ಯೆಶಾಯ 24:1-23
24 ನೋಡು! ಯೆಹೋವ ದೇಶವನ್ನ* ಖಾಲಿ ಮಾಡಿಸಿ ಅದನ್ನ ನಿರ್ಜನ ಪ್ರದೇಶವನ್ನಾಗಿ ಮಾಡ್ತಿದ್ದಾನೆ.+
ಆತನು ಅದನ್ನ ತಲೆಕೆಳಗಾಗೋ ತರ ಮಾಡಿ+ ಅದ್ರ ನಿವಾಸಿಗಳನ್ನ ಚೆದರಿಸಿಬಿಡ್ತಾನೆ.+
2 ಎಲ್ರ ಪರಿಸ್ಥಿತಿ ಒಂದೇ ಆಗಿರುತ್ತೆ.
ಜನ್ರಿಗೂ ಪುರೋಹಿತನಿಗೂ,ಸೇವಕನಿಗೂ ಯಜಮಾನನಿಗೂ,ದಾಸಿಗೂ ಯಜಮಾನಿಗೂ,ಕೊಂಡ್ಕೊಳ್ಳುವವನಿಗೂ ಮಾರುವವನಿಗೂ,ಸಾಲ ಕೊಡುವವನಿಗೂ ಸಾಲ ತಗೊಳ್ಳುವವನಿಗೂ,ಬಡ್ಡಿ ಕೊಡುವವನಿಗೂ ಬಡ್ಡಿ ತಗೊಳ್ಳುವವನಿಗೂಎಲ್ರಿಗೂ ಒಂದೇ ಗತಿಯಾಗುತ್ತೆ.+
3 ದೇಶವನ್ನ ಪೂರ್ತಿಯಾಗಿ ಖಾಲಿ ಮಾಡಲಾಗುತ್ತೆ,ಅದನ್ನ ಸಂಪೂರ್ಣವಾಗಿ ಕೊಳ್ಳೆಹೊಡೆಯಲಾಗುತ್ತೆ,+ಯಾಕಂದ್ರೆ ಇದು ಯೆಹೋವನ ಮಾತು.
4 ದೇಶ ಶೋಕಿಸ್ತಿದೆ,*+ ಅದು ಹಾಳಾಗಿದೆ.
ಫಲವತ್ತಾದ ಭೂಮಿ ಬರಡಾಗಿದೆ, ಒಣಗಿಹೋಗಿದೆ,ದೇಶದ ಪ್ರಮುಖರು ಕುಗ್ಗಿಹೋಗಿದ್ದಾರೆ.
5 ದೇಶವನ್ನ ಅದ್ರ ನಿವಾಸಿಗಳು ಕಲುಷಿತ ಮಾಡಿದ್ದಾರೆ,+ಅವರು ನಿಯಮಗಳನ್ನ ಕಡೆಗಣಿಸಿದ್ದಾರೆ,+ಕಟ್ಟಳೆಗಳನ್ನ ಬದಲಾಯಿಸಿದ್ದಾರೆ,+ಶಾಶ್ವತಕ್ಕೂ ಇರಬೇಕಾದ* ಒಪ್ಪಂದವನ್ನ ಮುರಿದಿದ್ದಾರೆ.+
6 ಹಾಗಾಗಿ ಶಾಪ ದೇಶವನ್ನ ನುಂಗಿಹಾಕಿದೆ,+ಅದ್ರ ನಿವಾಸಿಗಳನ್ನ ಅಪರಾಧಿಗಳಾಗಿ ಎಣಿಸಲಾಗಿದೆ,ಅದಕ್ಕೇ ದೇಶದ ನಿವಾಸಿಗಳ ಸಂಖ್ಯೆ ಕಮ್ಮಿ ಆಗಿದೆ,ಬರೀ ಕೆಲವೇ ಜನ ಉಳಿದಿದ್ದಾರೆ.+
7 ಹೊಸ ದ್ರಾಕ್ಷಾಮದ್ಯ ಗೋಳಾಡ್ತಿದೆ,* ದ್ರಾಕ್ಷಿಬಳ್ಳಿ ಒಣಗಿಹೋಗ್ತಿದೆ,+ಹೃದಯದಲ್ಲಿ ಉಲ್ಲಾಸಪಡ್ತಿದ್ದವರು ನಿಟ್ಟುಸಿರು ಬಿಡ್ತಿದ್ದಾರೆ.+
8 ದಮ್ಮಡಿಗಳ ಸಂತೋಷದ ಸದ್ದು ನಿಂತುಹೋಗಿದೆ,ಮೋಜುಗಾರರ ಗದ್ದಲ ಕೊನೆಯಾಗಿದೆ,ತಂತಿವಾದ್ಯದ ಆನಂದದ ಧ್ವನಿ ಅಡಗಿಹೋಗಿದೆ.+
9 ಅವರು ಗೀತೆಗಳಿಲ್ಲದೆ ದ್ರಾಕ್ಷಾಮದ್ಯ ಕುಡಿತಿದ್ದಾರೆ,ಮದ್ಯ ಕುಡಿಯುವವರಿಗೆ ಅದು ಕಹಿ ಅನಿಸ್ತಿದೆ.
10 ನಿರ್ಜನವಾಗಿರೋ ಪಟ್ಟಣವನ್ನ ಕೆಡವಲಾಗಿದೆ,+ಯಾರೂ ಒಳಗೆ ಬರದ ಹಾಗೆ ಪ್ರತಿಯೊಂದು ಮನೆ ಬಾಗಿಲನ್ನ ಮುಚ್ಚಲಾಗಿದೆ.
11 ಅವರು ದ್ರಾಕ್ಷಾಮದ್ಯಕ್ಕಾಗಿ ಬೀದಿ ಬೀದಿಗಳಲ್ಲಿ ಕೂಗಾಡ್ತಿದ್ದಾರೆ.
ಸಂತೋಷವೆಲ್ಲ ಕಣ್ಮರೆಯಾಗಿ ಹೋಗಿದೆ.
ದೇಶದ ಆನಂದವೆಲ್ಲ ಮಾಯವಾಗಿ ಹೋಗಿದೆ.+
12 ಪಟ್ಟಣ ಹಾಳುದಿಬ್ಬ ಆಗಿದೆ,ಪಟ್ಟಣದ ಬಾಗಿಲನ್ನ ಒಡೆದು ಕಲ್ಲಿನ ರಾಶಿಯಾಗಿ ಮಾಡಲಾಗಿದೆ.+
13 ಜನಾಂಗಗಳ ಮಧ್ಯೆ ನನ್ನ ಜನ್ರ ಪರಿಸ್ಥಿತಿ ಹೇಗಿರುತ್ತಂದ್ರೆ,ಆಲಿವ್ ಮರದ ಹಣ್ಣುಗಳನ್ನ ಉದುರಿಸಿದ ಮೇಲೆ ಅದ್ರಲ್ಲಿ ಉಳಿಯೋ ಹಣ್ಣುಗಳ ತರ+ದ್ರಾಕ್ಷಿಯನ್ನ ಕಿತ್ತ ಮೇಲೆ ಆರಿಸೋಕೆ ಉಳಿಯೋ ದ್ರಾಕ್ಷಿ ತರ ಇರುತ್ತೆ.+
14 ಅವರು ತಮ್ಮ ಸ್ವರ ಎತ್ತುತ್ತಾರೆ,ಹರ್ಷದಿಂದ ಕೂಗ್ತಾರೆ.
ಪಶ್ಚಿಮದಿಂದ* ಅವರು ಯೆಹೋವನ ಘನತೆಯನ್ನ ಘೋಷಿಸ್ತಾರೆ.+
15 ಅದಕ್ಕೇ ಅವರು ಪೂರ್ವದಿಂದ* ಯೆಹೋವನನ್ನ ಮಹಿಮೆಪಡಿಸ್ತಾರೆ,+ಸಮುದ್ರದ ದ್ವೀಪಗಳಲ್ಲಿ ಅವರು ಇಸ್ರಾಯೇಲ್ ದೇವರಾದ ಯೆಹೋವನ ಹೆಸ್ರಿಗೆ ಗೌರವ ಕೊಡ್ತಾರೆ.+
16 ಭೂಮಿಯ ಮೂಲೆಮೂಲೆಯಿಂದ ನಮಗೆ ಈ ಗೀತೆಗಳು ಕೇಳಿಸ್ತಿವೆ“ನೀತಿವಂತ ದೇವ್ರಿಗೆ ಮಹಿಮೆ* ಆಗಲಿ!”+
ಆದ್ರೆ ನಾನು ಹೀಗೆ ಹೇಳಿದೆ “ನಾನು ಕ್ಷಯಿಸಿ, ಕ್ಷಯಿಸಿ ಹೋಗ್ತಿದ್ದೀನಿ!
ಅಯ್ಯೋ, ನನ್ನ ಗತಿ ಏನು ಹೇಳಲಿ! ಮೋಸಗಾರರು ಮೋಸ ಮಾಡಿದ್ರು,ಮೋಸಗಾರರು ಮೋಸದಿಂದ ಮೋಸ ಮಾಡಿದ್ರು.”+
17 ದೇಶದ ನಿವಾಸಿಯೇ, ನಿನಗಾಗಿ ವಿಪರೀತ ಭಯ, ಗುಂಡಿಗಳು, ಪಾಶಗಳು ಕಾದಿವೆ.+
18 ಭಯಹುಟ್ಟಿಸೋ ಶಬ್ದ ಕೇಳಿ ಓಡಿಹೋಗ್ತಿರೋ ವ್ಯಕ್ತಿ ಗುಂಡಿಯಲ್ಲಿ ಬೀಳ್ತಾನೆ,ಗುಂಡಿಯಿಂದ ಎದ್ದು ಹೊರಗೆ ಬರೋ ವ್ಯಕ್ತಿ ಪಾಶದಲ್ಲಿ ಸಿಕ್ಕಿಕೊಳ್ತಾನೆ.+
ಆಕಾಶದ ಪ್ರವಾಹ ಬಾಗಿಲುಗಳು ತೆರಿತವೆ,ದೇಶದ ಅಡಿಪಾಯಗಳು ಅಲ್ಲಾಡ್ತವೆ.
19 ಭೂಮಿ ಎರಡು ಭಾಗವಾಗಿದೆ,ಭೂಮಿ ನಡುಗಿದೆ,ಅದು ವಿಪರೀತವಾಗಿ ಕಂಪಿಸುತ್ತೆ.+
20 ಕುಡುಕನ ಹಾಗೆ ಭೂಮಿ ತೂರಾಡುತ್ತೆ,ಗಾಳಿಯಲ್ಲಿ ಹಿಂದಕ್ಕೂ ಮುಂದಕ್ಕೂ ಅಲ್ಲಾಡೋ ಗುಡಿಸಲಿನ ತರ ಅಲ್ಲಾಡುತ್ತೆ.
ಅದ್ರ ಅಪರಾಧ ಅದ್ರ ಮೇಲೆ ಹೆಚ್ಚು ಭಾರವಾಗಿರುತ್ತೆ,+ಅದು ಮತ್ತೆ ಎದ್ದೇಳೋಕೆ ಆಗದ ಹಾಗೆ ಬಿದ್ದುಹೋಗುತ್ತೆ.
21 ಆ ದಿನ ಯೆಹೋವ ತನ್ನ ಗಮನವನ್ನ ಆಕಾಶದಲ್ಲಿರೋ ಸೈನ್ಯದ ಮೇಲೆ,ಭೂಮಿಯಲ್ಲಿರೋ ರಾಜರ ಮೇಲೆ ತಿರುಗಿಸ್ತಾನೆ.
22 ಕೈದಿಗಳನ್ನ ಒಂದು ಗುಂಡಿಯಲ್ಲಿ ಒಟ್ಟುಸೇರಿಸೋ ಹಾಗೆ ಅವ್ರನ್ನ ಒಟ್ಟುಸೇರಿಸಿಜೈಲಿಗೆ ಹಾಕಲಾಗುತ್ತೆ,ತುಂಬ ದಿನ ಆದ ಮೇಲೆ ಅವ್ರ ಕಡೆ ಗಮನ ಕೊಡಲಾಗುತ್ತೆ.
23 ಹುಣ್ಣಿಮೆ ಚಂದ್ರ ನಾಚಿಕೆಪಡ್ತಾನೆ,ಹೊಳೆಯೋ ಸೂರ್ಯ ಮುಜುಗರಪಡ್ತಾನೆ,+ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವ ಚೀಯೋನ್ ಬೆಟ್ಟದಲ್ಲಿ+ ಮತ್ತು ಯೆರೂಸಲೇಮಲ್ಲಿ ರಾಜನಾಗಿದ್ದಾನೆ.+
ಆತನು ತನ್ನ ಜನ್ರ ಹಿರಿಯರ ಮುಂದೆ ಮಹಿಮೆಯಿಂದ ಆಳ್ವಿಕೆ ಮಾಡ್ತಾನೆ.+
ಪಾದಟಿಪ್ಪಣಿ
^ ಅಥವಾ “ಭೂಮಿಯನ್ನ.”
^ ಬಹುಶಃ, “ಬತ್ತಿಹೋಗ್ತಿದೆ.”
^ ಅಥವಾ “ಪುರಾತನ ಕಾಲದ.”
^ ಬಹುಶಃ, “ಬತ್ತಿಹೋಗ್ತಿದೆ.”
^ ಅಕ್ಷ. “ಸಮುದ್ರದಿಂದ.”
^ ಅಕ್ಷ. “ಬೆಳಕಿನ ಪ್ರದೇಶದಿಂದ.”
^ ಅಥವಾ “ಅಲಂಕಾರ.”