ಜೆಕರ್ಯ 13:1-9

  • ಮೂರ್ತಿಗಳನ್ನ ಮತ್ತು ಸುಳ್ಳು ಪ್ರವಾದಿಗಳನ್ನ ನಾಶ ಮಾಡಿ (1-6)

    • ಸುಳ್ಳು ಪ್ರವಾದಿಗಳು ಅವಮಾನವನ್ನ ಅನುಭವಿಸ್ತಾರೆ (4-6)

  • ಕುರುಬನ ಮೇಲೆ ದಾಳಿ (7-9)

    • ಮೂರನೇ ಭಾಗದ ಜನ್ರನ್ನ ಪರಿಷ್ಕರಿಸಲಾಗುತ್ತೆ (9)

13  ದಾವೀದನ ಮನೆತನದವರು, ಯೆರೂಸಲೇಮಿನ ನಿವಾಸಿಗಳು ತಮ್ಮ ಪಾಪಗಳನ್ನ ಮತ್ತು ಅಶುದ್ಧತೆಯನ್ನ ತೊಳ್ಕೊಳ್ಳೋಕೆ+ ಆಗೋ ತರ ಆ ದಿನ ಒಂದು ಬಾವಿ ತೋಡಲಾಗುತ್ತೆ.” 2  ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ಆ ದಿನ ನಾನು ದೇಶದಲ್ಲಿರೋ ಮೂರ್ತಿಗಳನ್ನ ಹೇಳಹೆಸ್ರಿಲ್ಲದ ಹಾಗೆ ಮಾಡ್ತೀನಿ.+ ಜನ ಇನ್ನು ಯಾವತ್ತೂ ಅವುಗಳನ್ನ ನೆನಪಿಸ್ಕೊಳ್ಳಲ್ಲ. ನಾನು ಪ್ರವಾದಿಗಳನ್ನ ಮತ್ತು ದುಷ್ಟ ಶಕ್ತಿಯನ್ನ ದೇಶದಿಂದ ತೆಗೆದುಹಾಕ್ತೀನಿ.+ 3  ಯಾರಾದ್ರೂ ಮತ್ತೆ ಭವಿಷ್ಯ ಹೇಳೋದಾದ್ರೆ ಅವನನ್ನ ಹೆತ್ತ ತಂದೆತಾಯಿ ‘ನೀನು ಯೆಹೋವನ ಹೆಸ್ರಲ್ಲಿ ಸುಳ್ಳು ಹೇಳಿದ್ರಿಂದ ನೀನು ಜೀವಂತವಾಗಿ ಇರೋದಿಲ್ಲ’ ಅಂತ ಹೇಳ್ತಾರೆ. ಅವನು ಭವಿಷ್ಯ ಹೇಳಿದ್ರಿಂದ ಅವನ ಹೆತ್ತ ತಂದೆತಾಯಿ ಅವನನ್ನ ಇರಿದು ಕೊಂದುಹಾಕ್ತಾರೆ.+ 4  ಆ ದಿನ ಪ್ರವಾದಿಗಳಲ್ಲಿ ಪ್ರತಿಯೊಬ್ಬರು ತಾವು ನೋಡಿದ ದರ್ಶನದ ಬಗ್ಗೆ ಭವಿಷ್ಯ ಹೇಳೋಕೆ ನಾಚಿಕೆಪಡ್ತಾರೆ. ಜನ್ರಿಗೆ ಮೋಸ ಮಾಡುವಾಗ ಹಾಕ್ತಿದ್ದ ಕೂದಲಿಂದ ಮಾಡಿದ ವಿಶೇಷ ಬಟ್ಟೆಯನ್ನ ಅವರು ಇನ್ಮುಂದೆ ಹಾಕಲ್ಲ.+ 5  ಅವ್ರಲ್ಲಿ ಪ್ರತಿಯೊಬ್ಬನೂ ‘ನಾನು ಪ್ರವಾದಿಯಲ್ಲ. ನಾನು ಚಿಕ್ಕವನಿಂದ ಒಬ್ಬ ವ್ಯಕ್ತಿ ಹತ್ರ ದಾಸನಾಗಿ ವ್ಯವಸಾಯ ಮಾಡ್ತಿದ್ದೀನಿ’ ಅಂತಾನೆ. 6  ಯಾರಾದ್ರೂ ಅವನಿಗೆ ‘ನಿನ್ನ ಭುಜಗಳ ಮಧ್ಯ ಇರೋ* ಈ ಗಾಯಗಳು ಹೇಗಾದ್ವು?’ ಅಂತ ಕೇಳಿದ್ರೆ ‘ಇವು ನನ್ನ ಗೆಳೆಯರ* ಮನೇಲಿ ಆದ ಗಾಯಗಳು’ ಅಂತಾನೆ.”  7  ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ಕತ್ತಿಯೇ, ನನ್ನ ಕುರುಬನ ವಿರುದ್ಧ ಎದ್ದೇಳು!+ ನನ್ನ ಸಂಗಡಿಗನ ವಿರುದ್ಧ ಎದ್ದೇಳು! ಕುರುಬನ ಮೇಲೆ ದಾಳಿ ಮಾಡಿ+ ಕುರಿಗಳು ಚದರಿಹೋಗೋ ತರ ಮಾಡು.+ ನಾನು ನನ್ನ ಕೈಯನ್ನ ಅಲ್ಪನ ಮೇಲೆ ಎತ್ತುತ್ತೀನಿ.”  8  ಯೆಹೋವ ಹೀಗೆ ಹೇಳ್ತಿದ್ದಾನೆ “ಇಡೀ ದೇಶದಲ್ಲಿ ಎಷ್ಟು ಜನ್ರಿದ್ದಾರೋ,ಅವ್ರಲ್ಲಿ ಮೂರರಲ್ಲಿ ಎರಡು ಭಾಗದಷ್ಟು ಜನ್ರನ್ನ ಸಾಯಿಸಲಾಗುತ್ತೆ ಮತ್ತು ಅವರು ನಾಶವಾಗಿ ಹೋಗ್ತಾರೆ.* ಮೂರರಲ್ಲಿ ಒಂದು ಭಾಗದಷ್ಟು ಜನ್ರನ್ನ ಬಿಟ್ಟುಬಿಡಲಾಗುತ್ತೆ.  9  ನಾನು ಆ ಮೂರರಲ್ಲಿ ಒಂದು ಭಾಗದ ಜನ್ರನ್ನ ಬೆಂಕಿ ಹಾಕಿನಾನು ಅವ್ರನ್ನ ಬೆಳ್ಳಿ ಶೋಧಿಸೋ ತರ ಶೋಧಿಸ್ತೀನಿ,ಚಿನ್ನವನ್ನ ಪರಿಷ್ಕರಿಸೋ ತರ ಪರಿಷ್ಕರಿಸ್ತೀನಿ.+ ಅವರು ನನ್ನ ಹೆಸ್ರನ್ನ ಬಳಸಿ ಪ್ರಾರ್ಥಿಸ್ತಾರೆ,ನಾನು ಅವ್ರ ಪ್ರಾರ್ಥನೆಗೆ ಉತ್ತರ ಕೊಡ್ತೀನಿ. ‘ಅವರು ನನ್ನ ಜನ್ರು’ ಅಂತ ನಾನು ಹೇಳ್ತೀನಿ.+ ‘ಯೆಹೋವ ನಮ್ಮ ದೇವರು’ ಅಂತ ಅವರು ಹೇಳ್ತಾರೆ.”

ಪಾದಟಿಪ್ಪಣಿ

ಅಕ್ಷ. “ಕೈಗಳ ನಡುವೆ.” ಅದು ಎದೆ ಮೇಲೆ ಅಥವಾ ಬೆನ್ನಿನ ಮೇಲೆ.
ಅಥವಾ “ನನ್ನನ್ನ ಪ್ರೀತಿಸುವವರ.”
ಅಥವಾ “ಸಾಯ್ತಾರೆ.”