ಯೆಶಾಯ 11:1-16

  • ಇಷಯನ ಕುಡಿಯ ನೀತಿಯ ಆಳ್ವಿಕೆ (1-10)

    • ತೋಳ ಕುರಿಮರಿಯ ಜೊತೆ ವಾಸಿಸುತ್ತೆ (6)

    • ಭೂಮಿ ಯೆಹೋವನ ಜ್ಞಾನದಿಂದ ತುಂಬ್ಕೊಳ್ಳುತ್ತೆ (9)

  • ಉಳಿದವ್ರನ್ನ ವಾಪಸ್‌ ಕರ್ಕೊಂಡು ಬರಲಾಗುತ್ತೆ (11-16)

11  ಇಷಯನ+ ಸಣ್ಣ ಕೊಂಬೆಯಿಂದ ಕುಡಿಯೊಂದು+ ಒಡೆಯುತ್ತೆ,ಅವನ ಬೇರುಗಳಿಂದ ಒಂದು ಚಿಗುರೊಡೆದು+ ಅದು ಫಲ ಕೊಡುತ್ತೆ.  2  ಆತನ ಮೇಲೆ ಯೆಹೋವನ ಪವಿತ್ರಶಕ್ತಿ ನೆಲೆಸುತ್ತೆ,+ಹಾಗಾಗಿ ಆತನು ವಿವೇಕಿ ಆಗಿರ್ತಾನೆ+ ಮತ್ತು ಆತನಿಗೆ ಅಪಾರ ತಿಳುವಳಿಕೆ ಇರುತ್ತೆ,ಆತನು ಒಳ್ಳೇ ಸಲಹೆ ಕೊಡ್ತಾನೆ ಮತ್ತು ಶಕ್ತಿಶಾಲಿ ಆಗಿರ್ತಾನೆ,+ಆತನಲ್ಲಿ ಅಪಾರ ಜ್ಞಾನ ಇರುತ್ತೆ ಮತ್ತು ಯೆಹೋವನ ಕಡೆ ತುಂಬ ಗೌರವ ಇರುತ್ತೆ.  3  ಆತನು ಯೆಹೋವನ ಭಯದಲ್ಲಿ ಖುಷಿಪಡ್ತಾನೆ,+ಆತನು ಕಣ್ಣಿಗೆ ಕಂಡಿದ್ದನ್ನ ಆಧಾರವಾಗಿ ಇಟ್ಕೊಂಡು ನ್ಯಾಯತೀರಿಸಲ್ಲ,ಕಿವಿಗೆ ಬಿದ್ದ ಮಾತುಗಳ ಪ್ರಕಾರ ಖಂಡಿಸಲ್ಲ.+  4  ಆತನು ದೀನರಿಗೆ ಪಕ್ಷಪಾತಮಾಡದೆ* ನ್ಯಾಯತೀರಿಸ್ತಾನೆ,ಭೂಮಿ ಮೇಲಿರೋ ಸೌಮ್ಯ ಸ್ವಭಾವದವರ ಪರವಾಗಿ ಜನ್ರನ್ನ ನೀತಿನಿಷ್ಠೆಯಿಂದ ಖಂಡಿಸ್ತಾನೆ. ಕೋಲಿನ ತರ ಇರೋ ತನ್ನ ಮಾತುಗಳಿಂದ ಆತನು ಭೂಮಿಯನ್ನ ಹೊಡಿತಾನೆ,+ತನ್ನ ತುಟಿಗಳ ಉಸಿರಿಂದ ಕೆಟ್ಟವರನ್ನ ಸಂಹರಿಸ್ತಾನೆ.+  5  ನೀತಿ ಆತನ ನಡುಕಟ್ಟಾಗಿರುತ್ತೆ,ನಂಬಿಗಸ್ತಿಕೆ ಆತನ ಸೊಂಟಪಟ್ಟಿ ಆಗಿರುತ್ತೆ.+  6  ತೋಳ ಕುರಿಮರಿಯ ಜೊತೆ ವಾಸಿಸುತ್ತೆ,+ಚಿರತೆ ಎಳೇ ಆಡಿನ ಜೊತೆ ಮಲಗುತ್ತೆ,ಕರು, ಸಿಂಹ* ಮತ್ತು ಕೊಬ್ಬಿದ ಪ್ರಾಣಿ ಎಲ್ಲಾ ಒಟ್ಟಿಗೆ ಇರುತ್ತೆ,*+ಇವೆಲ್ಲವುಗಳನ್ನ ಒಬ್ಬ ಚಿಕ್ಕ ಹುಡುಗ ಮುಂದೆ ನಿಂತು ನಡಿಸ್ತಾನೆ.  7  ಹಸು ಮತ್ತು ಕರಡಿ ಒಟ್ಟಿಗೆ ಮೇಯುತ್ತೆ,ಅವುಗಳ ಮರಿಗಳು ಒಟ್ಟಿಗೆ ಮಲುಗುತ್ತೆ. ಸಿಂಹ ಹೋರಿ ತರ ಹುಲ್ಲು ತಿನ್ನುತ್ತೆ.+  8  ಹಾಲು ಕುಡಿಯೋ ಮಗು ನಾಗರಹಾವಿನ ಹುತ್ತದ ಮೇಲೆ ಆಟ ಆಡುತ್ತೆ,ಎದೆಹಾಲು ಬಿಟ್ಟಿರೋ ಮಗು ವಿಷಸರ್ಪದ ಹುತ್ತಕ್ಕೆ ಕೈಹಾಕುತ್ತೆ.  9  ನನ್ನ ಇಡೀ ಪವಿತ್ರ ಬೆಟ್ಟದಲ್ಲಿಅವು ಯಾವ ಹಾನಿನೂ ಮಾಡಲ್ಲ,+ ಯಾವುದನ್ನೂ ಹಾಳುಮಾಡಲ್ಲ,+ಯಾಕಂದ್ರೆ ಸಮುದ್ರ ನೀರಿಂದ ತುಂಬಿರೋ ತರ,ಭೂಮಿ ಯೆಹೋವನ ಜ್ಞಾನದಿಂದ ತುಂಬಿಕೊಳ್ಳುತ್ತೆ.+ 10  ಆ ದಿನ ಇಷಯನ ಬೇರು+ ಜನಾಂಗಗಳಿಗೆ ಒಂದು ಧ್ವಜದ ತರ* ಎದ್ದುನಿಲ್ಲುತ್ತೆ,+ಜನಾಂಗಗಳ ಜನ್ರು ಮಾರ್ಗದರ್ಶನಕ್ಕಾಗಿ ಆತನ ಹತ್ರ ಬರ್ತಾರೆ,*+ಆತನ ನಿವಾಸ* ಮಹಿಮೆಯಿಂದ ತುಂಬುತ್ತೆ. 11  ಆ ದಿನ ಯೆಹೋವ ಮತ್ತೊಮ್ಮೆ ತನ್ನ ಕೈ ಚಾಚ್ತಾನೆ. ಉಳಿದಿರೋ ತನ್ನ ಜನ್ರನ್ನ ವಾಪಸ್‌ ಕರ್ಕೊಂಡು ಬರ್ತಾನೆ. ಆತನು ಅವ್ರನ್ನ ಅಶ್ಶೂರ್‌,+ ಈಜಿಪ್ಟ್‌,+ ಪತ್ರೋಸ್‌,+ ಕೂಷ್‌,+ ಏಲಾಮ್‌,+ ಶಿನಾರ್‌,* ಹಾಮಾತ್‌ ಅನ್ನೋ ಸ್ಥಳಗಳಿಂದ ಮತ್ತು ಸಮುದ್ರದ ದ್ವೀಪಗಳಿಂದ ಒಟ್ಟುಗೂಡಿಸ್ತಾನೆ.+ 12  ಆತನು ಜನಾಂಗಗಳಿಗಾಗಿ ಒಂದು ಧ್ವಜವನ್ನ* ಎತ್ತಿ ನಿಲ್ಲಿಸಿ ಚೆದರಿ ಹೋಗಿರೋ ಇಸ್ರಾಯೇಲ್‌ ಜನ್ರನ್ನ ಒಟ್ಟುಗೂಡಿಸ್ತಾನೆ.+ ಅಷ್ಟೇ ಅಲ್ಲ ಭೂಮಿಯ ನಾಲ್ಕೂ ಮೂಲೆಗಳಿಗೆ ಚೆದರಿಹೋಗಿರೋ ಯೆಹೂದದ ಜನ್ರನ್ನ ಒಟ್ಟುಗೂಡಿಸ್ತಾನೆ.+ 13  ಎಫ್ರಾಯೀಮಿನ ಹೊಟ್ಟೆಕಿಚ್ಚು ಇಲ್ಲದಂತಾಗುತ್ತೆ,+ಯೆಹೂದದ ಕಡೆ ದ್ವೇಷ ಇಟ್ಟುಕೊಂಡಿರುವವರು ಅಳಿದುಹೋಗ್ತಾರೆ. ಎಫ್ರಾಯೀಮ್‌ ಯೆಹೂದದ ಮೇಲೆ ಹೊಟ್ಟೆಕಿಚ್ಚು ಪಡಲ್ಲ,ಯೆಹೂದ ಎಫ್ರಾಯೀಮಿನ ಮೇಲೆ ದ್ವೇಷವನ್ನ ಇಟ್ಕೊಳ್ಳಲ್ಲ.+ 14  ಅವರು ಪಶ್ಚಿಮದಲ್ಲಿರೋ ಫಿಲಿಷ್ಟಿಯರ ಇಳಿಜಾರು ಪ್ರದೇಶಗಳ* ಮೇಲೆ ಹಠಾತ್ತನೆ ಆಕ್ರಮಣ ಮಾಡ್ತಾರೆ,ಅವರಿಬ್ರೂ ಪೂರ್ವದಲ್ಲಿರೋ ಜನ್ರನ್ನ ಕೊಳ್ಳೆಹೊಡಿತಾರೆ. ಅವರು ಎದೋಮಿನ+ ಮತ್ತು ಮೋವಾಬಿನ+ ವಿರುದ್ಧ ತಮ್ಮ ಕೈಯನ್ನ ಚಾಚ್ತಾರೆ,*ಅಮ್ಮೋನಿಯರು ಅವ್ರಿಗೆ ಶರಣಾಗ್ತಾರೆ.+ 15  ಯೆಹೋವ ಈಜಿಪ್ಟಿನ ಸಮುದ್ರ ಕೊಲ್ಲಿಯನ್ನ* ಇಬ್ಬಾಗ ಮಾಡ್ತಾನೆ,*+ನದಿ* ಮೇಲೆ ಕೈ ಆಡಿಸ್ತಾನೆ.+ ಸುಡೋ ಉಸಿರಿಂದ ರಭಸವಾಗಿ ಹರಿಯೋ ಏಳು ಪ್ರವಾಹಗಳನ್ನ ಹೊಡಿತಾನೆ,ಜನ ಕೆರಗಳನ್ನ ಹಾಕೊಂಡು ಅದನ್ನ ದಾಟೋ ತರ ಮಾಡ್ತಾನೆ. 16  ಇಸ್ರಾಯೇಲ್ಯರನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದಾಗ ಇದ್ದ ಹಾಗೇ,ಆತನ ಜನ್ರಲ್ಲಿ ಉಳಿದಿರುವವರಿಗಾಗಿ ಅಶ್ಶೂರದಲ್ಲಿ ಒಂದು ಹೆದ್ದಾರಿ ಇರುತ್ತೆ.+

ಪಾದಟಿಪ್ಪಣಿ

ಅಥವಾ “ನೀತಿಯಿಂದ.”
ಅಥವಾ “ಪ್ರಾಯದ ಸಿಂಹ.”
ಬಹುಶಃ, “ಕರು ಮತ್ತು ಸಿಂಹ ಒಟ್ಟಿಗೆ ಮೇಯ್ತವೆ.”
ಅಕ್ಷ. “ವಿಶ್ರಾಂತಿಯ ಸ್ಥಳ.”
ಅಥವಾ “ಜನಾಂಗಗಳ ಜನರು ಅವನನ್ನ ಹುಡುಕ್ತಾರೆ.”
ಅಥವಾ “ಸೂಚನಾ ಸ್ತಂಭದ ತರ.”
ಅದು, ಬ್ಯಾಬಿಲೋನಿಯ.
ಅಥವಾ “ಸೂಚನಾ ಸ್ತಂಭವನ್ನ.”
ಅಕ್ಷ. “ಭುಜದ.”
ಅಥವಾ “ತಮ್ಮ ಅಧಿಕಾರವನ್ನ ವಿಸ್ತರಿಸ್ತಾರೆ.”
ಅಕ್ಷ. “ನಾಲಿಗೆ.”
ಬಹುಶಃ, “ಒಣಗಿಸಿ ಬಿಡ್ತಾನೆ.”
ಅದು, ಯೂಫ್ರೆಟಿಸ್‌ ನದಿ.