ಕೀರ್ತನೆ 90:1-17
ಸತ್ಯದೇವರ ಸೇವಕ ಮೋಶೆಯ+ ಪ್ರಾರ್ಥನೆ.
90 ಯೆಹೋವನೇ, ತಲತಲಾಂತರಗಳಿಂದ ನೀನೇ ನಮ್ಮ ವಾಸಸ್ಥಾನ.*+
2 ಬೆಟ್ಟಗಳು ಹುಟ್ಟೋಕೂ ಮುಂಚಿನಿಂದಭೂಮಿ ಮತ್ತು ಅದ್ರ ಫಲವತ್ತಾದ ನೆಲವನ್ನ ನೀನು ಅಸ್ತಿತ್ವಕ್ಕೆ ತರೋದಕ್ಕಿಂತ* ಮುಂಚಿನಿಂದ ನೀನೇ ದೇವರು.+
ಹೌದು, ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ* ನೀನೇ ದೇವರಾಗಿ ಇರ್ತಿಯ.+
3 ಮನುಷ್ಯರು ಮತ್ತೆ ಮಣ್ಣಿಗೆ ಸೇರೋ ತರ ನೀನು ಮಾಡ್ತೀಯ.
“ಮನುಷ್ಯರೇ, ಮಣ್ಣಿಗೆ ವಾಪಸ್ ಹೋಗಿ” ಅಂತ ಹೇಳ್ತೀಯ.+
4 ಸಾವಿರ ವರ್ಷಗಳು ನಿನಗೆ ಕಳೆದು ಹೋದ ನಿನ್ನೆ ತರ ಇದೆ,+ರಾತ್ರಿ ಹೊತ್ತಿನ ಕೆಲವು ತಾಸುಗಳ ತರ ಇದೆ.
5 ನೀನು ಅವ್ರನ್ನ ಗುಡಿಸಿ ಗುಂಡಾಂತರ ಮಾಡ್ತೀಯ,+ಅವರು ಕನಸಿನ ತರ ಕಣ್ಮರೆ ಆಗ್ತಾರೆ.
ಮುಂಜಾನೆ ಚಿಗುರೊಡೆಯೋ ಹುಲ್ಲಿನ ತರ ಇದ್ದಾರೆ.+
6 ಅದು ಬೆಳಿಗ್ಗೆ ಹುಟ್ಟಿ, ಹೊಸದಾಗಿ ಚಿಗುರುತ್ತೆ.
ಆದ್ರೆ ಸಂಜೆ ಅಷ್ಟು ಹೊತ್ತಿಗೆ ಒಣಗಿ ಬಾಡಿಹೋಗುತ್ತೆ.+
7 ಯಾಕಂದ್ರೆ ನಿನ್ನ ಕೋಪ ನಮ್ಮನ್ನ ನುಂಗಿಹಾಕುತ್ತೆ+ನಿನ್ನ ಕ್ರೋಧದಿಂದ ನಾವು ಹೆದರಿ ಹೋಗಿದ್ದೀವಿ.
8 ನೀನು ನಮ್ಮ ತಪ್ಪುಗಳನ್ನ ನಿನ್ನ ಮುಂದೆನೇ ಇಟ್ಕೊಂಡಿದ್ದೀಯ,*+ನಾವು ರಹಸ್ಯವಾಗಿ ಮಾಡಿರೋ ಪಾಪಗಳು ನಿನ್ನ ಮುಖದ ಕಾಂತಿಯಿಂದ ಬಯಲಾಗಿವೆ.+
9 ನಿನ್ನ ಕೋಪದಿಂದ ನಮ್ಮ ದಿನಗಳು ಕಮ್ಮಿಯಾಗ್ತಿವೆ,ನಮ್ಮ ವರ್ಷಗಳು ನಿಟ್ಟುಸಿರಿನ ತರ* ಮುಗಿದುಹೋಗ್ತಿವೆ.
10 ನಮ್ಮ ಆಯಸ್ಸು 70 ವರ್ಷ,ಸ್ವಲ್ಪ ಗಟ್ಟಿಮುಟ್ಟಾಗಿದ್ರೆ 80 ವರ್ಷ.+
ಆದ್ರೆ ಆ ವರ್ಷಗಳೂ ಕಷ್ಟ, ಕಣ್ಣೀರಿಂದಾನೇ ತುಂಬಿರುತ್ತೆ.
ಆ ವರ್ಷಗಳು ಬೇಗ ಕಳೆದುಹೋಗುತ್ತೆ ಮತ್ತು ನಾವು ಹಾರಿ ಹೋಗ್ತೀವಿ.+
11 ನಿನ್ನ ಕೋಪ ಎಷ್ಟಿದೆ ಅಂತ ಯಾರಿಂದ ಅಳೆಯೋಕಾಗುತ್ತೆ?
ನಿನ್ನ ಕ್ರೋಧವನ್ನ ಯಾರಿಂದ ಅರ್ಥಮಾಡಿಕೊಳ್ಳೋಕೆ ಆಗುತ್ತೆ? ನಿನ್ನ ಮೇಲಿನ ಭಯಕ್ಕಿಂತ ಅದು ದೊಡ್ಡದು.+
12 ನಾವು ವಿವೇಕ ತುಂಬಿರೋ ಹೃದಯ ಪಡ್ಕೊಳ್ಳೋಕೆನಮ್ಮ ದಿನಗಳನ್ನ ಒಳ್ಳೇ ರೀತಿಯಲ್ಲಿ ಹೇಗೆ ಬಳಸೋದು ಅಂತ ಕಲಿಸ್ಕೊಡು.+
13 ಯೆಹೋವ, ಬಾ!+ ಇನ್ನು ಎಷ್ಟು ಹೊತ್ತು ಕಾಯಿಸ್ತೀಯ?+
ನಿನ್ನ ಸೇವಕರ ಮೇಲೆ ಕನಿಕರ ತೋರಿಸು.+
14 ಮುಂಜಾನೆನೇ ನಿನ್ನ ಶಾಶ್ವತ ಪ್ರೀತಿಯಿಂದ+ ನಮ್ಮನ್ನ ತೃಪ್ತಿಪಡಿಸು,ಆಗ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ ಮತ್ತು ನಾವು ಸಾಯೋ ತನಕ ಖುಷಿಖುಷಿಯಾಗಿ ಇರ್ತಿವಿ.+
15 ನೀನು ಎಷ್ಟು ದಿನ ನಮಗೆ ದುಃಖ ಕೊಟ್ಟಿದ್ದೀಯೋ, ಅಷ್ಟು ದಿನ ನಮಗೆ ಸಂತೋಷವನ್ನೂ ಕೊಡು,+ನಾವು ಎಷ್ಟು ವರ್ಷ ಕಷ್ಟ ಪಟ್ಟಿದ್ದೀವೋ, ಅಷ್ಟು ವರ್ಷ ಖುಷಿಪಡೋ ತರ ಮಾಡು.+
16 ನಿನ್ನ ಸೇವಕರು ನೀನು ಮಾಡೋದನ್ನ ನೋಡ್ಲಿ.
ಅವರ ವಂಶದವರು ನಿನ್ನ ವೈಭವವನ್ನ ಕಾಣಲಿ.+
17 ನಮ್ಮ ದೇವರಾದ ಯೆಹೋವನ ಕೃಪೆ ನಮ್ಮ ಮೇಲಿರಲಿ,ನಾವು ಕೈಹಾಕಿದ ಕೆಲಸಗಳೆಲ್ಲ ಚೆನ್ನಾಗಿ ಆಗಲಿ.
ಆ ಕೆಲಸಗಳೆಲ್ಲ ಅಭಿವೃದ್ಧಿ ಆಗಲಿ.+
ಪಾದಟಿಪ್ಪಣಿ
^ ಬಹುಶಃ, “ನಮ್ಮ ಆಶ್ರಯ.”
^ ಅಥವಾ “ಪ್ರಸವವೇದನೆಯನ್ನ ಸಹಿಸಿ ಅಸ್ತಿತ್ವಕ್ಕೆ ತರೋದಕ್ಕಿಂತ.”
^ ಅಥವಾ “ಯುಗಯುಗಾಂತರಕ್ಕೂ.”
^ ಅಥವಾ “ನಮ್ಮ ತಪ್ಪುಗಳು ನಿಂಗೊತ್ತು.”
^ ಅಕ್ಷ. “ಪಿಸುಮಾತಿನ ತರ.”