ಜ್ಞಾನೋಕ್ತಿ 8:1-36

  • ವಿವೇಕ ಒಬ್ಬ ವ್ಯಕ್ತಿ ತರ ಮಾತಾಡುತ್ತೆ (1-36)

    • ‘ದೇವರ ಮೊದಲ ಸೃಷ್ಟಿ ನಾನೇ’ (22)

    • ‘ದೇವರ ಪಕ್ಕದಲ್ಲಿದ್ದ ಅತ್ಯಂತ ನಿಪುಣ ಕೆಲಸಗಾರ’ (30)

    • ‘ಮನುಷ್ಯರಂದ್ರೆ ನನಗೆ ಪಂಚಪ್ರಾಣ’ (31)

8  ನೋಡು, ವಿವೇಕ ಗಟ್ಟಿಯಾಗಿ ಕೂಗ್ತಿದೆ! ಬುದ್ಧಿ* ಜೋರುಜೋರಾಗಿ ಕರಿತಿದೆ!+   ದಾರಿ ಪಕ್ಕದಲ್ಲಿರೋ ಎತ್ತರವಾದ ಜಾಗಗಳಲ್ಲಿ,+ದಾರಿಗಳು ಸೇರುವಲ್ಲಿ ವಿವೇಕ ನಿಂತಿದೆ.   ಪಟ್ಟಣದ ಬಾಗಿಲು ಹತ್ರ,ಪ್ರವೇಶಸ್ಥಳಗಳ ಪಕ್ಕ, ಬಾಗಿಲುಗಳ ಹತ್ರ,ಅದು ಗಟ್ಟಿಯಾಗಿ ಹೀಗೆ ಕೂಗ್ತಿದೆ:+   “ಜನ್ರೇ, ನಾನು ನಿಮ್ಮ ಹತ್ರಾನೇ ಮಾತಾಡ್ತಾ ಇದ್ದೀನಿ,ನಿಮ್ಮಲ್ಲಿ ಪ್ರತಿಯೊಬ್ರಿಗೂ ಹೇಳ್ತೀನಿ.   ಅನುಭವ ಇಲ್ಲದವ್ರೇ, ಜಾಣ್ಮೆಯಿಂದ ಕೆಲಸ ಮಾಡೋಕೆ ಕಲೀರಿ,+ಮೂರ್ಖರೇ, ಅರ್ಥ ಮಾಡ್ಕೊಳ್ಳೋ ಹೃದಯ ಗಳಿಸಿ.   ನಾನು ಹೇಳೋ ವಿಷ್ಯಗಳನ್ನ ಕೇಳಿಸ್ಕೊಳ್ಳಿ, ಯಾಕಂದ್ರೆ ಅವು ತುಂಬ ಮುಖ್ಯ,ನನ್ನ ತುಟಿಗಳು ಸರಿಯಾದ ವಿಷ್ಯವನ್ನೇ ಹೇಳುತ್ತೆ.   ನನ್ನ ಬಾಯಿ ಸತ್ಯವನ್ನೇ ಹೇಳುತ್ತೆ,ನನ್ನ ತುಟಿಗಳಿಗೆ ಕೆಟ್ಟ ವಿಷ್ಯಗಳಂದ್ರೆ ಇಷ್ಟ ಇಲ್ಲ.   ನನ್ನ ಬಾಯಿಯಿಂದ ಒಳ್ಳೇ ವಿಷ್ಯಗಳೇ ಬರುತ್ತೆ,ಮೋಸದ ಮಾತಾಗಲಿ, ಕೊಂಕು ಮಾತಾಗಲಿ ಬರಲ್ಲ.   ನನ್ನ ಮಾತುಗಳೆಲ್ಲ ವಿವೇಚನೆ ಇರುವವರಿಗೆ ನೇರಮಾತಾಗಿ,ಜ್ಞಾನವನ್ನ ಪಡ್ಕೊಂಡವ್ರಿಗೆ ಸರಿಯಾಗಿ ಕಾಣುತ್ತೆ. 10  ಬೆಳ್ಳಿ ಬದ್ಲು ನಾನು ಕೊಡೋ ಶಿಸ್ತು ತಗೊ,ಅಪ್ಪಟ ಚಿನ್ನದ ಬದ್ಲು ಜ್ಞಾನ ಆರಿಸ್ಕೊ.+ 11  ಯಾಕಂದ್ರೆ ವಿವೇಕ ಹವಳಕ್ಕಿಂತ* ಶ್ರೇಷ್ಠ. ಬೆಲೆಬಾಳೋ ವಸ್ತುಗಳಿಗೆ ಅದನ್ನ ಹೋಲಿಸೋಕೆ ಆಗಲ್ಲ. 12  ವಿವೇಕ ಅನ್ನೋ ನಾನು ಜಾಣ್ಮೆ ಜೊತೆ ಇರ್ತಿನಿ,ಜ್ಞಾನ, ಬುದ್ಧಿ ನನ್ನ ಹತ್ರ ಇದೆ.+ 13  ಯೆಹೋವನಿಗೆ ಭಯಪಡೋದು ಅಂದ್ರೆ ಕೆಟ್ಟದ್ದನ್ನ ದ್ವೇಷಿಸೋದು.+ ಗರ್ವ, ಅಹಂಕಾರ,+ ಕೆಟ್ಟ ದಾರಿ, ಸುಳ್ಳು ಮಾತುಗಳನ್ನ ವಿವೇಕ ಅನ್ನೋ ನಾನು ಇಷ್ಟಪಡಲ್ಲ.+ 14  ಒಳ್ಳೇ ಸಲಹೆ, ವಿವೇಕ*+ ನನ್ನ ಹತ್ರ ಇದೆ,ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ,+ ಬಲ+ ನನ್ನ ಸೊತ್ತು. 15  ನನ್ನ ಸಹಾಯದಿಂದ ರಾಜರು ಆಳ್ತಾರೆ,ದೊಡ್ಡದೊಡ್ಡ ಅಧಿಕಾರಿಗಳು ನೀತಿಯಿಂದ ನಿಯಮಗಳನ್ನ ಮಾಡ್ತಾರೆ.+ 16  ನನ್ನ ಸಹಾಯದಿಂದ ನಾಯಕರು ಆಳ್ತಾರೆ,ದೊಡ್ಡದೊಡ್ಡ ಅಧಿಕಾರಿಗಳು ನೀತಿಯಿಂದ ನ್ಯಾಯತೀರಿಸ್ತಾರೆ. 17  ನನ್ನನ್ನ ಪ್ರೀತಿಸುವವ್ರನ್ನ ನಾನು ಪ್ರೀತಿಸ್ತೀನಿ,ನನ್ನನ್ನ ಹುಡುಕುವವ್ರಿಗೆ ನಾನು ಸಿಗ್ತೀನಿ.+ 18  ನನ್ನ ಹತ್ರ ಆಸ್ತಿ, ಅಂತಸ್ತು ಇದೆ,ಶಾಶ್ವತ ಸಂಪತ್ತು,* ನೀತಿ ಇದೆ. 19  ನನ್ನಿಂದ ನಿಮಗೆ ಸಿಗೋ ಉಡುಗೊರೆಗಳು ಚಿನ್ನಕ್ಕಿಂತ, ಶುದ್ಧ ಚಿನ್ನಕ್ಕಿಂತ ಉತ್ತಮ,ನಾನು ನಿಮಗೆ ಏನನ್ನ ಕೊಡ್ತೀನೋ ಅದು ಶ್ರೇಷ್ಠ ಬೆಳ್ಳಿಗಿಂತ ಉತ್ತಮ.+ 20  ನಾನು ನೀತಿಯ ದಾರಿಯಲ್ಲಿ ನಡಿತೀನಿ,ನ್ಯಾಯದ ದಾರಿ ಮಧ್ಯದಲ್ಲೇ ಹೋಗ್ತೀನಿ. 21  ನನ್ನನ್ನ ಪ್ರೀತಿಸುವವ್ರಿಗೆ ನಾನು ಬೆಲೆಬಾಳೋ ಆಸ್ತಿ ಕೊಡ್ತೀನಿ,ಅವ್ರ ಗೋಡೌನ್‌ ತುಂಬಿಸ್ತೀನಿ. 22  ಯೆಹೋವ ಸೃಷ್ಟಿ ಮಾಡುವಾಗ ಮೊದ್ಲು ನನ್ನನ್ನ ಸೃಷ್ಟಿ ಮಾಡಿದನು,+ಆತನ ಕೈಯಿಂದ ಸೃಷ್ಟಿಯಾದ ಮೊದಲ ಸೃಷ್ಟಿ ನಾನೇ,ತುಂಬತುಂಬ ವರ್ಷಗಳ ಹಿಂದೆನೇ ದೇವರು ನನ್ನನ್ನ ಸೃಷ್ಟಿ ಮಾಡಿದನು.+ 23  ಬಹಳ ಮುಂಚೆನೇ,* ಅಂದ್ರೆ ಭೂಮಿಯನ್ನ ಸೃಷ್ಟಿ ಮಾಡೋ ಮುಂಚೆನೇ+ಆತನು ನನಗೆ ಒಂದು ದೊಡ್ಡ ಸ್ಥಾನ ಕೊಟ್ಟನು.+ 24  ನಾನು ಹುಟ್ಟಿದ ಸಮಯದಲ್ಲಿ* ಆಳವಾದ ಸಾಗರ ಆಗಲಿ+ಉಕ್ಕಿ ಹರಿಯೋ ಬುಗ್ಗೆಗಳಾಗಲಿ ಇರ್ಲಿಲ್ಲ. 25  ಪರ್ವತಗಳನ್ನ ಸೃಷ್ಟಿ ಮಾಡೋ ಮುಂಚೆನೇ,ಬೆಟ್ಟಗಳಿಗಿಂತ ಮುಂಚೆನೇ ನನ್ನನ್ನ ಸೃಷ್ಟಿ ಮಾಡಿದನು. 26  ಆಗಿನ್ನೂ ಆತನು ಭೂಮಿ ಆಗಲಿ, ಅದ್ರ ಬಯಲುಗಳಾಗಲಿಮಣ್ಣಿನ ಮೊದಲ ಕಣವನ್ನಾಗಲಿ ಮಾಡಿರಲಿಲ್ಲ. 27  ಆಕಾಶವನ್ನ ಮಾಡಿದಾಗ,+ಆತನು ನೀರಿಗೆ ಗಡಿರೇಖೆ* ಹಾಕಿದಾಗ+ ನಾನು ಅಲ್ಲಿದ್ದೆ. 28  ಆತನು ಮೋಡಗಳನ್ನ ಮಾಡಿದಾಗ,ಆಳವಾದ ಸಮುದ್ರಗಳನ್ನ ತುಂಬಿಸಿದಾಗ ನಾನಲ್ಲಿದ್ದೆ. 29  ಆತನು ಸಮುದ್ರಕ್ಕೆ ಗಡಿ ಹಾಕಿದಾಗ,ಆ ಗಡಿ ದಾಟಿ ಬರಬಾರದು ಅಂತ ನೀರಿಗೆ ಅಪ್ಪಣೆ ಕೊಟ್ಟಾಗ,+ಭೂಮಿಗೆ ಅಲುಗಾಡದ ಅಡಿಪಾಯ ಹಾಕಿದಾಗ, 30  ಅತ್ಯಂತ ನಿಪುಣ ಕೆಲಸಗಾರನ ತರ ನಾನು ಆತನ ಪಕ್ಕದಲ್ಲೇ ಇದ್ದೆ.+ ಆತನು ಪ್ರತಿದಿನ ನನ್ನನ್ನ ನೋಡಿ ಖುಷಿಪಡ್ತಿದ್ದ,+ನಾನು ಆತನ ಮುಂದೆ ಯಾವಾಗ್ಲೂ ನಗುನಗ್ತಾ ಇದ್ದೆ.+ 31  ಆತನು ಮನುಷ್ಯರಿಗೆ ಅಂತಾನೇ ಮಾಡಿದ ಭೂಮಿಯನ್ನ ನೋಡಿ ನಾನು ಖುಷಿಪಟ್ಟೆ,ಮನುಷ್ಯರಂದ್ರೆ ನನಗೆ ಪಂಚಪ್ರಾಣ. 32  ನನ್ನ ಮಕ್ಕಳೇ, ಈಗ ನಾನು ಹೇಳೋದನ್ನ ಕೇಳಿ,ಯಾಕಂದ್ರೆ ನನ್ನ ದಾರಿಯಲ್ಲಿ ನಡಿಯುವವರು ಸಂತೋಷವಾಗಿ ಇರ್ತಾರೆ. 33  ನಾನು ಕೊಡೋ ಶಿಸ್ತನ್ನ ಸ್ವೀಕರಿಸಿ+ ವಿವೇಕಿ ಆಗ್ತಾರೆ,ಯಾವತ್ತಿಗೂ ಅದನ್ನ ಅಸಡ್ಡೆ ಮಾಡಬೇಡಿ. 34  ಪ್ರತಿದಿನ ಬೆಳಬೆಳಿಗ್ಗೆನೇ ನನ್ನ ಬಾಗಿಲ ಹತ್ರ ಬರ್ತಾನೆ,ನನ್ನ ಬಾಗಿಲ* ಮುಂದೆ ಕಾಯ್ತಾನೆ,ನನ್ನ ಮಾತನ್ನ ಕೇಳುವವನು ಖುಷಿಯಾಗಿ ಇರ್ತಾನೆ. 35  ಯಾಕಂದ್ರೆ ನನ್ನನ್ನ ಹುಡುಕುವವನಿಗೆ ಜೀವ ಸಿಗುತ್ತೆ,+ಯೆಹೋವನ ಮೆಚ್ಚುಗೆ ಸಿಗುತ್ತೆ. 36  ಆದ್ರೆ ನನ್ನನ್ನ ಅಸಡ್ಡೆ ಮಾಡಿದ್ರೆ ಅವನಿಗೇ ಹಾನಿ,ನನ್ನನ್ನ ದ್ವೇಷಿಸುವವನಿಗೆ ಸಾವಂದ್ರೆ ಪ್ರೀತಿ.”+

ಪಾದಟಿಪ್ಪಣಿ

ಅಥವಾ “ವಿವೇಚನಾ ಶಕ್ತಿ.”
ಅಥವಾ “ಪ್ರಯೋಜನ ಆಗೋ ವಿವೇಕ.”
ಅಥವಾ “ಪರಂಪರೆಯಿಂದ ಬಂದ ಮೌಲ್ಯಗಳು.”
ಅಥವಾ “ಅನಾದಿ ಕಾಲದಿಂದಾನೇ.”
ಅಥವಾ “ಪ್ರಸವವೇದನೆಯಿಂದ ನನ್ನನ್ನ ಹುಟ್ಟಿಸಿದಾಗ.”
ಅಕ್ಷ. “ವೃತ್ತವನ್ನ.”
ಅಥವಾ “ನಿಲುವು ಪಟ್ಟಿ.”