ಕೀರ್ತನೆ 48:1-14
ಕೋರಹನ ಮಕ್ಕಳ ಮಧುರ ಗೀತೆ.+
48 ನಮ್ಮ ದೇವರ ಪಟ್ಟಣದಲ್ಲಿ, ಆತನ ಪವಿತ್ರ ಬೆಟ್ಟದಲ್ಲಿ,ಯೆಹೋವ ಅತಿ ಶ್ರೇಷ್ಠ, ತುಂಬ ಹೊಗಳಿಕೆಗೆ ಅರ್ಹ.
2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ.
ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+
3 ನಾನು ಸುರಕ್ಷಿತ ಆಶ್ರಯವಾಗಿದ್ದೀನಿ* ಅಂತದೇವರು ಅದ್ರ ಭದ್ರ ಕೋಟೆಗಳಲ್ಲಿ ಹೇಳಿದ್ದಾನೆ.+
4 ಯಾಕಂದ್ರೆ ನೋಡು! ರಾಜರು ಒಟ್ಟುಸೇರಿದ್ರು,*ಒಟ್ಟಾಗಿ ಮುಂದೆ ಸಾಗಿದ್ರು.
5 ಅವರು ಆ ಪಟ್ಟಣವನ್ನ ನೋಡಿ ಆಶ್ಚರ್ಯಪಟ್ರು,ಕಂಗಾಲಾದ್ರು, ಭಯದಿಂದ ಓಡಿಹೋದ್ರು.
6 ಅಲ್ಲಿ ಅವರು ಗಡಗಡ ನಡುಗಿದ್ರು,ಮಗುವನ್ನ ಹೆರೋ ಸ್ತ್ರೀ ತರ ಯಾತನೆಪಟ್ರು.
7 ಪೂರ್ವದ ಬಿರುಗಾಳಿಯಿಂದ ನೀನು ತಾರ್ಷೀಷಿನ ಹಡಗುಗಳನ್ನ ನಾಶಮಾಡಿ ಬಿಡ್ತೀಯ.
8 ನಾವು ಯಾವುದನ್ನ ಕೇಳಿಸ್ಕೊಂಡ್ವೋ, ಈಗ ಅದನ್ನ ನಮ್ಮ ಕಣ್ಣಾರೆ ನೋಡಿದ್ದೀವಿ,ಸೈನ್ಯಗಳ ದೇವರಾದ ಯೆಹೋವನ ಪಟ್ಟಣದಲ್ಲಿ, ನಮ್ಮ ದೇವರ ಪಟ್ಟಣದಲ್ಲಿ ಅದನ್ನ ಕಣ್ಣಾರೆ ನೋಡಿದ್ದೀವಿ.
ಶಾಶ್ವತವಾಗಿ ಆ ಪಟ್ಟಣ ಸುರಕ್ಷಿತವಾಗಿರೋ ತರ ದೇವರು ಮಾಡ್ತಾನೆ.+ (ಸೆಲಾ)
9 ದೇವರೇ, ನಿನ್ನ ಆಲಯದಲ್ಲಿ,ನಾವು ನಿನ್ನ ಶಾಶ್ವತ ಪ್ರೀತಿಯನ್ನ ನೆನಪಿಸಿಕೊಳ್ತೀವಿ.+
10 ದೇವರೇ, ನಿನ್ನ ಹೆಸ್ರಿನ ಹಾಗೆನಿನಗೆ ಸಿಗೋ ಹೊಗಳಿಕೆನೂ ಭೂಮಿಯ ಕಟ್ಟಕಡೆ ತನಕ ಮುಟ್ಟುತ್ತೆ.+
ನಿನ್ನ ಬಲಗೈ ನೀತಿಯಿಂದ ತುಂಬಿದೆ.+
11 ನಿನ್ನ ತೀರ್ಪುಗಳಿಂದ ಚೀಯೋನ್ ಬೆಟ್ಟ+ ಖುಷಿಪಡಲಿ,ಯೆಹೂದದ ಪಟ್ಟಣಗಳು* ಸಂತೋಷಪಡಲಿ.+
12 ಚೀಯೋನಿನ ಸುತ್ತ ನಡೆದು, ಅದ್ರ ಸುತ್ತ ತಿರುಗಿ,ಅದ್ರ ಗೋಪುರಗಳನ್ನ ಲೆಕ್ಕಹಾಕಿ.+
13 ಅದ್ರ ಭದ್ರವಾದ ಗೋಡೆಗಳ*+ ಕಡೆ ಗಮನ ಕೊಡಿ.
ಅದ್ರ ಭದ್ರ ಕೋಟೆಗಳನ್ನ ಪರೀಕ್ಷಿಸಿ ನೋಡಿ,ಆಗ ನೀವು ಅದ್ರ ಬಗ್ಗೆ ಮುಂದಿನ ಪೀಳಿಗೆಗೆ ಹೇಳೋಕೆ ಆಗುತ್ತೆ.
14 ಯಾಕಂದ್ರೆ ಈ ದೇವರೇ ಶಾಶ್ವತಕ್ಕೂ ನಮ್ಮ ದೇವರು.+
ಸದಾಕಾಲಕ್ಕೂ* ನಮಗೆ ದಾರಿ ತೋರಿಸ್ತಾನೆ.+
ಪಾದಟಿಪ್ಪಣಿ
^ ಅಥವಾ “ಎತ್ತರ ಸ್ಥಳವಾಗಿದ್ದೀನಿ.”
^ ಅಥವಾ “ಮಾತಾಡ್ಕೊಂಡು ಬಂದಿದ್ದಾರೆ.”
^ ಅಕ್ಷ. “ಹೆಣ್ಣುಮಕ್ಕಳು.”
^ ಅಕ್ಷ. “ರಕ್ಷಣೆಯ ಮಣ್ಣುದಿಬ್ಬದ.”
^ ಬಹುಶಃ, “ನಾವು ಸಾಯೋ ತನಕ.”