ಜ್ಞಾನೋಕ್ತಿ 21:1-31
21 ರಾಜನ ಹೃದಯ ಯೆಹೋವನ ಕೈಯಲ್ಲಿರೋ ನದಿ,+ಅದನ್ನ ಇಷ್ಟಬಂದ ಕಡೆಗೆ ತಿರುಗಿಸ್ತಾನೆ.+
2 ಮನುಷ್ಯನಿಗೆ ತನ್ನೆಲ್ಲ ದಾರಿ ಸರಿಯಾಗೇ ಇದೆ ಅಂತ ಅನಿಸುತ್ತೆ,+ಆದ್ರೆ ಯೆಹೋವ ಹೃದಯಗಳನ್ನ* ಪರೀಕ್ಷಿಸ್ತಾನೆ.+
3 ಯೆಹೋವನಿಗೆ ಬಲಿಗಳಿಗಿಂತಸರಿಯಾದ, ನ್ಯಾಯವಾದ ಕೆಲಸಗಳೇ ಇಷ್ಟ.+
4 ಸೊಕ್ಕಿನ ಕಣ್ಣು, ಅಹಂಕಾರದ ಹೃದಯ,ಕೆಟ್ಟವ್ರ ದಾರಿ ಬೆಳಗಿಸೋ ದೀಪ, ಇವು ಪಾಪ.+
5 ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ,*+ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.+
6 ಸುಳ್ಳಿಂದ ಸಿಕ್ಕಿದ ಸಿರಿಸಂಪತ್ತು,ಕಣ್ಮರೆ ಆಗೋ ಮಂಜಿನ ಹಾಗೆ, ಪ್ರಾಣ ತೆಗಿಯೋ ಉರ್ಲಿನ ಹಾಗೆ.*+
7 ಕೆಟ್ಟವನು ಕೊಡೋ ಹಿಂಸೆ ಅವನನ್ನ ಗುಡಿಸಿ ಗುಂಡಾಂತರ ಮಾಡುತ್ತೆ,+ಯಾಕಂದ್ರೆ ಅವನು ನ್ಯಾಯದಿಂದ ನಡ್ಕೊಳ್ಳೋಕೆ ಒಪ್ಪಲ್ಲ.
8 ಅಪರಾಧಿ ದಾರಿ ಕೆಟ್ಟದು,ಆದ್ರೆ ತಪ್ಪು ಮಾಡದವನು ಸರಿಯಾದ ದಾರಿಯಲ್ಲಿ ನಡಿತಾನೆ.+
9 ಜಗಳಗಂಟಿ* ಹೆಂಡತಿ ಜೊತೆ ಇರೋದಕ್ಕಿಂತ,ಮಾಳಿಗೆಯ ಒಂದು ಮೂಲೆಯಲ್ಲಿ ಇರೋದೇ ಒಳ್ಳೇದು.+
10 ಕೆಟ್ಟವನು ಕೆಟ್ಟದು ಮಾಡೋಕೆ ತುದಿಗಾಲಲ್ಲಿ ಇರ್ತಾನೆ,+ಪಕ್ಕದ ಮನೆಯವನಿಗೆ ಒಂಚೂರೂ ದಯೆ ತೋರಿಸಲ್ಲ.+
11 ಗೇಲಿ ಮಾಡುವವನಿಗೆ ಶಿಕ್ಷೆ ಆದಾಗ ಅನುಭವ ಇಲ್ಲದವನು ವಿವೇಕಿ ಆಗ್ತಾನೆ,ವಿವೇಕಿಗೆ ತಿಳುವಳಿಕೆ* ಸಿಕ್ಕಿದಾಗ ಅವನು ಜ್ಞಾನ ಪಡ್ಕೊಳ್ತಾನೆ.*+
12 ನೀತಿವಂತನಾದ ದೇವರು ಕೆಟ್ಟವನ ಮನೆಯನ್ನ ನೋಡ್ತಾನೆ,ಕೆಟ್ಟವನನ್ನ ನಾಶ ಮಾಡ್ತಾನೆ.+
13 ದೀನರ ಕೂಗಿಗೆ ಕಿವಿ ಮುಚ್ಕೊಳ್ಳೋನಿಗೆ,ಅವನು ಕೂಗುವಾಗ ಯಾರಿಂದಾನೂ ಉತ್ತರ ಸಿಗಲ್ಲ.+
14 ಗುಟ್ಟಾಗಿ ಕೊಟ್ಟ ಉಡುಗೊರೆ ಕೋಪ ಆರಿಸುತ್ತೆ,+ಗುಟ್ಟಾಗಿ ಕೊಟ್ಟ ಲಂಚ ಕಡುಕೋಪವನ್ನ ಶಾಂತ ಮಾಡುತ್ತೆ.
15 ನ್ಯಾಯವಾಗಿ ನಡ್ಕೊಳ್ಳೋದಂದ್ರೆ ನೀತಿವಂತನಿಗೆ ಖುಷಿ,+ಆದ್ರೆ ಕೆಟ್ಟಕೆಲಸ ಮಾಡುವವನಿಗೆ ಅದು ಅಸಹ್ಯ.
16 ತಿಳುವಳಿಕೆಯ* ದಾರಿಯಿಂದ ತಪ್ಪಿಹೋಗಿರುವವನುಸತ್ತವರ ಜೊತೆ ಸಮಾಧಿ ಸೇರ್ತಾನೆ.+
17 ಮೋಜುಮಸ್ತಿ ಪ್ರೀತಿಸುವವನು ಬಡತನಕ್ಕೆ ಹೋಗ್ತಾನೆ,+ದ್ರಾಕ್ಷಾಮದ್ಯ, ಎಣ್ಣೆಯನ್ನ ಪ್ರೀತಿಸುವವನು ಶ್ರೀಮಂತನಾಗಿ ಏಳಿಗೆ ಆಗಲ್ಲ.
18 ನೀತಿವಂತನನ್ನ ಬಿಡಿಸೋಕೆ ಕೆಟ್ಟವನೇ ಬಿಡುಗಡೆ ಬೆಲೆ,ಪ್ರಾಮಾಣಿಕನಿಗೆ ಮೋಸಗಾರನೇ ಬಿಡುಗಡೆ ಬೆಲೆ.+
19 ಕಿರಿಕಿರಿ ಮಾಡೋ ಜಗಳಗಂಟಿ ಹೆಂಡತಿ ಜೊತೆ ಬದುಕೋದಕ್ಕಿಂತ,ಕಾಡಿಗೆ ಹೋಗಿ ಇರೋದೇ ಒಳ್ಳೇದು.+
20 ವಿವೇಕಿಯ ಮನೇಲಿ ಬೆಲೆಬಾಳೋ ನಿಧಿ, ಎಣ್ಣೆ ಇರುತ್ತೆ,+ಆದ್ರೆ ಮೂರ್ಖ ತನ್ನ ಹತ್ರ ಇರೋದನ್ನೆಲ್ಲ ನುಂಗಿ ನೀರು ಕುಡಿತಾನೆ.+
21 ನೀತಿ, ಶಾಶ್ವತ ಪ್ರೀತಿ ತೋರಿಸುವವರು ನೀತಿವಂತರಾಗ್ತಾರೆ.
ಅವ್ರಿಗೆ ಜೀವ, ಗೌರವ ಸಿಗುತ್ತೆ.+
22 ವಿವೇಕಿ ಭದ್ರವಾದ ಪಟ್ಟಣವನ್ನ ವಶ ಮಾಡ್ಕೊಳ್ತಾನೆ,ಆ ಪಟ್ಟಣದವರು ಯಾವುದನ್ನ ನಂಬಿದ್ರೋ ಅದನ್ನ ನೆಲಕ್ಕೆ ಉರುಳಿಸ್ತಾನೆ.+
23 ಬಾಯಿ, ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಳ್ಳೋನು,ಕಷ್ಟದಿಂದ ತಪ್ಪಿಸ್ಕೊಳ್ತಾನೆ.+
24 ಸೊಕ್ಕು ಇರುವವನನ್ನ, ಜಂಬ ಕೊಚ್ಕೊಳ್ಳೋನನ್ನಮೊಂಡ ಅಹಂಕಾರಿ ಅಂತ ಕರಿತಾರೆ.+
25 ಸೋಮಾರಿಯ ಕೈಗಳು ಕೆಲಸ ಮಾಡೋಕೆ ಇಷ್ಟಪಡಲ್ಲ,ಅವನ ಸೋಮಾರಿತನದಿಂದ ಸತ್ತುಹೋಗ್ತಾನೆ.+
26 ಅವನು ಇಡೀ ದಿನ ಒಂದಲ್ಲ ಒಂದು ವಿಷ್ಯಕ್ಕೆ ಅತಿಯಾಸೆಪಡ್ತಾನೆ,ಆದ್ರೆ ನೀತಿವಂತ ತನ್ನ ಹತ್ರ ಏನೂ ಇಟ್ಕೊಳ್ಳದೆ ಎಲ್ಲ ಕೊಟ್ಟುಬಿಡ್ತಾನೆ.+
27 ಕೆಟ್ಟವನು ಅರ್ಪಿಸೋ ಬಲಿನೇ ಅಸಹ್ಯವಾಗಿ ಇರುವಾಗ,+ಅದನ್ನ ಕೆಟ್ಟ ಉದ್ದೇಶದಿಂದ* ಕೊಟ್ರೆ ಇನ್ನೂ ಅಸಹ್ಯವಾಗಿ ಇರಲ್ವಾ?
28 ಸುಳ್ಳು ಸಾಕ್ಷಿ ನಾಶವಾಗಿ ಹೋಗುತ್ತೆ,+ಆದ್ರೆ ಜಾಗ್ರತೆಯಿಂದ ಕೇಳಿಸ್ಕೊಳ್ಳೋ ವ್ಯಕ್ತಿ ಹೇಳೋ ಸಾಕ್ಷಿ ಬಿದ್ದುಹೋಗಲ್ಲ.
29 ಕೆಟ್ಟವನ ಮುಖದಲ್ಲಿ ನಾಚಿಕೆ ಸುಳಿವೇ ಇರಲ್ಲ,+ನೀತಿವಂತನ ದಾರಿಯಲ್ಲಿ ಅಪಾಯ ಇರಲ್ಲ.+
30 ಯಾವ ವಿವೇಕನೂ, ವಿವೇಚನಾ ಶಕ್ತಿನೂ, ಸಲಹೆನೂ ಯೆಹೋವನ ಮುಂದೆ ನಿಲ್ಲಲ್ಲ.+
31 ಯುದ್ಧದ ದಿನಕ್ಕಾಗಿ ಕುದುರೆಯನ್ನ ಸಿದ್ಧಮಾಡಿದ್ರೂ+ರಕ್ಷಣೆ ಯೆಹೋವನಿಂದಾನೇ!+
ಪಾದಟಿಪ್ಪಣಿ
^ ಅಥವಾ “ಉದ್ದೇಶಗಳನ್ನ.”
^ ಅಥವಾ “ಅವನಿಗೆ ಪ್ರಯೋಜನ ತರುತ್ತೆ.”
^ ಬಹುಶಃ, “ಮರಣವನ್ನ ಹುಡುಕುವವ್ರಿಗೆ, ಕಣ್ಮರೆಯಾಗೋ ಮಂಜಿನ ಹಾಗೆ.”
^ ಅಥವಾ “ಕಿರಿಕಿರಿ ಮಾಡೋ.”
^ ಅಕ್ಷ. “ಒಳನೋಟ.”
^ ಅಥವಾ “ತಾನೇನು ಮಾಡಬೇಕಂತ ಗೊತ್ತಾಗುತ್ತೆ.”
^ ಅಕ್ಷ. “ಒಳನೋಟ.”
^ ಅಥವಾ “ನಾಚಿಕೆಗೆಟ್ಟ ನಡತೆ ಇಟ್ಕೊಂಡು.”