತ್ತೆ.  6  ಯೆಹೋವನ ಹತ್ರ ಒಂದು ಕತ್ತಿ ಇದೆ, ಅದು ರಕ್ತಮಯವಾಗುತ್ತೆ. ಅದು ಕೊಬ್ಬಿಂದ ಮುಚ್ಚಿಹೋಗುತ್ತೆ,+ಟಗರುಗಳ ಮತ್ತು ಆಡುಗಳ ರಕ್ತದಿಂದ ತೊಯ್ದುಹೋಗುತ್ತೆ,ಟಗರುಗಳ ಮೂತ್ರಪಿಂಡದ ಮೇಲಿರೋ ಕೊಬ್ಬಿಂದ ತುಂಬಿಹೋಗುತ್ತೆ. ಬೊಚ್ರದಲ್ಲಿ ಯೆಹೋವ ಒಂದು ಬಲಿಯನ್ನ ಕೊಡೋದ್ರಿಂದಎದೋಮಲ್ಲಿ ತುಂಬ ದೊಡ್ಡ ಸಂಹಾರ ಆಗುತ್ತೆ.+  7  ಅವುಗಳ ಜೊತೆ ಕಾಡು ಹೋರಿಗಳು ನಾಶವಾಗ್ತವೆ,ಬಲಿಷ್ಠ ಹೋರಿಗಳ ಜೊತೆ ಎಳೇ ಹೋರಿಗಳೂ ಬಲಿಯಾಗ್ತವೆ. ಇಡೀ ದೇಶ ರಕ್ತದಿಂದ ತೊಯ್ದುಹೋಗುತ್ತೆ,ಅದ್ರ ಧೂಳು ಕೊಬ್ಬಿಂದ ನೆನೆಯುತ್ತೆ.”  8  ಯಾಕಂದ್ರೆ ಯೆಹೋವ ತನ್ನ ಶತ್ರುಗಳ ಮೇಲೆ ಸೇಡು ತೀರಿಸೋಕೆ ಒಂದು ದಿನ ಗೊತ್ತುಮಾಡಿದ್ದಾನೆ,+ಕಾನೂನುಬದ್ಧವಾದ ವ್ಯಾಜ್ಯದಲ್ಲಿ ಚೀಯೋನಿನ ಪರವಾಗಿ ನಿಂತು ಪ್ರತೀಕಾರವನ್ನ ತೀರಿಸೋಕೆ ಒಂದು ವರ್ಷವನ್ನ ನೇಮಿಸಿದ್ದಾನೆ.+  9  ಆ ಪಟ್ಟಣದ* ತೊರೆಗಳು ಕಪ್ಪು ರಾಳವಾಗಿ,ಅದ್ರ ಧೂಳು ಗಂಧಕವಾಗಿ ಬದಲಾಗುತ್ತೆ. ಅದ್ರ ನೆಲ ಉರಿಯುತ್ತಿರೋ ಕಪ್ಪು ರಾಳದಂತಾಗುತ್ತೆ. 10  ಅದು ಹಗಲೂರಾತ್ರಿ ಉರಿತಾ ಇರುತ್ತೆ,ಸದಾಕಾಲಕ್ಕೂ ಅದ್ರ ಹೊಗೆ ಮೇಲೇರುತ್ತಾ ಇರುತ್ತೆ. ತಲತಲಾಂತರಕ್ಕೂ ಅದು ಹಾಳುಬಿದ್ದಿರುತ್ತೆ. ಮುಂದೆ ಯಾವತ್ತೂ ಯಾರೂ ಅದನ್ನ ಹಾದುಹೋಗಲ್ಲ.+ 11  ಬಕಪಕ್ಷಿ* ಮತ್ತು ಮುಳ್ಳುಹಂದಿ ಅದನ್ನ ಆಕ್ರಮಿಸಿಕೊಳ್ಳುತ್ತೆ,ಉದ್ದಕಿವಿಯ ಗೂಬೆಗಳು, ಕಾಗೆಗಳು ಅಲ್ಲಿ ವಾಸಿಸ್ತವೆ. ಈ ಪಟ್ಟಣ ಖಾಲಿ ಹೊಡಿಯುತ್ತೆ ಮತ್ತು ಯಾವುದೇ ಪ್ರಯೋಜನಕ್ಕೆ ಬಾರದೆ ಹೋಗುತ್ತೆ ಅಂತ ತೋರಿಸೋಕೆಅಳೆಯೋ ದಾರದಿಂದ ಮತ್ತು ತೂಗುಗುಂಡಿಂದ ಅದನ್ನ ದೇವರು ಅಳಿತಾನೆ. 12  ಅದ್ರ ಪ್ರಧಾನರಲ್ಲಿ ಯಾರನ್ನೂ ರಾಜರನ್ನಾಗಿ ಮಾಡಲ್ಲ,ಅದ್ರ ಅಧಿಕಾರಿಗಳೆಲ್ಲ ಅಂತ್ಯ ಕಾಣ್ತಾರೆ. 13  ಅದ್ರ ಭದ್ರ ಕೋಟೆಗಳಲ್ಲಿ ಮುಳ್ಳುಗಳು ಬೆಳೆಯುತ್ತೆ,ಚುರುಚುರಿಕೆ ಗಿಡಗಳು, ಮುಳ್ಳುಗಳಿರೋ ಕಳೆಗಳು ಬೆಳಿತವೆ. ಅದು ಗುಳ್ಳೆನರಿಗಳ ತಾಣವಾಗುತ್ತೆ,+ಅದು ಉಷ್ಟ್ರಪಕ್ಷಿಗಳಿಗೆ ನಿವಾಸಸ್ಥಾನವಾಗುತ್ತೆ. 14  ಮರುಭೂಮಿಯ ಜೀವಿಗಳು ಊಳಿಡೋ ಪ್ರಾಣಿಗಳ ಜೊತೆ ಅಲ್ಲಿ ಒಟ್ಟುಗೂಡುತ್ತೆ,ಕಾಡುಮೇಕೆ* ತನ್ನ ಸಂಗಾತಿಗಾಗಿ ಕೂಗುತ್ತೆ. ಹೌದು, ರಾತ್ರಿಯ ಪಕ್ಷಿ* ಅಲ್ಲೇ ನೆಲೆಸಿ ವಿಶ್ರಾಂತಿಗಾಗಿ ಜಾಗ ಹುಡುಕುತ್ತೆ. 15  ಹಾರೋ ಹಾವು ಅಲ್ಲಿ ಗೂಡು ಮಾಡ್ಕೊಂಡು, ಮೊಟ್ಟೆ ಇಡುತ್ತೆ,ಅವುಗಳಿಗೆ ಕಾವುಕೊಟ್ಟು ಮರಿಮಾಡಿ ತನ್ನ ನೆರಳಲ್ಲಿ ಅವುಗಳನ್ನ ಒಟ್ಟುಸೇರಿಸುತ್ತೆ. ಹೌದು, ಅಲ್ಲಿ ಪ್ರತಿಯೊಂದು ಹದ್ದು ತನ್ನತನ್ನ ಸಂಗಾತಿ ಜೊತೆ ಒಟ್ಟುಗೂಡುತ್ತೆ. 16  ಯೆಹೋವನ ಪುಸ್ತಕದಲ್ಲಿ ಹುಡುಕಿ ಮತ್ತು ಅದನ್ನ ಜೋರಾಗಿ ಓದಿ. ಆ ಪ್ರಾಣಿಗಳಲ್ಲಿ ಒಂದೂ ಕಾಣದಿರಲ್ಲ,ಅವುಗಳಲ್ಲಿ ಒಂದಕ್ಕೂ ಜೋಡಿ ಇಲ್ಲದೆ ಇರಲ್ಲ,ಯಾಕಂದ್ರೆ ಈ ಆಜ್ಞೆ ಯೆಹೋವನ ಬಾಯಿಂದ ಬಂದದ್ದಾಗಿದೆ,ಆತನ ಪವಿತ್ರಶಕ್ತಿ ಅವುಗಳನ್ನ ಒಟ್ಟುಸೇರಿಸಿದೆ. 17  ಅವುಗಳಿಗಾಗಿ ಚೀಟುಹಾಕಿದವನು ದೇವರೇ,ಅವುಗಳ ನೇಮಿತ ಸ್ಥಳವನ್ನ* ಅಳೆದದ್ದು ಆತನ ಕೈಗಳೇ. ಆ ಸ್ಥಳ ಅವುಗಳ ಶಾಶ್ವತ ಸೊತ್ತಾಗುತ್ತೆ,ತಲತಲಾಂತರದ ತನಕ ಅವು ಅಲ್ಲೇ ವಾಸಿಸ್ತವೆ.

ಪಾದಟಿಪ್ಪಣಿ

ಅಥವಾ “ಪರ್ವತಗಳ ಮೇಲೆ ರಕ್ತ ಹರಿತದೆ.”
ಇಲ್ಲಿ ಎದೋಮಿನ ರಾಜಧಾನಿ ಬೊಚ್ರದ ಬಗ್ಗೆ ಹೇಳ್ತಿರಬೇಕು.
ಅಂದ್ರೆ, ಪೆಲಿಕನ್‌.
ಬಹುಶಃ, “ಆಡಿನ ತರ ಇರೋ ಕೆಟ್ಟ ದೇವದೂತ.”
ಅದು, ಗೂಬೆ ತರ ಇರೋ ಪಕ್ಷಿ.
ಅಕ್ಷ. “ಅಳೆಯೋ ದಾರದಿಂದ ಆತನು ಅವುಗಳಿಗೆ ಆ ಸ್ಥಳವನ್ನ ವಿಭಜಿಸಿ ಕೊಟ್ಟಿದ್ದಾನೆ.”