ಯೆಶಾಯ 13:1-22

  • ಬಾಬೆಲಿನ ವಿರುದ್ಧ ಸಂದೇಶ (1-22)

    • ಯೆಹೋವನ ದಿನ ಹತ್ರ ಇದೆ! (6)

    • ಮೇದ್ಯರನ್ನ ಬಾಬೆಲಿನ ವಿರುದ್ಧ ಎಬ್ಬಿಸಲಾಗುತ್ತೆ (17)

    • ಬಾಬೆಲಲ್ಲಿ ಇನ್ನು ಯಾವತ್ತೂ ಜನ ವಾಸಿಸಲ್ಲ (20)

13  ಬಾಬೆಲಿನ ವಿರುದ್ಧ ಬಂದ ಘೋಷಣೆಯನ್ನ+ ಆಮೋಚನ ಮಗ ಯೆಶಾಯ+ ದರ್ಶನದಲ್ಲಿ ಕಂಡ. ಅದು ಹೀಗಿತ್ತು  2  “ಬೋಳು ಬೆಟ್ಟದ ಮೇಲೆ ಧ್ವಜ* ನಿಲ್ಲಿಸಿ.+ ಕೈಬೀಸಿ ಅವ್ರನ್ನ ಕರಿರಿ,ಪ್ರಮುಖರ ಪ್ರವೇಶ ಬಾಗಿಲಿಂದ ಅವ್ರು ಒಳಗೆ ಬರಲಿ.  3  ನಾನು ಯಾರನ್ನ ನೇಮಿಸಿದ್ದೆನೋ ಅವ್ರಿಗೆ ಆಜ್ಞೆ ಕೊಟ್ಟಿದ್ದೀನಿ.+ ನನ್ನ ಕೋಪವನ್ನ ವ್ಯಕ್ತಪಡಿಸೋಕೆ ನನ್ನ ವೀರ ಸೈನಿಕರನ್ನ ಒಟ್ಟುಗೂಡಿಸಿದ್ದೀನಿ,ಅವರು ಹೆಮ್ಮೆಯಿಂದ ಉಲ್ಲಾಸಿಸ್ತಾರೆ.  4  ಕೇಳಿ! ಬೆಟ್ಟಗಳಿಂದ ಜನಜಂಗುಳಿಯ ಶಬ್ದ ಕೇಳಿಸ್ತಿದೆ,ಲೆಕ್ಕ ಇಲ್ಲದಷ್ಟು ಜನ ಕೂಡಿಬಂದ ಹಾಗಿದೆ! ರಾಜ್ಯಗಳ ಒಟ್ಟುಗೂಡುವಿಕೆಯ ಕೋಲಾಹಲ ಕೇಳಿಸ್ತಿದೆ,ಹೌದು, ಜನಾಂಗಗಳು ಸೇರಿ ಬಂದಿರೋದ್ರಿಂದ ಗದ್ದಲ ಕೇಳಿಸ್ತಿದೆ!+ ಸೈನ್ಯಗಳ ದೇವರಾದ ಯೆಹೋವ ಯುದ್ಧಕ್ಕಾಗಿ ಸೈನ್ಯವನ್ನ ಒಟ್ಟುಗೂಡಿಸ್ತಿದ್ದಾನೆ.+  5  ಯೆಹೋವನ ಜೊತೆ ಆತನ ಕ್ರೋಧದ ಆಯುಧಗಳೂ ಬರ್ತಿವೆ. ಇಡೀ ಭೂಮಿಯನ್ನ ನಾಶಮಾಡೋಕೆ+ತುಂಬ ದೂರದ ದೇಶದಿಂದ,+ ಆಕಾಶದ ಅಂಚಿನಿಂದ ಬರ್ತಿವೆ.  6  ಗೋಳಾಡಿ! ಯಾಕಂದ್ರೆ ಯೆಹೋವನ ದಿನ ಹತ್ರ ಇದೆ! ಆ ದಿನ ಸರ್ವಶಕ್ತ ನಿಮ್ಮ ದೇಶದಲ್ಲಿರೋ ಎಲ್ಲವನ್ನೂ ನಾಶಮಾಡ್ತಾನೆ.+  7  ಹಾಗಾಗಿ ಎಲ್ರ ಕೈ ಜೋಲುಬೀಳುತ್ತೆ,ಪ್ರತಿಯೊಬ್ಬನ ಹೃದಯ ಭಯದಿಂದ ನಡುಗುತ್ತೆ.*+  8  ಜನ ಕಂಗಾಲಾಗಿ ಹೋಗಿದ್ದಾರೆ.+ ಹೆರಿಗೆ ನೋವು ಬಂದಿರೋ ಸ್ತ್ರೀ ತರ,ಸ್ನಾಯುಸೆಳೆತ ಮತ್ತು ನೋವಿಂದ ಅವರು ಒದ್ದಾಡ್ತಿದ್ದಾರೆ. ಗಾಬರಿಯಿಂದ ಮುಖಮುಖ ನೋಡ್ಕೊಳ್ತಿದ್ದಾರೆ,ಅವ್ರ ಮುಖದಲ್ಲಿ ಭಯ ಚಿಂತೆ ಎದ್ದುಕಾಣ್ತಿದೆ.  9  ನೋಡಿ! ಯೆಹೋವನ ದಿನ ಬರ್ತಿದೆ. ಆ ದಿನ ಕ್ರೋಧದ ಜೊತೆ ಮತ್ತು ಉರಿಯೋ ಕೋಪದ ಜೊತೆ ಬರುತ್ತೆ. ಆ ದಿನ ಯಾರಿಗೂ ದಯೆದಾಕ್ಷಿಣ್ಯ ತೋರಿಸಲ್ಲ. ದೇಶಕ್ಕೆ ಎಂಥ ಪರಿಸ್ಥಿತಿ ತರುತ್ತಂದ್ರೆ ಅದನ್ನ ನೋಡುವವರು ಹೆದರಿಹೋಗ್ತಾರೆ.+ ಅದು ದೇಶದಿಂದ ಪಾಪಿಗಳನ್ನ ನಿರ್ನಾಮ ಮಾಡುತ್ತೆ. 10  ಆಕಾಶದ ನಕ್ಷತ್ರಗಳು, ತಾರಾಪುಂಜಗಳು*+ತಮ್ಮ ಬೆಳಕನ್ನ ಕೊಡಲ್ಲ,ಸೂರ್ಯ ಉದಯಿಸುವಾಗ ತನ್ನ ಪ್ರಕಾಶ ಬೀರಲ್ಲ,ಚಂದ್ರ ತನ್ನ ಬೆಳದಿಂಗಳನ್ನ ಸೂಸಲ್ಲ. 11  ಭೂನಿವಾಸಿಗಳು ಮಾಡಿದ ಕೆಟ್ಟ ಕೆಲಸಗಳಿಗೆ ನಾನು ಅವ್ರಿಂದ ಲೆಕ್ಕ ಕೇಳ್ತೀನಿ,+ಕೆಟ್ಟವರು ಮಾಡಿದ ತಪ್ಪುಗಳಿಗಾಗಿ ಅವ್ರಿಂದ ಲೆಕ್ಕಕೇಳ್ತೀನಿ. ದುರಹಂಕಾರಿಗಳ ಸೊಕ್ಕನ್ನ ಮುರಿತೀನಿ,ಕ್ರೂರ ಅಧಿಕಾರಿಗಳ ಅಹಂಕಾರ ಅಡಗಿಸ್ತೀನಿ.+ 12  ಮನುಷ್ಯರನ್ನ ಪರಿಷ್ಕರಿಸಿದ ಚಿನ್ನಕ್ಕಿಂತ, ಓಫೀರಿನ ಚಿನ್ನಕ್ಕಿಂತ+ವಿರಳವಾಗಿ ಕಾಣೋ ತರ ಮಾಡ್ತೀನಿ.+ 13  ಹಾಗಾಗಿ ನಾನು, ಸೈನ್ಯಗಳ ದೇವರಾದ ಯೆಹೋವ,ನನ್ನ ಕ್ರೋಧದ ದಿನದಂದು ಉರಿತಿರೋ ನನ್ನ ಕೋಪದಿಂದಆಕಾಶವನ್ನ ನಡುಗಿಸ್ತೀನಿ,ಭೂಮಿಯನ್ನ ಅದರ ಸ್ಥಳದಿಂದ ಕದಲಿಸಿಬಿಡ್ತೀನಿ.+ 14  ಬೇಟೆಗೆ ಗುರಿಯಾಗಿರೋ ಜಿಂಕೆ ಓಡೋ ತರ, ಕುರುಬನಿಲ್ಲದ ಕುರಿಗಳ ತರಪ್ರತಿಯೊಬ್ರೂ ತಮ್ಮ ಸ್ವಂತ ಜನ್ರ ಹತ್ರ ವಾಪಸ್‌ ಹೋಗ್ತಾರೆ,ತಮ್ಮ ಸ್ವಂತ ದೇಶಕ್ಕೆ ಓಡಿಹೋಗ್ತಾರೆ.+ 15  ಕೈಗೆ ಯಾರೇ ಸಿಕ್ಕಿದ್ರೂ ಅವ್ರನ್ನ ಇರಿಯಲಾಗುತ್ತೆ,ಸಿಕ್ಕಿಬೀಳುವವರನ್ನೆಲ್ಲ ಕತ್ತಿಯಿಂದ ಸಂಹರಿಸಲಾಗುತ್ತೆ.+ 16  ಅವ್ರ ಕಣ್ಮುಂದೆನೇ ಅವ್ರ ಮಕ್ಕಳನ್ನ ಕ್ರೂರವಾಗಿ ಕೊಲ್ಲಲಾಗುತ್ತೆ.+ ಅವ್ರ ಮನೆಗಳನ್ನ ಕೊಳ್ಳೆ ಹೊಡೆಯಲಾಗುತ್ತೆ,ಅವ್ರ ಹೆಂಡತಿಯರನ್ನ ಅತ್ಯಾಚಾರ ಮಾಡಲಾಗುತ್ತೆ. 17  ಬೆಳ್ಳಿಗೆ ಬೆಲೆಕೊಡದ,ಚಿನ್ನದ ಮೇಲೆ ಆಸೆಯಿಲ್ಲದ,ಮೇದ್ಯರನ್ನ ಅವ್ರ ವಿರುದ್ಧ ಎಬ್ಬಿಸ್ತೀನಿ.+ 18  ಅವ್ರ ಬಿಲ್ಲುಗಳು ಯುವಕರನ್ನ ನಾಶ ಮಾಡ್ತವೆ,+ಅವ್ರಿಗೆ ಚಿಕ್ಕ ಮಕ್ಕಳ ಮೇಲೆ ದಯೆಯಾಗಲಿ,ಗರ್ಭಫಲದ ಮೇಲೆ ಕನಿಕರವಾಗಲಿ ಹುಟ್ಟಲ್ಲ. 19  ಕಸ್ದೀಯರ ಶೋಭೆಗೆ* ಮತ್ತು ಹೆಮ್ಮೆಗೆ ಕಾರಣವಾಗಿರೋ,+ಅತ್ಯಂತ ಮಹಿಮಾನ್ವಿತ ಸಾಮ್ರಾಜ್ಯವಾಗಿರೋ ಬಾಬೆಲ್‌ ನಗರ+ದೇವರು ತಳ್ಳಿಬಿಟ್ಟ ಸೊದೋಮ್‌, ಗೊಮೋರದ ತರ ಆಗುತ್ತೆ.+ 20  ಆ ನಗರದಲ್ಲಿ ಇನ್ನು ಯಾವತ್ತೂ ಜನ ವಾಸಿಸಲ್ಲ,ತಲತಲಾಂತರದ ತನಕ ಯಾರೂ ಅದ್ರಲ್ಲಿ ನೆಲೆಸಲ್ಲ.+ ಯಾವ ಅರಬಿಯನೂ ಅಲ್ಲಿ ತನ್ನ ಡೇರೆ ಹಾಕಲ್ಲ,ಯಾವ ಕುರುಬನೂ ಅಲ್ಲಿ ತನ್ನ ಮಂದೆಯನ್ನ ಮಲಗೋಕೆ ಬಿಡಲ್ಲ. 21  ಅಲ್ಲಿ ಮರುಭೂಮಿಯ ಪ್ರಾಣಿಗಳು ಮಲಗ್ತವೆ,ಅಲ್ಲಿನ ಮನೆಗಳು ಗೂಬೆಗಳಿಂದ ತುಂಬಿರ್ತವೆ,ಅಲ್ಲಿ ಉಷ್ಟ್ರಪಕ್ಷಿಗಳು ನೆಲೆಸ್ತವೆ,+ಅಲ್ಲಿ ಕಾಡಿನ ಆಡುಗಳು* ಕುಣಿದು ಕುಪ್ಪಳಿಸ್ತವೆ. 22  ಊಳಿಡೋ ಪ್ರಾಣಿಗಳು ಅಲ್ಲಿನ ಕೋಟೆಗಳಲ್ಲಿ ಕೂಗ್ತವೆ,ಗುಳ್ಳೆನರಿಗಳು ಅಲ್ಲಿನ ವೈಭವಯುತ ಅರಮನೆಗಳಲ್ಲಿ ಕೂಗ್ತವೆ. ಆ ನಗರಕ್ಕೆ ನಾಶನದ ಸಮಯ ಹತ್ರ ಆಗಿದೆ, ಅದಕ್ಕೆ ಹೆಚ್ಚು ಸಮಯ ಇಲ್ಲ.”+

ಪಾದಟಿಪ್ಪಣಿ

ಅಥವಾ “ಸೂಚನಾ ಸ್ತಂಭವನ್ನ.”
ಅಕ್ಷ. “ಹೃದಯ ಭಯದಿಂದ ಕರಗುತ್ತೆ.”
ಅಕ್ಷ. “ಕೆಸಿಲ್‌ ನಕ್ಷತ್ರಪುಂಜಗಳು.” ಇವು ಬಹುಶಃ ಓರಿಯನ್‌ ಮತ್ತು ಅದರ ಸುತ್ತಲಿನ ನಕ್ಷತ್ರಪುಂಜಗಳನ್ನ ಸೂಚಿಸ್ತಿವೆ.
ಅಥವಾ “ಅಲಂಕಾರಕ್ಕೆ.”
ಬಹುಶಃ, “ಆಡಿನಂತಿರೋ ಕೆಟ್ಟ ದೇವದೂತರು.”