ಯೆರೆಮೀಯ 4:1-31
4 ಯೆಹೋವ ಹೇಳೋದು ಏನಂದ್ರೆ,“ಇಸ್ರಾಯೇಲೇ, ನೀನು ವಾಪಸ್ ಬಂದ್ರೆನನ್ನ ಹತ್ರ ವಾಪಸ್ ಬಂದ್ರೆ,ನಿನ್ನ ಅಸಹ್ಯ ಮೂರ್ತಿಗಳನ್ನ ನನ್ನ ಕಣ್ಣೆದುರಿಂದ ತೆಗೆದು ಹಾಕಿದ್ರೆನೀನು ಅಲೆಮಾರಿಯಾಗಿ ಇರಲ್ಲ.+
2 ಸತ್ಯ, ನ್ಯಾಯ, ನೀತಿಗೆ ಅನುಸಾರವಾಗಿ ನೀನು ನಡಿತಾ‘ಜೀವ ಇರೋ ದೇವರಾದ ಯೆಹೋವನಾಣೆ’ ಅಂತ ಪ್ರಮಾಣ ಮಾಡಿದ್ರೆಬೇರೆ ದೇಶದ ಜನ್ರಿಗೆ ಆತನ ಆಶೀರ್ವಾದ ಸಿಗುತ್ತೆ,ಅವರು ಆತನ ಬಗ್ಗೆ ಹೆಮ್ಮೆಪಡ್ತಾರೆ.”+
3 ಯೆಹೂದದ, ಯೆರೂಸಲೇಮಿನ ಜನ್ರಿಗೆ ಯೆಹೋವ ಹೇಳೋದು ಏನಂದ್ರೆ,“ನೀವು ಕೃಷಿಭೂಮಿಯನ್ನ ಉಳುಮೆ ಮಾಡಿ,ಮುಳ್ಳು ಗಿಡಗಳ ಮಧ್ಯ ಬೀಜ ಬಿತ್ತುತ್ತಾ ಇರಬೇಡಿ.+
4 ಯೆಹೂದದ ಜನ್ರೇ, ಯೆರೂಸಲೇಮ್ ಜನ್ರೇ,ನೀವು ಯೆಹೋವನಿಗೋಸ್ಕರ ಸುನ್ನತಿ* ಮಾಡ್ಕೊಳ್ಳಿ,+ನಿಮ್ಮ ಹೃದಯಕ್ಕೆ ಸುನ್ನತಿ ಮಾಡ್ಕೊಳ್ಳಿ.
ಇಲ್ಲದಿದ್ರೆ ನೀವು ಕೆಟ್ಟ ಕೆಲಸಗಳನ್ನ ಮಾಡ್ತಾ ಇದ್ರೆನನ್ನ ಕೋಪ ಬೆಂಕಿ ತರ ಧಗಧಗ ಉರಿಯುತ್ತೆ,ಅದನ್ನ ಆರಿಸೋಕೆ ಯಾರಿಂದನೂ ಆಗಲ್ಲ.”+
5 ಈ ವಿಷ್ಯವನ್ನ ಯೆಹೂದದಲ್ಲಿ ಎಲ್ರಿಗೂ ಹೇಳಿ,ಯೆರೂಸಲೇಮಲ್ಲಿ ಸಾರಿಹೇಳಿ,ದೇಶದಲ್ಲೆಲ್ಲಾ ಕೊಂಬೂದಿ,ಕೂಗಿ+ ಎಲ್ರನ್ನ ಜೋರಾಗಿ ಕರೆದು ಹೀಗನ್ನಿ “ಎಲ್ರೂ ಬನ್ನಿ,ಕೋಟೆಗಳಿರೋ ಪಟ್ಟಣಗಳ ಒಳಗೆ ಓಡಿಹೋಗೋಣ.+
6 ಚೀಯೋನಿನ ಕಡೆಗೆ ಒಂದು ಧ್ವಜ* ಎತ್ತಿ,ಆಮೇಲೆ ಸುಮ್ಮನೆ ನಿಲ್ಲಬೇಡಿ, ಆಶ್ರಯಕ್ಕಾಗಿ ಹುಡುಕಿ.”
ಯಾಕಂದ್ರೆ ನಾನು ಉತ್ತರದ ಕಡೆಯಿಂದ ಕಷ್ಟವನ್ನ, ಒಂದು ದೊಡ್ಡ ವಿನಾಶವನ್ನ ತರ್ತಾ ಇದ್ದೀನಿ.+
7 ಸಿಂಹ ಪೊದೆ ಒಳಗಿಂದ ಹೊರಗೆ ಬರೋ ತರ ಶತ್ರು ಹೊರಗೆ ಬಂದಿದ್ದಾನೆ,+ದೇಶಗಳನ್ನ ಸರ್ವನಾಶ ಮಾಡೋಕೆ ಹೊರಟಿದ್ದಾನೆ.+
ಅವನು ತಾನಿರೋ ಜಾಗದಿಂದ ಹೊರಟಿದ್ದಾನೆ, ನಿಮ್ಮ ದೇಶಕ್ಕೆ ಎದೆ ನಡುಗೋ ಸ್ಥಿತಿ ತರಬೇಕು ಅಂತ ಇದ್ದಾನೆ.
ನಿಮ್ಮ ಪಟ್ಟಣಗಳು ಹಾಳಾಗುತ್ತೆ, ಅಲ್ಲಿ ಒಬ್ರೂ ವಾಸ ಮಾಡಲ್ಲ.+
8 ಗೋಣಿ ಸುತ್ಕೊಂಡು+ಎದೆ ಬಡ್ಕೊಳ್ಳಿ, ಗೋಳಾಡಿ,ಯಾಕಂದ್ರೆ ಯೆಹೋವನ ಕೋಪದ ಬೆಂಕಿ ನಮ್ಮನ್ನ ಬಿಟ್ಟಿಲ್ಲ.
9 “ಆ ದಿನದಲ್ಲಿ ರಾಜನ ಧೈರ್ಯವೆಲ್ಲ* ಕರಗಿ ಹೋಗುತ್ತೆ,+ಅಧಿಕಾರಿಗಳ ಧೈರ್ಯ* ಸಹ ಕರಗಿ ಹೋಗುತ್ತೆ.
ಪುರೋಹಿತರಿಗೆ ಭಯ ಆಗುತ್ತೆ, ಪ್ರವಾದಿಗಳಿಗೆ ಆಶ್ಚರ್ಯ ಆಗುತ್ತೆ”+ ಅಂತ ಯೆಹೋವ ಹೇಳ್ತಾನೆ.
10 ಆಗ ನಾನು “ಅಯ್ಯೋ, ವಿಶ್ವದ ರಾಜ ಯೆಹೋವನೇ! ಕತ್ತಿ ನಮ್ಮ ಕುತ್ತಿಗೆ ಹತ್ರನೇ ಇದೆ. ಆದ್ರೆ ನೀನು ‘ನೀವು ನೆಮ್ಮದಿಯಾಗಿ ಇರಿ’ ಅಂತ ಹೇಳಿ+ ಯೆರೂಸಲೇಮಿನ ಜನ್ರನ್ನ ಬೇರೆ ಜನ್ರನ್ನ ತುಂಬ ಮೋಸ ಮಾಡಿಬಿಟ್ಟಿದ್ದೀಯ”+ ಅಂದೆ.
11 ಆ ಸಮಯದಲ್ಲಿ ಯೆರೂಸಲೇಮಿನ ಜನ್ರಿಗೂ ಬೇರೆ ಜನ್ರಿಗೂ ಹೀಗೆ ಹೇಳಲಾಗುತ್ತೆ“ಮರುಭೂಮಿಯ ಬೋಳು ಬೆಟ್ಟಗಳಿಂದ ಬಿಸಿಗಾಳಿನನ್ನ ಮಗಳ* ಅಂದ್ರೆ ನನ್ನ ಜನ್ರ ಮೇಲೆ ಜೋರಾಗಿ ಬೀಸುತ್ತೆ.
ಅದು ಧಾನ್ಯ ತೂರೋಕೆ ಅಥವಾ ಶುದ್ಧಮಾಡೋಕೆ ಬರ್ತಿಲ್ಲ.
12 ಈ ಜಾಗಗಳಿಂದ ಜೋರಾದ ಗಾಳಿ ಬರ್ತಾ ಇರೋದು ನನ್ನ ಅಪ್ಪಣೆಯಿಂದಾನೇ.
ಈಗ ನಾನು ಅವ್ರ ವಿರುದ್ಧ ತೀರ್ಪು ಮಾಡ್ತೀನಿ.
13 ನೋಡಿ! ಶತ್ರು ಮಳೆ ಮೋಡಗಳ ಹಾಗೆ ಬರ್ತಾನೆ,ಅವನ ರಥಗಳು ಬಿರುಗಾಳಿ ತರ ಬರುತ್ತೆ.+
ಅವನ ಕುದುರೆಗಳು ಹದ್ದುಗಳಿಗಿಂತ ವೇಗವಾಗಿ ಬರುತ್ತೆ.+
ಅಯ್ಯೋ, ನಮಗೆ ಎಂಥ ಗತಿ ಬಂತು! ನಾವು ನಾಶ ಆಗಿಬಿಟ್ವಿ!
14 ಯೆರೂಸಲೇಮೇ, ನಿನ್ನ ಹೃದಯದಿಂದ ಕೆಟ್ಟದನ್ನ ತೆಗೆದುಹಾಕಿ ಶುದ್ಧಮಾಡು, ಆಗ ಮಾತ್ರ ರಕ್ಷಣೆ ಸಿಗುತ್ತೆ.+
ಇನ್ನೆಷ್ಟು ಸಮಯ ನಿನ್ನ ಹೃದಯದಲ್ಲಿ ಕೆಟ್ಟ ಯೋಚನೆಗಳು ಮನೆಮಾಡಿರಬೇಕು?
15 ಯಾಕಂದ್ರೆ ಒಂದು ಧ್ವನಿ ದಾನ್ ಪಟ್ಟಣದಲ್ಲಿ ಆಗೋ ಕೆಟ್ಟ ಸುದ್ದಿ ಹೇಳ್ತಿದೆ,+ಎಫ್ರಾಯೀಮಿನ ಬೆಟ್ಟಗಳಲ್ಲಿ ಆಗೋ ಕೆಟ್ಟದನ್ನ ಅದು ಸಾರಿಹೇಳ್ತಿದೆ.
16 ಬೇರೆ ದೇಶಗಳಿಗೆ ಇದನ್ನ ಹೇಳಿ,ಯೆರೂಸಲೇಮಿನ ವಿರುದ್ಧ ಇದನ್ನ ಸಾರಿಹೇಳಿ.”
“ದೂರದ ಒಂದು ದೇಶದಿಂದ ಕಾವಲುಗಾರರು* ಬರ್ತಿದ್ದಾರೆ,ಯೆಹೂದದ ಪಟ್ಟಣಗಳ ವಿರುದ್ಧ ಅವರು ಯುದ್ಧಘೋಷಣೆ ಮಾಡ್ತಾರೆ.
17 ಅವರು ಬಯಲು ಪ್ರದೇಶದಲ್ಲಿರೋ ಕಾವಲುಗಾರರ ತರ ಎಲ್ಲ ದಿಕ್ಕಿಂದ ಯೆರೂಸಲೇಮಿನ ವಿರುದ್ಧ ಬರ್ತಾರೆ,+ಯಾಕಂದ್ರೆ ಅವಳು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾಳೆ”+ ಅಂತ ಯೆಹೋವ ಹೇಳ್ತಾನೆ.
18 “ನಿನ್ನ ನಡತೆಗೆ, ಕೆಲಸಗಳಿಗೆ ತಕ್ಕ ಶಿಕ್ಷೆ ಸಿಗುತ್ತೆ,+ದಂಗೆ ಏಳೋದೆ ನಿನಗೆ ರೂಢಿ ಆಗಿಬಿಟ್ಟಿರೋದ್ರಿಂದನಿನ್ನ ಮೇಲೆ ಬರೋ ಕಷ್ಟ ಭಯಂಕರ ಆಗಿರುತ್ತೆ!”
19 ಅಯ್ಯೋ, ನಾನು ದುಃಖದಲ್ಲಿ* ಮುಳುಗಿಹೋಗಿದ್ದೀನಿ!
ಹೇಳೋಕೆ ಆಗದಷ್ಟು ನೋವು ಹೃದಯದಲ್ಲಿ ತುಂಬಿದೆ.
ನನ್ನ ಎದೆ ಡವಡವ ಅಂತ ಜೋರಾಗಿ ಬಡ್ಕೊಳ್ತಾ ಇದೆ,ಸುಮ್ಮನಿರೋಕೆ ನನ್ನಿಂದ ಆಗ್ತಿಲ್ಲ,ಯಾಕಂದ್ರೆ ಕೊಂಬೂದೋ ಶಬ್ದ ನನ್ನ ಕಿವಿಗೆ ಬಿದ್ದಿದೆ,ಯುದ್ಧದ ಕರೆ* ಕೇಳ್ತಿದೆ.+
20 ಒಂದರ ಹಿಂದೆ ಒಂದು ಕಷ್ಟದ ಸುದ್ದಿ ಕೇಳ್ತಿದೆ,ಇಡೀ ದೇಶನೇ ನಾಶ ಆಗ್ತಿದೆ.
ಇದ್ದಕ್ಕಿದ್ದ ಹಾಗೆ ನನ್ನ ಡೇರೆಗಳು,ಒಂದೇ ಕ್ಷಣದಲ್ಲಿ ನನ್ನ ಡೇರೆಯ ಬಟ್ಟೆಗಳು ನಾಶ ಆಗಿವೆ.+
21 ಇನ್ನೆಷ್ಟು ದಿನ ನಾನು ಈ ಧ್ವಜ* ನೋಡ್ತಾ ಇರ್ಲಿ?
ಕೊಂಬೂದೋ ಶಬ್ದ ಕೇಳಿಸ್ಕೊಳ್ತಾ ಇರ್ಲಿ?+
22 “ನನ್ನ ಜನ್ರು ಮೂರ್ಖರು,+ಅವರು ನನಗೆ ಗಮನಕೊಡೋದೇ ಇಲ್ಲ,ಅವರು ತಿಳುವಳಿಕೆಯಿಲ್ಲದ ಮೂರ್ಖ ಮಕ್ಕಳು,ಅವರು ಕೆಟ್ಟದು ಮಾಡೋದರಲ್ಲಿ ತುಂಬ ಜಾಣರು,ಆದ್ರೆ ಒಳ್ಳೇದು ಮಾಡೋಕೆ ಅವ್ರಿಗೆ ಗೊತ್ತೇ ಇಲ್ಲ” ಅಂತ ದೇವರು ಹೇಳಿದನು.
23 ನಾನು ದೇಶ ನೋಡಿದಾಗ ಆಶ್ಚರ್ಯ ಆಯ್ತು!
ಅಲ್ಲಿ ಒಬ್ರು ಕೂಡ ಇರಲಿಲ್ಲ, ಹಾಳು ಬಿದ್ದಿತ್ತು,+ನಾನು ಆಕಾಶ ನೋಡ್ದೆ, ಅಲ್ಲಿ ಬೆಳಕೇ ಇರ್ಲಿಲ್ಲ.+
24 ಪರ್ವತಗಳನ್ನ ನೋಡಿ ಕಲ್ಲು ತರ ನಿಂತುಬಿಟ್ಟೆ, ಅವು ಕಂಪಿಸ್ತಾ ಇದ್ದವು,ಬೆಟ್ಟಗಳು ನಡುಗ್ತಾ ಇದ್ದವು.+
25 ನಾನು ನೋಡಿದಾಗ ಅಯ್ಯೋ, ಅಲ್ಲಿ ಜನ್ರೇ ಇರ್ಲಿಲ್ಲ,ಪಕ್ಷಿಗಳೆಲ್ಲ ಹಾರಿ ಹೋಗಿದ್ವು.+
26 ನಾನು ನೋಡಿದ್ದನ್ನ ಹೇಗೆ ಹೇಳಲಿ?
ಹಣ್ಣಿನ ತೋಟದ ತರ ಇದ್ದ ದೇಶ ಮರುಭೂಮಿ ಆಗಿತ್ತು,ಅದ್ರ ಎಲ್ಲ ಪಟ್ಟಣಗಳು ನೆಲಸಮ ಆಗಿತ್ತು.+
ಹೀಗೆ ಮಾಡಿದ್ದು ಯೆಹೋವನೇ,ಆತನ ಕಡುಕೋಪಾನೇ ಇದಕ್ಕೆ ಕಾರಣ.
27 ಯೆಹೋವ ಹೀಗೆ ಹೇಳ್ತಾನೆ “ಇಡೀ ದೇಶ ಹಾಳು ಬೀಳುತ್ತೆ,+ಆದ್ರೆ ನಾನು ದೇಶವನ್ನ ಪೂರ್ತಿ ನಾಶ ಮಾಡಲ್ಲ.
28 ದೇಶ ಹಾಳು ಬೀಳೋದ್ರಿಂದ ಅದು ಎದೆ ಬಡ್ಕೊಳ್ಳುತ್ತೆ,+ಆಕಾಶ ಕಪ್ಪಾಗುತ್ತೆ.+
ಇದು ಖಂಡಿತ ಆಗೇ ಆಗುತ್ತೆ,ಯಾಕಂದ್ರೆ ನಾನೇ ಇದನ್ನ ಹೇಳಿದ್ದೀನಿ, ನಾನೇ ಇದನ್ನ ತೀರ್ಮಾನ ಮಾಡಿದ್ದೀನಿ.
ನಾನು ಮನಸ್ಸು ಬದಲಾಯಿಸಲ್ಲ,ನಾನು ಹೇಳಿದ್ದನ್ನ ಮಾಡದೇ ಇರಲ್ಲ.+
29 ಕುದುರೆ ಸವಾರರ, ಬಿಲ್ಲುಗಾರರ ಆರ್ಭಟಕ್ಕೆ ಹೆದರಿಪಟ್ಟಣದವರೆಲ್ಲ ಓಡಿಹೋಗ್ತಾರೆ,+ಅವರು ಪೊದೆಗಳಲ್ಲಿ ಅವಿತುಕೊಳ್ತಾರೆ,ಬಂಡೆಗಳನ್ನ ಹತ್ತುತ್ತಾರೆ.+
ಪಟ್ಟಣಗಳೆಲ್ಲ ಖಾಲಿ ಖಾಲಿ ಆಗಿದೆ,ಅಲ್ಲಿ ಯಾರೂ ವಾಸ ಮಾಡಲ್ಲ.”
30 ಈಗ ನೀನು ನಾಶ ಆಗಿದ್ದೀಯಲ್ಲಾ, ನೀನೇನು ಮಾಡ್ತೀಯಾ?
ಈ ಮುಂಚೆ ನೀನು ಕಡುಗೆಂಪು ಬಣ್ಣದ ಬಟ್ಟೆ ಹಾಕೊಳ್ತಿದ್ದೆ,ಚಿನ್ನದ ಒಡವೆ ಹಾಕೊಂಡು ಸಿಂಗಾರ ಮಾಡ್ಕೊಳ್ತಿದ್ದೆ,ಕಣ್ಣಿಗೆ ಕಾಡಿಗೆ ಹಚ್ಚಿ ಕಣ್ಣಿನ ಅಂದ ಹೆಚ್ಚಿಸಿಕೊಳ್ತಿದ್ದೆ,ಆದ್ರೆ ನೀನು ಈ ರೀತಿ ಅಲಂಕಾರ ಮಾಡ್ಕೊಂಡಿದ್ದೆಲ್ಲ ವ್ಯರ್ಥ!+
ನಿನ್ನ ಹಿಂದೆನೇ ಬರ್ತಿದ್ದವರೆಲ್ಲ ನಿನ್ನನ್ನ ತಿರಸ್ಕರಿಸಿದ್ದಾರೆ,ಈಗ ಅವ್ರೇ ನಿನ್ನ ಜೀವ ತೆಗಿಯೋಕೆ ಸಂಚು ಮಾಡ್ತಿದ್ದಾರೆ.+
31 ಕಾಯಿಲೆಯಿಂದ ನರಳೋ ಹೆಂಗಸು ಅಳ್ತಿರೋ ತರ ಶಬ್ದ ನನಗೆ ಕೇಳ್ತಿದೆ,ಮೊದಲ ಮಗು ಹುಟ್ಟುವಾಗ ಹೆಂಗಸು ಪಡೋ ನೋವಿನ ಶಬ್ದ ಕೇಳ್ತಿದೆ,ಅದು ಚೀಯೋನ್ ಅನ್ನೋ ಹೆಂಗಸು ಉಸಿರು ಎಳ್ಕೊಳ್ತಿರೋ ಸದ್ದು.
ಅವಳು ತನ್ನ ಕೈಯನ್ನ ಮೇಲೆ ಎತ್ಕೊಂಡು,+“ನನ್ನ ಗತಿಯನ್ನ ಏನು ಹೇಳಲಿ!
ಕೊಲೆಗಾರರಿಂದಾಗಿ ನನ್ನ ಶಕ್ತಿಯೆಲ್ಲ ಹೋಗಿಬಿಟ್ಟಿದೆ” ಅಂತಿದ್ದಾಳೆ.
ಪಾದಟಿಪ್ಪಣಿ
^ ಅಥವಾ “ಸೂಚನಾ ಕಂಬ.”
^ ಅಕ್ಷ. “ಹೃದಯ.”
^ ಅಕ್ಷ. “ಹೃದಯ.”
^ ಕನಿಕರ ಅಥವಾ ಅನುಕಂಪ ತೋರಿಸೋಕೆ ಕಾವ್ಯಾತ್ಮಕವಾಗಿ ಮಗಳಿಗೆ ಸೂಚಿಸಿ ಹೇಳಿರಬಹುದು.
^ ಅಕ್ಷ. “ಕಣ್ಣಿಡುವವರು.” ಇವರು ಒಂದು ಪಟ್ಟಣವನ್ನ ಯಾವಾಗ ದಾಳಿ ಮಾಡಬಹುದು ಅಂತ ನೋಡ್ತಾ ಇರ್ತಾರೆ.
^ ಅಕ್ಷ. “ಕರುಳು.”
^ ಬಹುಶಃ “ರಣಘೋಷ.”
^ ಅಥವಾ “ಸೂಚನಾ ಕಂಬ.”