ಗಲಾತ್ಯದವರಿಗೆ ಬರೆದ ಪತ್ರ 1:1-24
1 ಅಪೊಸ್ತಲ ಪೌಲನಾದ ನಾನು ಈ ಪತ್ರ ಬರಿತಾ ಇದ್ದೀನಿ. ನನ್ನನ್ನ ಅಪೊಸ್ತಲನಾಗಿ ಆರಿಸ್ಕೊಂಡಿದ್ದು ಮನುಷ್ಯನಲ್ಲ, ಮನುಷ್ಯನ ಮೂಲಕನೂ ಅಲ್ಲ. ಯೇಸು ಕ್ರಿಸ್ತನ ಮೂಲಕ+ ಮತ್ತು ಆತನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದ ನಮ್ಮ ತಂದೆಯಾದ ದೇವರೇ+ ನನ್ನನ್ನ ಆರಿಸ್ಕೊಂಡನು.
2 ನಾನು ನನ್ನ ಜೊತೆ ಇರೋ ಎಲ್ಲ ಸಹೋದರರು ಗಲಾತ್ಯದಲ್ಲಿರೋ ಸಭೆಗಳಿಗೆ ಈ ಪತ್ರ ಬರಿತಾ ಇದ್ದೀವಿ:
3 ನಮ್ಮ ತಂದೆಯಾದ ದೇವರು ಮತ್ತು ಪ್ರಭು ಯೇಸು ಕ್ರಿಸ್ತ ನಿಮ್ಮೆಲ್ರಿಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.
4 ನಮ್ಮ ಪಾಪಗಳನ್ನ ತೆಗೆದುಹಾಕಿ ಈಗಿರೋ ಕೆಟ್ಟ ಲೋಕದಿಂದ*+ ನಮ್ಮನ್ನ ರಕ್ಷಿಸೋಕೆ ಕ್ರಿಸ್ತ ತನ್ನ ಜೀವವನ್ನೇ ಕೊಟ್ಟನು.+ ಇದೇ ನಮ್ಮ ತಂದೆಯಾದ ದೇವರ ಇಷ್ಟವಾಗಿತ್ತು.+
5 ದೇವರಿಗೆ ಯಾವಾಗ್ಲೂ ಗೌರವ ಸಿಗ್ಲಿ. ಆಮೆನ್.
6 ಕ್ರಿಸ್ತನ ಅಪಾರ ಕೃಪೆಯಿಂದ ನಿಮ್ಮನ್ನ ಕರೆದ ದೇವರನ್ನ ನೀವು ಇಷ್ಟು ಬೇಗ ಬಿಟ್ಟು ಬೇರೆ ಯಾವುದೋ ಸಿಹಿಸುದ್ದಿ ಕೇಳಿಸ್ಕೊಳ್ತಿದ್ದೀರಲ್ಲಾ?+ ನನಗೆ ತುಂಬ ಆಶ್ಚರ್ಯ ಆಗ್ತಿದೆ.
7 ನಿಜ ಹೇಳಬೇಕಂದ್ರೆ ಅದು ಸಿಹಿಸುದ್ದಿನೇ ಅಲ್ಲ. ಆದ್ರೆ ಸ್ವಲ್ಪ ಜನ ನಿಮ್ಮ ತಲೆಕೆಡಿಸ್ತಿದ್ದಾರೆ.+ ನಿಮಗೆ ಕ್ರಿಸ್ತನ ಬಗ್ಗೆ ಸಿಹಿಸುದ್ದಿಯನ್ನ ತಪ್ಪುತಪ್ಪಾಗಿ ಹೇಳ್ತಿದ್ದಾರೆ.
8 ನಾವು ನಿಮಗೆ ಸಾರಿದ ಸಿಹಿಸುದ್ದಿ ಬಿಟ್ಟು ಬೇರೆ ಯಾವ ವಿಷ್ಯವನ್ನೂ ಸಿಹಿಸುದ್ದಿ ಅಂತ ನಾವಾಗ್ಲಿ ಸ್ವರ್ಗದ ಒಬ್ಬ ದೇವದೂತನಾಗ್ಲಿ ಸಾರಿದ್ರೆ ಅವನಿಗೆ ಶಾಪ ಸಿಗ್ಲಿ.
9 ನಾನು ಸ್ವಲ್ಪ ಮುಂಚೆ ಹೇಳಿದ್ದನ್ನೇ ಮತ್ತೆ ಹೇಳ್ತಿದ್ದೀನಿ, ನೀವು ನಂಬಿದ ಸಿಹಿಸುದ್ದಿ ಬಿಟ್ಟು ಬೇರೆ ಯಾವ ಸಿಹಿಸುದ್ದಿನ್ನಾದ್ರೂ ಯಾರಾದ್ರೂ ಸಾರಿದ್ರೆ ಅವನಿಗೆ ಶಾಪ ಸಿಗ್ಲಿ.
10 ನಾನು ಜನ್ರನ್ನ ಮೆಚ್ಚಿಸೋಕೆ ಪ್ರಯತ್ನಿಸ್ತಾ ಇದ್ದೀನಾ? ದೇವರನ್ನ ಮೆಚ್ಚಿಸೋಕೆ ಪ್ರಯತ್ನಿಸ್ತಾ ಇದ್ದೀನಾ? ಮನುಷ್ಯರನ್ನ ಖುಷಿಪಡಿಸೋಕೆ ಪ್ರಯತ್ನಿಸ್ತಾ ಇದ್ದೀನಾ? ನಾನಿನ್ನೂ ಮನುಷ್ಯರನ್ನ ಖುಷಿಪಡಿಸ್ತಿದ್ರೆ ಕ್ರಿಸ್ತನ ದಾಸನಲ್ಲ.
11 ಸಹೋದರರೇ, ನಾನು ನಿಮಗೆ ಸಾರಿದ ಸಿಹಿಸುದ್ದಿ ಮನುಷ್ಯನಿಂದ ಬಂದಿದ್ದಲ್ಲ ಅಂತ ತಿಳ್ಕೊಳ್ಳಿ.+
12 ನಾನು ಅದನ್ನ ಯಾವ ಮನುಷ್ಯನಿಂದ ಪಡೀಲೂ ಇಲ್ಲ, ಕಲೀಲೂ ಇಲ್ಲ. ಬದಲಿಗೆ ಯೇಸು ಕ್ರಿಸ್ತನೇ ನನಗೆ ಅದನ್ನ ಹೇಳಿದನು.
13 ನಾನು ಮುಂಚೆ ಯೆಹೂದಿ ಮತದಲ್ಲಿದ್ದಾಗ+ ದೇವರ ಸಭೆಗೆ ತುಂಬ ಹಿಂಸೆ ಕೊಡ್ತಿದ್ದೆ, ಹಾನಿ ಮಾಡ್ತಿದ್ದೆ ಅಂತ ನಿಮಗೆ ಗೊತ್ತೇ ಇದೆ.+
14 ಪೂರ್ವಜರ ಸಂಪ್ರದಾಯಗಳನ್ನ ಪಾಲಿಸೋದ್ರಲ್ಲಿ ನನಗೆ ಬೇರೆಯವ್ರಿಗಿಂತ ತುಂಬ ಹುರುಪಿತ್ತು. ಹಾಗಾಗಿ ನನ್ನ ಜನಾಂಗದಲ್ಲಿ ನನ್ನ ವಯಸ್ಸಲ್ಲಿ ಇದ್ದವ್ರಿಗಿಂತ ನಾನೇ ಯೆಹೂದಿ ಮತವನ್ನ ಅನುಸರಿಸೋದ್ರಲ್ಲಿ ತುಂಬ ಮುಂದಿದ್ದೆ.+
15 ಆದ್ರೆ ನನ್ನನ್ನ ತಾಯಿಯ ಗರ್ಭದಿಂದ ಹೊರಗೆ ತಂದ ದೇವರು ಅಪಾರ ಕೃಪೆ ತೋರಿಸಿ+ ನನ್ನನ್ನ ಆರಿಸ್ಕೊಂಡನು.
16 ಆತನು ನನ್ನಿಂದ ಬೇರೆ ಜನಾಂಗದವ್ರಿಗೆ ತನ್ನ ಮಗನ ಬಗ್ಗೆ ಸಿಹಿಸುದ್ದಿ ಹೇಳೋಕೆ ತುಂಬ ಖುಷಿಪಟ್ಟನು. ಯಾಕಂದ್ರೆ ಅವರು ತನ್ನ ಮಗನನ್ನ ತಿಳ್ಕೊಬೇಕಂತ ದೇವರು ಬಯಸಿದನು.+ ನಾನು ಅದ್ರ ಬಗ್ಗೆ ತಕ್ಷಣ ಬೇರೆಯವ್ರ ಹತ್ರ ವಿಚಾರಿಸೋಕೆ ಹೋಗಲಿಲ್ಲ.
17 ನನಗಿಂತ ಮುಂಚೆ ಅಪೊಸ್ತಲರಾಗಿದ್ದವ್ರ ಹತ್ರ ವಿಚಾರಿಸೋಕೆ ಯೆರೂಸಲೇಮಿಗೂ ಹೋಗಲಿಲ್ಲ. ಬದಲಿಗೆ ನಾನು ಅರೇಬಿಯಕ್ಕೆ ಹೋದೆ, ಆಮೇಲೆ ದಮಸ್ಕಕ್ಕೆ ವಾಪಸ್ ಬಂದೆ.+
18 ಮೂರು ವರ್ಷಗಳಾದ ಮೇಲೆ ನಾನು ಕೇಫನನ್ನ* ಭೇಟಿಯಾಗೋಕೆ+ ಯೆರೂಸಲೇಮಿಗೆ ಹೋದೆ.+ ಅಲ್ಲಿ 15 ದಿನ ಅವನ ಜೊತೆ ಇದ್ದೆ.
19 ಆದ್ರೆ ಪ್ರಭುವಿನ ತಮ್ಮ ಯಾಕೋಬನನ್ನ+ ಬಿಟ್ಟು ಅಪೊಸ್ತಲರಲ್ಲಿ ಬೇರೆ ಯಾರನ್ನೂ ನೋಡಲಿಲ್ಲ.
20 ನಾನೀಗ ನಿಮಗೆ ಬರಿತಿರೋ ವಿಷ್ಯಗಳು ಸುಳ್ಳಲ್ಲ ಅನ್ನೋದಕ್ಕೆ ದೇವರೇ ಸಾಕ್ಷಿ.
21 ಆಮೇಲೆ ನಾನು ಸಿರಿಯ ಮತ್ತು ಕಿಲಿಕ್ಯ ಪ್ರದೇಶಗಳಿಗೆ ಹೋದೆ.+
22 ಆದ್ರೆ ಯೂದಾಯಲ್ಲಿರೋ ಕ್ರಿಸ್ತನ ಸಭೆಯವ್ರಿಗೆ ನನ್ನ ಪರಿಚಯ ಇರಲಿಲ್ಲ.
23 ಆದ್ರೆ ಅವರು ನನ್ನ ಬಗ್ಗೆ “ಮುಂಚೆ ನಮಗೆ ಹಿಂಸೆ ಕೊಡ್ತಿದ್ದ,+ ಸಭೆಗಳನ್ನ ಹಾಳುಮಾಡ್ತಿದ್ದ ವ್ಯಕ್ತಿ ಈಗ ಸಿಹಿಸುದ್ದಿ ಸಾರ್ತಿದ್ದಾನೆ”+ ಅಂತ ಅಷ್ಟೇ ಕೇಳಿಸ್ಕೊಳ್ತಿದ್ರು.
24 ಈ ತರ ಅವರು ನನ್ನ ಬಗ್ಗೆ ತಿಳ್ಕೊಂಡು ದೇವರನ್ನ ಮಹಿಮೆ ಪಡಿಸೋಕೆ ಶುರುಮಾಡಿದ್ರು.